ಪೂರ್ಣಗೊಳ್ಳದ ಸ್ತ್ರೀಶಕ್ತಿ ಭವನ ಕಟ್ಟಡ
ಕ.ಪ್ರ.ವಾರ್ತೆ ಟಿ ಶೃಂಗೇರಿ ಟಿ ಜೂ.27
ನಾಲ್ಕೈದು ವರ್ಷಗಳ ಹಿಂದೆ ಕಾಮಗಾರಿ ಆರಂಭಗೊಂಡಿದ್ದರೂ, ಇಂದು ಅರ್ಧಕ್ಕೆ ನಿಂತು, ಉಪಯೋಗಕ್ಕೆ ಬಾರದಂತಾಗಿರುವ ಸ್ತ್ರೀಶಕ್ತಿ ಸಮುದಾಯ ಭವನವೊಂದು ಮೆಣಸೆ ಗ್ರಾಪಂ ಕಚೆರಿ ಸನಿಹದಲ್ಲಿದೆ.
ಇಲ್ಲಿ ಸುತ್ತ ಮುತ್ತಲೂ ಗಿಡಗಂಟೆಗಳು ಬೆಳೆದು ನಿಂತಿದ್ದು, ಗೋಡೆ ನಿರ್ಮಾಣವಾಗಿದೆ. ಆದರೆ ಕಿಟಕಿ, ಬಾಗಿಲುಗಳಿಲ್ಲ. ಮುಂಭಾಗದಲ್ಲಿ ದಟ್ಟ ಕಾಡು ಬೆಳೆದಿದ್ದು, ಮುಂಭಾಗದಿಂದ ನೋಡಿದರೆ, ಯಾವುದೋ ಪಾಳು ಬಿದ್ದ ಬಂಗಲೆಯಂತಿದೆ.
ಆರಂಭ ಶೂರತ್ವ: ಸಮುದಾಯ ಭವನಕ್ಕೆ ಪ್ರಾರಂಭದಲ್ಲಿ ರು. 10 ಲಕ್ಷ ಅನುದಾನ ಬಿಡುಗಡೆಯಾಗಿತ್ತು. ಆ ಮೊತ್ತದ ಹಂತದವರೆಗಿನ ಕಾಮಗಾರಿ ನಡೆದು, ನಂತರ ಕಟ್ಟಡದ ಕೆಲಸ ಅಪೂರ್ಣಗೊಂಡಿದೆ. ಈ ಬಗ್ಗೆ ಸಿಡಿಪಿಒ ಸಂಬಧಪಟ್ಟವರ ಗಮನಕ್ಕೆ ತಂದು, ಕಾಮಗಾರಿ ಮುಂದುವರೆಸುವ ಬಗ್ಗೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.
ಸ್ರೀ ಶಕ್ತಿ ಸಂಘಗಳು ಕಳೆದ 2-3 ವರ್ಷಗಳಿಂದ ಹೋರಾಡುತ್ತಲೇ ಇದ್ದರೂ, ಕಟ್ಟಡ ಕಾಮಗಾರಿ ಮಾತ್ರ ಪೂರ್ಣಗೊಳ್ಳದೆ, ಪಾಳುಬಿದ್ದ ಬಂಗಲೆಯಂತಿದೆ. ಈ ಬಗ್ಗೆ ಶಾಸಕರ ಗಮನಕ್ಕೂ ತರಲಾಗಿದ್ದು, ಅವರ ಅನುದಾನದಿಂದ ಕಾಮಗಾರಿ ಮುಂದುವರೆಯುವ ಭರವಸೆ ನೀಡಲಾಗಿತ್ತು. ಆದರೂ ಕಾಮಗಾರಿ ನಡೆಯಲಿಲ್ಲ ಎನ್ನುತ್ತಾರೆ ಸ್ಥಳೀಯರು.
ತೆರೆದ ಟ್ಯಾಂಕ್: ಕಟ್ಟಡಕ್ಕೆ ಹೊಂದಿಕೊಂಡಂತೆ ನೀರಿನ ಟ್ಯಾಂಕೊಂದನ್ನು ನಿಮಿಣಸಲಾಗಿದ್ದು, ಇದು ತೆರೆದ ಟ್ಯಾಂಕ್ ಆಗಿದೆ. ಈ ಟ್ಯಾಂಕ್ ನೊಳಗೆ ದನ, ಕರು, ನಾಯಿಗಳು ಸತ್ತು ಬಿದ್ದು ಸುತ್ತಮುತ್ತಲಿನ ಪರಿಸರಕ್ಕೆ ತೊಂದರೆಯಾಗುತ್ತಿದೆ. ಈ ಕಟ್ಟಡ ಇಸ್ಪೀಟ್ ಅಡ್ಡೆ, ಅನೈತಿಕ ಚಟುವಟಿಕೆ ತಾಣವಾಗುತ್ತಿದ್ದು, ಯಾವುದೇ ರೀತಿಯಲ್ಲಿ ಉಪಯೋಗಕ್ಕೆ ಬಾರದಾಗಿದೆ. ಎಂಬುದು ಸ್ಥಳೀಯರ, ಸಂಘಗಳ ಆರೋಪ.
ಕಟ್ಟಡದ ಮುಂಭಾಗದಲ್ಲಿ 2 ಮಳಿಗೆಗಳನ್ನು ನಿರ್ಮಿಸಲಾಗಿದ್ದು, ಅದು ಪೂರ್ಣಗೊಳಿಸಿದರೆ ಸ್ತ್ರೀಶಕ್ತಿ ಸಂಘಗಳ ಉಪಯೋಗಕ್ಕೆ ಬರಬಹುದು.
ಸ್ವಂತ ಜಾಗ, ಕಟ್ಟಡವಿದ್ದರೂ ಸಂಘಟನೆ ಕಾರ್ಯಕ್ರಮ, ಸಭೆ ನಡೆಸಲು ಇತರೆ ಸ್ಥಳಗಳನ್ನು ಆಶ್ರಯಿಸಬೇಕಿದೆ. ಕಾಮಗಾರಿ ಪೂರ್ಣಗೊಂಡರೆ ತರಬೇತಿ ಕಾರ್ಯಾಗಾರ, ಟೈಲರಿಂಗ್ ಕೆಲಸ ಸೇರಿದಂತೆ ಹಲವು ಕೆಲಸಗಳಿಗೆ ಉಪಯೋಗಿಸಬಹುದಾಗಿದೆ.
ಈ ಕಟ್ಟಡಕ್ಕೊಂದು ಅಂತಿಮ ರೂಪ ನೀಡಿದರೆ ಅದೆಷ್ಟೋ ಜನರಿಗೆ ಉಪಯೋಗವಾಗಬಹುದು. ಇದರ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು, ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸದೇ 2 ವರ್ಷಗಳಿಂದ ಸುಮ್ಮನಿರುವುದು ಆಶ್ಚರ್ಯವೇ ಸರಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

