ಚಿಕ್ಕಮಗಳೂರು

ಗುಟ್ಕಾ ನಿಷೇಧ: ರೈತರ ಬದುಕು ದುಸ್ತರ

Published On :

ಕ.ಪ್ರ.ವಾರ್ತೆ  ಕೊಪ್ಪ  ಜೂ.11
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ತರಾತುರಿಯ ನಿರ್ಧಾರಗಳನ್ನು ತೆಗೆದುಕೊಂಡು ಮಲೆನಾಡಿನ ಬಡರೈತರ ಬದುಕನ್ನು ದುಸ್ತರಗೊಳಿಸುವ ನಿರ್ಧಾರ ತೆಗೆದು ಕೊಂಡಿರುವುದು ವಿಷಾದನೀಯ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಟಿ. ರಾಜೇಂದ್ರ ವಿಷಾದ ವ್ಯಕ್ತಪಡಿಸಿದರು.
 ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒತ್ತುವರಿ ತೆರವು ಕಾರ್ಯಚಾರಣೆ ಅವೈಜ್ಞಾನಿಕವಾಗಿದ್ದು, ಸಾವಿರಾರು ಎಕರೆ ಒತ್ತುವರಿ ಮಾಡಿದ ಕಂಪನಿ ಎಸ್ಟೇಟ್‌ನವರ ತಂಟೆಗೆ ಹೊಗದೇ ಕೇವಲ ಸಣ್ಣ ರೈತರು ತಮ್ಮ ಜೀವನೋಪಾಯಕ್ಕೆ ಒತ್ತುವರಿ ಮಾಕೊಂಡಿರುವ ಜಾಮೀನುಗಳನ್ನು ಕುಲ್ಲಾ ನೆಪದಲ್ಲಿ ಜಮೀನಿನಲ್ಲಿ ಬೆಳೆದ ಮರ ಗಿಡಗಳನ್ನು ನಾಶಮಾಡುತ್ತಿರುವ ಅಧಿಕಾರಿಗಳ ಕ್ರಮ ಅವಮಾನವೀಯಾಗಿದೆ, ಇದನ್ನು ಕೂಡಲೇ ನಿಲ್ಲಿಸಿ ಬೇಕು ಎಂದು ಒತ್ತಾಯಿಸಿದರು.
 ಮಳೆನಾಡಿನ ಜನರ ಬದುಕು ಮತ್ತು ವ್ಯವಸ್ಥೆಯ ಉಳಿವಿಗಾಗಿ ರಾಜಕಾರಣಿಗಳು ಮತ್ತು ಚಿಂತಕರು ಸೇರಿ ಸಮುದಾಯಾಧರಿತ ಚಳುವಳಿ ರೂಪಿಸುವ ಅವಶ್ಯಕತೆ ಇರುವುದರಿಂದ ಬರುವ ಭಾನುವಾರ ಪಟ್ಟಣದ ಪುರಭವನದಲ್ಲಿ ಪಕ್ಷತೀತಾವಾಗಿ ಸಭೆ ಸೇರಲು ಉದ್ದೇಶಿಸಲಾಗಿದೆ ಎಂದು ಹೇಳಿದರು. ಕ್ಯಾನಸ್ಸರ್‌ಗೆ ಕಾರಣವಾದ ತಂಬಾಕನ್ನು ನಿಷೇಧ ಮಾಡುವ ಬದಲು ಗುಟ್ಕಾ ನಿಷೇಧ ಮಾಡವ ನಿರ್ಧಾರವನ್ನು ತೆಗೆದು ಕೊಂಡು ಅಡಕೆ ಬೆಳೆಗಾರನ್ನು ಇನ್ನಷ್ಟು ದುಸ್ಥಿತಿಗೆ ತಳ್ಳಿದ್ದಾರೆ ಎಂದು ಆರೋಪಿಸಿದರು.
 ಈ ವಿಚಾರವಾಗಿ ಕಾಂಗ್ರೆಸ್ ನಾಯಕರಲ್ಲಿ ಪ್ರಶ್ನಿಸಿದರೆ ಸುಪ್ರೀಂ ಕೋರ್ಟ್ ಆದೇಶ ಎಂದು ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಆದರೆ ಸುಪ್ರೀಂ ಕೋರ್ಟನಲ್ಲಿ ಜು.12 ರಂದು ಈ ವಿಚಾರ ವಿಚಾರಣೆಗೆ ಕರೆದಿರುವುದು ತಿಳಿದು ಬಂದಿದೆ, ಕೋರ್ಟ್ ಆದೇಶ ನೀಡುವ ಮೊದಲೇ ಗುಟ್ಕಾ ನಿಷೇಧ ಮಾಡಿರುವುದು ಕಾಂಗ್ರೆಸ್ ನಾಯಕರು ತಂಬಾಕು ಕಂಪನಿಗಳ ಲಾಭಿಗೆ ಮಣಿದು ತರಾತುರಿಯಲ್ಲಿ ಈ ನಿರ್ಧಾರ ತೆಗೆದು ಕೊಂಡಿದೆ ಎಂಬುದು ಮೇಲ್ನೋಟಕ್ಕೆ ವ್ಯಕ್ತವಾಗುತ್ತಿದೆ ಎಂದರು.
 ಗೋಷ್ಠಿಯಲ್ಲಿ ಪಪಂ ಸದಸ್ಯೆ ಆಶಾ ಪೇರಿಸ್, ಕೆ.ವೈ. ರಮೇಶ್, ವಾಸುದೇವ್ ಇದ್ದರು.

14ರಂದು ಪ್ರತಿಭಟನೆ
ತರೀಕೆರೆ: ಗುಟ್ಕಾ ಉತ್ಪಾದನೆ ಮತ್ತು ಮಾರಾಟವನ್ನು ನಿಷೇಧಿಸಿದ ರಾಜ್ಯ ಸರ್ಕಾರ ವಿರುದ್ಧ ಜೂನ್ 14 ರಂದು ತಾಲೂಕು ಬಿ.ಜೆ.ಪಿ. ವತಿಯಿಂದ ಪಟ್ಟಣದಲ್ಲಿ  ಪ್ರತಿಭಟನಾ ಮೆರವಣಿಗೆ ಏರ್ಪಡಿಸಲಾಗಿದೆ.
ಗುಟ್ಕಾ ಹೆಸರಿನಲ್ಲಿ ಲಕ್ಷಾಂತರ ಮಂದಿ ಅಡಕೆ ಬೆಳೆಗಾರರು ಮತ್ತು ಅಡಕೆ ಬೆಳೆಯ ಮೇಲೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅವಲಂಬಿತರಾಗಿದ್ದಾರೆ. ಅಡಕೆ ದೇಶದ ಒಂದು ವಾಣಿಜ್ಯ ಬೆಳೆಯಾಗಿದೆ, ಆದ್ದರಿಂದ ಗುಟ್ಕಾ ನಿಷೇಧ ಮತ್ತು ಜಿಲ್ಲೆಯಲ್ಲಿ ನಡೆದಿರುವ ಅವೈಜ್ಞಾನಿಕ ಒತ್ತುವರಿ ತೆರುವು ನೀತಿ ವಿರುದ್ಧ  ಅಡಕೆ ಬೆಳೆಗಾರರು, ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ತಾಲೂಕು ಬಿಜೆಪಿ ಅಧ್ಯಕ್ಷ ಆರ್. ದೇವಾನಂದ್ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.