ಮಕ್ಕಳಲ್ಲಿ ಕಲಿಯುವ ಉತ್ಸಾಹ ಮೂಡಿಸಿ
ಕ.ಪ್ರ.ವಾರ್ತೆ ಕಡೂರು ಜೂ.10 ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಕಲಿಯುವ ಶ್ರದ್ಧೆ ಮತ್ತು ಗುರು ಹಿರಿಯರನ್ನು ಗೌರವಿಸುವ ಭಾವನೆ ಮೂಡಿಸಿದಲ್ಲಿ ಅವರು ದೇಶದ ಆಸ್ತಿಯಾಗಿ ಮುಂದೆ ಉತ್ತಮ ಭವಿಷ್ಯ ರೂಪಿಸಿಕೊಳ್ಳುತ್ತಾರೆ ಎಂದು ಶೃಂಗೇರಿ ಆದಿಚುಂಚನಗಿರಿ ಶಾಖಾ ಮಠದ ಗುಣನಾಥ ಶ್ರೀ ಹೇಳಿದರು.
ಅವರು ಕಡೂರು ಪಟ್ಟಣದ ಮಲ್ಲೇಶ್ವರ ರಸ್ತೆಯಲ್ಲಿರುವ ಬಿಜಿಎಸ್ ವಿದ್ಯಾ ಸಂಸ್ಥೆಯಲ್ಸಿ ಅಕ್ಷರಾಭ್ಯಾಸ ಮತ್ತು ಹೊಸ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ, ಮಕ್ಕಳ ಅಕ್ಷರಭ್ಯಾಸಕ್ಕೆ ಚಾಲನೆ ನೀಡಿ ಮಾತನಾಡಿದರು.
ಗುರುಕುಲ ಪದ್ಧತಿ: ಹಿಂದೆ ಗುರುಕುಲ ಪದ್ಧತಿಯಲ್ಲಿ ಮಕ್ಕಳಿಗೆ ಅಕ್ಷರಭ್ಯಾಸ ಕಲಿಸುವುದು ಮುಖ್ಯವಾಗಿತ್ತು. ಗುರುಕುಲದಲ್ಲಿ ವಿದ್ಯಾರ್ಥಿಗಳಿಂದ ಮರಳಿನ ಮೇಲೆ ಬರೆಸುವ ಶಿಕ್ಷಣ ಪದ್ಧತಿ ಹಿಂದಿನ ಪೂರ್ವಾಶ್ರಮದಿಂದಲೂ ನಡೆದುಕೊಂಡು ಬಂದಿದೆ. ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ವಿದ್ಯೆಯ ಬಗ್ಗೆ ಆಸಕ್ತಿ ಮತ್ತು ಶ್ರದ್ಧೆ ಹೊಂದಿದಲ್ಲಿ ಆತನ ಬದುಕು ಭವಿಷ್ಯದಲ್ಲಿ ಉತ್ತಮ ಬೆಳಕು ಕಾಣುತ್ತದೆ ಎಂದರು.
ವಿದ್ಯೆ ಇಲ್ಲದೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ವಿದ್ಯೆ ಯಾರೂ ಕದಿಯಲಾಗದ ಆಸ್ತಿಯಾಗಿದ್ದು, ಪೋಷಕರು ಇದನು ಮನದಟ್ಟು ಮಾಡಿಕೊಂಡು ತಮಗೆ ಎಷ್ಟೇ ಕಷ್ಟವಿದ್ದರೂ, ಮಕ್ಕಳಿಗೆ ವಿದ್ಯೆ ಎಂಬ ಸಂಪತ್ತನ್ನು ಕೊಡಿಸಬೇಕು ಎಂದರು.
ಅಕ್ಷರಾಭ್ಯಾಸ: ಅಧ್ಯಕ್ಷತೆ ವಹಿಸಿದ್ದ ಬಿಜಿಎಸ್ ಶಾಲಾ ಕಾಲೇಜು ಮುಖ್ಯಸ್ಥರಾದ ಸುಮಿತ್ರ ಮಾತನಾಡಿ, ಶಾಲೆ ಬಗ್ಗೆ ಮತ್ತು ಕಳೆದ ಬಾರಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಮಕ್ಕಳು ಮಾಡಿರುವ ಸಾಧನೆಯ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಗುರುಗಳು ಅಕ್ಷರಭ್ಯಾಸ ಮಾಡಿಸಿದರು.
ಪ್ರಾಂಶುಪಾಲ ನಾಗರಾಜ, ಬಸವರಾಜು ಮೊದಲಾದವರು ಉಪಸ್ಥಿತರಿದ್ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಮಾರಂಭಕ್ಕೂ ಮುನ್ನ ಶ್ರೀಗಳನ್ನು ಶಾಲೆಯ ವಿದ್ಯಾರ್ಥಿಗಳು, ಶಾಲಾ ಕಾಲೇಜಿನ ಸಿಬ್ಬಂದಿ ಪೋಷಕರು ಗೌರವದಿಂದ ಬರಮಾಡಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

