'ಚಾರ್ಮಾಡಿ ಘಾಟ್ನಲ್ಲಿ ಪೊಲೀಸ್ ನಿಯೋಜಿಸಿ'
ಮೂಡಿಗೆರೆ: ತಾಲೂಕಿನ ಬಣಕಲ್, ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಚಾರ್ಮಾಡಿ ಘಾಟ್ನ ಕೊಟ್ಟಿಗೆಹಾರದಿಂದ ಚಾರ್ಮಾಡಿವರೆಗೆ ಸುಮಾರು 22 ಕಿ.ಮೀ. ಕಡಿದಾದ ತಿರುವು ದಟ್ಟ ಅರಣ್ಯವಿರುವ ಈ ಪ್ರದೇಶದಲ್ಲಿ ಅಪರಾಧಗಳ ಸಂಖ್ಯೆ ಅಧಿಕವಾಗಿದೆ. ಪೊಲೀಸ್ ವಿಶೇಷ ಗಸ್ತು ಪಡೆ ವಾಹನವನ ನಿಯೋಜಿಸಿದಲ್ಲಿ ಅಪರಾಧ ನಿಯಂತ್ರಣ ಸಾಧ್ಯ ಎಂದು ಮುಸ್ಲಿಂ ಹಿತರಕ್ಷಣಾ ಸಮಿತಿ ಸದಸ್ಯ ಕಿರುಗುಂದ ಅಬ್ಬಾಸ್ ಅಭಿಪ್ರಾಯಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ ಎರಡು ದಿನಗಳ ಹಿಂದೆ ಭದ್ರಾವತಿಯ ಮಮತಾ (25) ಎಂಬ ಮಹಿಳೆಯನ್ನು ಕೊಲೆ ಮಾಡಿ ಮಲಯ ಮಾರುತ ವಸತಿಗೃಹದ ಸಮೀಪದ ಪ್ರಪಾತದಲ್ಲಿ ಎಸೆದು ಹೋಗಲಾಗಿದೆ.
ಮೃತ ಶರೀರ ಅರೆಬೆತ್ತಲೆಯಾಗಿ ಬಣಕಲ್ ಪೊಲೀಸರಿಗೆ ದೊರಕಿದೆ. ಹದಿನೈದು ದಿನಗಳ ಹಿಂದೆ ಶಿವಮೊಗ್ಗ ಮೂಲದ ಇಬ್ಬರು ಯುವಕರು ತಮ್ಮ ಬೈಕ್ನಲ್ಲಿ ಧರ್ಮಸ್ಥಳಕ್ಕೆ ತೆರಳಿ ವಾಪಸ್ ಬರುವಾಗ ಇದೇ ಘಾಟ್ ರಸ್ತೆಯಲ್ಲಿ ಯಾವುದೋ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದರು.
ಹೀಗೆ ನಿರಂತರವಾಗಿ ಈ ವ್ಯಾಪ್ತಿಯಲ್ಲಿ ಪ್ರಕರಣಗಳು ನಡೆಯುತ್ತಿದ್ದರೂ ಪೊಲೀಸರು ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳುವುದರಲ್ಲಿ ಹಾಗೂ ಈ ಘಾಟ್ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಮತ್ತು ಪ್ರಯಾಣಿಕರಿಗೆ ರಕ್ಷಣೆ ಒದಗಿಸುವುದರಲ್ಲಿ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ರಸ್ತೆಯಲ್ಲಿ ಕೆಲ ಪುಂಡರು ಇಲ್ಲೇ ಕುಡಿದು ತೂರಾಡುತ್ತ ವಾಹನಗಳನ್ನು ತಡೆದ ಪ್ರಯಾಣಿಕರಿಗೆ ಹಲ್ಲೆ ನಡೆಸುವುದು, ಪ್ರಯಾಣಿಕರ ಬಳಿ ಇರುವ ಹಣ ಚಿನ್ನವನ್ನು ದೋಚುವುದು, ಕತ್ತಿ ಹಿಡಿದು ಪ್ರಯಾಣಿಕರನ್ನು ಬೆದರಿಸುವುದು ಮಾಮೂಲಾಗಿದೆ ಎಂದಿದ್ದಾರೆ.
ಕ್ರಮ ಕೈಗೊಂಡಿಲ್ಲ: ಈ ಹಿಂದೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಅಧೀಕ್ಷಕರು ಸೇರಿದಂತೆ ಮೂಡಿಗೆರೆ ವೃತ್ತ ನಿರೀಕ್ಷರಿಗೆ, ಬಣಕಲ್ ಪೊಲೀಸ್ ಠಾಣೆಗೆ, ಅರ್ಜಿ ಸಲ್ಲಿಸಿ ಘಾಟ್ ಪ್ರದೇಶದ 22 ಕಿ.ಮೀ. ರಸ್ತೆಯಲ್ಲಿ ವಿಶೇಷ ಪೊಲೀಸ್ ಗಸ್ತು ವಾಹನ ಹಾಗೂ ವಿಶೇಷ ಪೊಲೀಸ್ ಗಸ್ತು ಪಡೆಯನ್ನು ನಿಯೋಜಿಸಲು ಸಮಿತಿ ವತಿಯಿಂದ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಬೆಳ್ತಂಗಡಿಯಿಂದ ಮೂಡಿಗೆರೆ ಕಡೆಗೆ ಬರುವ ವಾಹನಗಳನ್ನು ತಪಾಸಣೆಗೊಳಪಡಿಸಲು ಚಾರ್ಮಾಡಿಯಲ್ಲೂ ಅರಣ್ಯ ಇಲಾಖೆಯ ಚೆಕ್ಪೋಸ್ಟ್ಗಳಿದ್ದರೂ ಏನೂ ಪ್ರಯೋಜನವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ವಿಫಲವಾದಲ್ಲಿ ಬಣಕಲ್ ಪೊಲೀಸ್ ಠಾಣೆ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

