ವಿದ್ಯಾರ್ಥಿಗಳಿಗೆ ಕಲಾಂ ಸ್ಫೂರ್ತಿ ಆಗಲಿ: ರಾಜಾರಾಂ
ಚಿಕ್ಕಮಗಳೂರು: ಇಂದಿನ ವಿದ್ಯಾರ್ಥಿಗಳಿಗೆ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಆದರ್ಶ, ಸ್ಫೂರ್ತಿಯಾಗಬೇಕು ಎಂದು ಸತ್ಯಸಾಯಿ ವಿದ್ಯಾಕೇಂದ್ರದ ದಕ್ಷಿಣ ಪ್ರಾಂತ ನಿರ್ದೇಶಕ ಡಾ. ರಾಜಾರಾಂ ವಿದ್ಯಾರ್ಥಿಗಳಿಗೆ ಸಲಹೆ ಕರೆ ನೀಡಿದ್ದಾರೆ. ನಗರದ ಹೊರವಲಯದ ಸಾಯಿ ಏಂಜಲ್ಸ್ ಶಾಲೆಯ 20ನೇ ವರ್ಷಾಚರಣೆ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸತ್ಯ, ಧರ್ಮ, ಶಾಂತಿಯಲ್ಲಿ ನಂಬಿಕೆ ಇಟ್ಟು ಸಾಮಾನ್ಯ ಮನುಷ್ಯರಾಗಿದ್ದ ಕಲಾಂ ಅವರು ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಅವರಲ್ಲಿದ್ದ ಗುಣವಂತಿಕೆಗೆ ದೇಶದ ರಾಷ್ಟ್ರಪತಿ ಸ್ಥಾನ ದೊರಕಿತು. ಆ ಸಂದರ್ಭದಲ್ಲಿ ಅವರಿಗೆ ಶಿಕ್ಷಣ ನೀಡಿದ ಗುರುಗಳನ್ನು ಕರೆಸಿಕೊಂಡು ಅವರ ಸಮ್ಮುಖದಲ್ಲಿ ಹುದ್ದೆ ಅಲಂಕರಿಸಿದ ಆದರ್ಶ ವ್ಯಕ್ತಿ ಎಂದರು.
ಉತ್ತಮ ಅವಕಾಶ: ಜೀವನದಲ್ಲಿ ಕಷ್ಟಪಟ್ಟು ಬೆಳೆದರೆ ಮುಂದೊಂದು ದಿನ ಉತ್ತಮ ಅವಕಾಶ ಲಭಿಸುವುದರಲ್ಲಿ ಸಂದೇಹ ಬೇಡ. ಇದೇ ರೀತಿ ಸತ್ಯ, ಧರ್ಮ, ಶಾಂತಿ ಬಾಬಾ ರವರ ತತ್ವ. ಇಂತಹ ಉತ್ತಮ ಗುಣಗಳನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಭವಿಷ್ಯ ರೂಪಿಸಿಕೊಳ್ಳಿ ಎಂದು ಹೇಳಿದರು.
ಮುಖ್ಯ ಪ್ರಾಂಶುಪಾಲರಾದ ವಿಜಯಾ ನಾಗೇಶ್ ಮಾತನಾಡಿ, ಮನುಷ್ಯ ಯಾವುದೇ ಸಾಧನೆ ಮಾಡಬೇಕಾದರೆ ನಿರ್ದಿಷ್ಟ ಗುರಿ ಹೊಂದಿರಬೇಕು. ಅದರ ಹಿಂದೆ ಅಷ್ಟೇ ಶ್ರಮ ಅಡಗಿರಬೇಕು. ಆಗ ಮಾತ್ರ ಯಶಸ್ಸಿನ ದಡ ಸೇರಲು ಸಾಧ್ಯ ಎಂದರು.
ಪ್ರಾಂಶುಪಾಲರಾದ ಯಾಮಿನಿ ಸವೂರ್ ಮಾತನಾಡಿ, 2 ದಶಕಗಳ ಕಾಲ ಶಿಕ್ಷಣ ಸಂಸ್ಥೆಯನ್ನು ಯಶಸ್ವಿಯಾಗಿ ನಿರ್ವಹಿಸಿಕೊಂಡು ಬಂದಿರುವುದು ಶ್ಲಾಘನಾರ್ಹ.
20 ವರ್ಷದ ಹಿಂದೆ ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಇಂದು ತಮ್ಮ ಸ್ವಂತ ಕಾಲಮೇಲೆ ನಿಂತಿದ್ದಾರೆ ಎಂದರೆ ಕಲಿಸಿದ ಶಿಕ್ಷಕರಿಗೆ ಅದಕ್ಕಿಂತ ದೊಡ್ಡದು ಇನ್ನೇನುಬೇಕಿದೆ ಎಂದು ಸಂತಸ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

