ಮಳಿಗೆಯಲ್ಲಿ ಅನಧಿಕೃತ ವ್ಯಾಪಾರ: ಆರೋಪ
ಕ.ಪ್ರ,ವಾರ್ತೆ ಕೊಪ್ಪ ಜೂ.13:
ಪಟ್ಟಣದ ಬಸ್ಸ್ಟಾಂಡ್ ಬಳಿ ಪಪಂಗೆ ಸೇರಿದ ಅಂಗಡಿ ಮಳಿಗೆಗಳಲ್ಲಿ ಅನಧಿಕೃತವಾಗಿ ವ್ಯಾಪಾರ ವಹಿವಾಟು ನಡೆಸುತ್ತಿದ್ದು, ಇದರಿಂದ ಪಪಂ ಬೊಕ್ಕಸಕ್ಕೆ ನಷ್ಟವಾಗುತ್ತಿರುವುದರಿಂದ ತಕ್ಷಣದಲ್ಲಿ ತೆರವುಗೊಳಿಸಿ ಹರಾಜಿನ ಮೂಲಕ ವಿಲೇವಾರಿ ಮಾಡಬೇಕು ಎಂದು ಆಗ್ರಹಿಸಿ ಪಟ್ಟಣದ ಸಾರ್ವಜನಿಕರು ಪಪಂ ಮುಖ್ಯಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಪಟ್ಟಣದ ಬಸ್ಟಾಂಡ್ ಮುಂಭಾಗದಲ್ಲಿರುವ ಪಪಂ ವಾಣಿಜ್ಯ ಮಳಿಗೆ ಪೈಕಿ ಮಾರ್ಕೆಟ್ ರಸ್ತೆಗೆ ಅಭಿಮುಖವಾಗಿರುವ ಮಳಿಗೆ ಸಂಖ್ಯೆ 5, ಪಪಂ ದಾಖಲೆಯ ಪ್ರಕಾರ ಖಾಲಿ ಇದೆ ಅದರೆ ಸದರಿ ಮಳೆಗೆಯಲ್ಲಿ ತರಕಾರಿ ವ್ಯಾಪರಿಯೊಬ್ಬರು ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ವಿಲೇವಾರಿ ಅಗತ್ಯ: ಖಾಲಿ ಇರುವ ಮಳಿಗೆಗಳನ್ನು ಸಾರ್ವಜನಿಕ ಮತ್ತು ಪಪಂ ಆದಾಯದ ಹಿತದೃಷ್ಟಿಯಿಂದ ಬಹಿರಂಗ ಹಾರುಜು ಮೂಲಕ ವಿಲೇವಾರಿ ಮಾಡಬೇಕೆಂಬ ನಿಯಮವಿದ್ದರೂ, ಈ ರೀತಿ ಅನಧಿಕೃತವಾಗಿ ಅಕ್ರಮಿಸಿಕೊಡು ವ್ಯಾಪಾರ ವಹಿವಾಟು ನಡೆಸುತಿದ್ದಾರೆ.
ಆದರೂ, ಪಪಂ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವುದರಿಂದ ಇದರಲ್ಲಿ ಅಧಿಕಾರಿಗಳು ಶಾಮೀಲಾಗಿರುವ ಅನುಮಾನ ವ್ಯಕ್ತವಾಗುತ್ತಿದೆ.
ಸದರಿ ಮಳೆಗೆಯನ್ನು ಖುಲ್ಲಾ ಮಾಡಿಸಿ, ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಬೇಕು. ಇದೇ ರೀತಿ ಬಸ್ಸು ನಿಲ್ದಾಣದ ಮುಂಭಾಗದ ಕೆಲವು ಮಳಿಗೆ ಹಾಗೂ ಟಾಕೀಸ್ ರಸ್ತೆ ಮಳಿಗೆ ಸಂಖ್ಯೆ 2ರಲ್ಲಿ ಅನಧಿಕೃತವಾಗಿ ವ್ಯಾಪಾರ ಇದೇ ರೀತಿ ಮುಂದುವರಿಸಿದರೆ ಈ ಪ್ರಸ್ತಾವನೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

