ಅಪಪ್ರಚಾರಕ್ಕೆ ಕಿವಿಕೊಡದಿರಿ: ನಿಂಗಯ್ಯ
ಕ.ಪ್ರ.ವಾರ್ತೆ, ಮೂಡಿಗೆರೆ, ಜೂ.9 ನಾನು ಯಾವುದೇ ಕಾರಣಕ್ಕೂ ಮಾರಾಟಕ್ಕಿಲ್ಲ, ನನ್ನ ಮೇಲೆ ಮಾಡುತ್ತಿರುವ ಅಪ ಪ್ರಚಾರಕ್ಕೆ ಕಿವಿಕೊಡಬೇಡಿ, ಸ್ವಾರ್ಥ ರಾಜಕಾರಣ ನನ್ನಲಿಲ್ಲ ಎಂದು ಶಾಸಕ ಬಿ. ಬಿ. ನಿಂಗಯ್ಯ ತಿಳಿಸಿದರು.
ಕಳಸದ ದುರ್ಗಾ ಮಂಟಪದಲ್ಲಿ ಹೋಬಳಿ ಮಟ್ಟದ ಸಾಮಾನ್ಯ ಜನರ ಕುಂದು ಕೊರತೆ ಬಗ್ಗೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಸಕರಾದ ಕೂಡಲೇ ನನ್ನನ್ನು ಕಾಂಗ್ರೆಸ್ ರು. 25 ಕೋಟಿ ಗಳಿಗೆ ಕೊಂಡುಕೊಂಡಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೆ ಈಗ ಮಾರಾಟದ ಬೆಲೆ ರು. 100 ಕೋಟಿಗೆ ಕೊಂಡುಕೊಂಡಿದ್ದಾರೆ ಎನ್ನುವ ಅಪಪ್ರಚಾರ ತಾಲೂಕಿನಾದ್ಯಂತ ಹಬ್ಬಿಸಲಾಗಿದೆ.
ಅಪಪ್ರಚಾರ ಬೇಡ: ಆದರೆ ಇದು ಸತ್ಯಕ್ಕೆ ದೂರವಾದ ಮಾತು ನಾನು ಯಾವುದೇ ಕಾರಣಕ್ಕೂ ಮಾರಟಕ್ಕಿಲ್ಲ. ಮೂಡಿಗೆರೆ ತಾಲೂಕು ಜನತೆ ನನ್ನನ್ನು ತಾಲೂಕಿನ ಅಭಿವೃದ್ಧಿ ಕಾರ್ಯಕ್ಕಾಗಿ ಆರಿಸಿದ್ದಾರೆ. ಆದ್ದರಿಂದ ಇಂತಹ ಅಪಪ್ರಚಾರ ಬಿಟ್ಟು ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿ ಎಂದರು.
ಹೋಬಳಿಯ ಇನಾಂ ಭೂಮಿ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಒತ್ತುವರಿ ಸಮಸ್ಯೆ, ಆಟೋ ನಿಲ್ದಾಣದ ಸಮಸ್ಯೆ, ಈ ಭಾಗದಲ್ಲಿ ಬಹುತೇಕ ರಸ್ತೆಗಳ ಡಾಮರೀಕರಣ, ಸೇತುವೆಗಳು ನಿರ್ಮಾಣವಾಗಬೇಕಿದೆ. ಆದ್ದರಿಂದ ಇಲ್ಲಿನ ಎಲ್ಲಾ ಮೂಲ ಸಮಸ್ಯೆಗಳ ಬಗ್ಗೆ ಹೆಚ್ಚಿನ ಒತ್ತು ಕೊಟ್ಟು ಸಮಸ್ಯೆ ಪರಿಹಾರಕ್ಕಾಗಿ ಬದ್ದನಾಗಿದ್ದೇನೆ.ಅಲ್ಲದೆ ಜೂನ್ 16ಕ್ಕೆ ಮತ್ತೆ ಈ ಭಾಗಕ್ಕೆ ಬಂದು ಇಲ್ಲಿ ನಡೆದಿರುವ ಕಾಮಗಾರಿ ಬಗ್ಗೆ ಪರಿಶೀಲನೆ ನಡೆಸುತ್ತೇನೆ ಎಂದರು.
ಮೂಡಿಗೆರೆ ತಾಲೂಕು ತಹಸೀಲ್ದಾರ್ ರುದ್ರಪ್ಪಾಜಿ ರಾವ್, ತಾಲೂಕಿನ ಎಲ್ಲಾ ಸರ್ಕಾರಿ ಅಧಿಕಾರಿಗಳು ನಿಮ್ಮ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇವೆ. ಈ ಹಿಂದೆ ಏನು ಆಗಿದೆಯೋ ಅದು ಬೇಕಾಗಿಲ್ಲ, ಮುಂದೆ ಆಗುವ ಅಭಿವೃದ್ಧಿ ಕೆಲಸಗಳತ್ತ ಗಮನ ಕೊಡುತ್ತೇವೆ ಎಂದರು.
ತಾಪಂ ಅಧ್ಯಕ್ಷ ಎಂ.ಎ. ಶೇಷಗಿರಿ, ಗ್ರಾಪಂ ಉಪಾಧ್ಯಕ್ಷ ಅನಿಲ್ ಗೇವಿನ್, ರಾಜೇಂದ್ರ ಹಿತ್ಲುಮಕ್ಕಿ, ಜಿಪಂ ಸದಸ್ಯರಾದ ಕವಿತಾ ಚಂದ್ರು, ತಾಪಂ ಸದಸ್ಯೆ ಅನ್ನಪೂರ್ಣ ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

