ಓದಿನ ಜೊತೆ ಕ್ರೀಡೆಗೂ ಒತ್ತು ನೀಡಿ
ಕಪ್ರ ವಾರ್ತೆ, ಚಿಕ್ಕಮಗಳೂರು ಮಾ.1
ಶಿಕ್ಷಣದ ಜೊತೆಗೆ ಕ್ರಿಕೆಟ್ ರೂಢಿಸಿಕೊಳ್ಳುವುದರಿಂದ ಭವಿಷ್ಯ ಉಜ್ವಲವಾಗಲಿದೆ ಎಂದು ಹಿರಿಯ ಕ್ರಿಕೆಟ್ ಆಟಗಾರ ಗೋಪಾಲಕೃಷ್ಣ ಹೇಳಿದ್ದಾರೆ.
ಐಡಿಎಸ್ಜಿ ಸರ್ಕಾರಿ ಕಾಲೇಜು ಹಾಗೂ ರಾಣಾ ಸ್ಪೋರ್ಟ್ಸ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ಚಿಕ್ಕಮಗಳೂರು ವಲಯಮಟ್ಟದ ಅಂತರ ಪದವಿ ಕಾಲೇಜು ಪುರುಷರ ಲೆದರ್ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಗುರುವಾರ ಜಿಲ್ಲಾ ಆಟದ ಮೈದಾನದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತಮ ಪ್ರೋತ್ಸಾಹ: ವಿದ್ಯಾರ್ಥಿಗಳು ಕ್ರಿಕೆಟ್ ಸೇರಿದಂತೆ ಕ್ರೀಡೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಟಿವಿ, ಮೊಬೈಲ್, ಲ್ಯಾಪ್ಟ್ಯಾಪ್ ಕಡಿಮೆ ಮಾಡಿ ಓದಿನ ಜೊತೆಗೆ ಆಟಗಳತ್ತ ಗಮನಹರಿಸಬೇಕು. ಇಂದು ಕ್ರಿಕೆಟ್ಗೆ ಉತ್ತಮ ಪ್ರೋತ್ಸಾಹ ಇದೆ. ಕ್ರಿಕೆಟ್ ಆಟಗಾರರಿಗೆ ಬ್ಯಾಂಕ್, ರೈಲ್ವೆ, ಫ್ಯಾಕ್ಟರಿಗಳಲ್ಲಿ ಮೀಸಲಾತಿ ಇದೆ. ಐಟಿ, ಬಿಟಿ ಗಳಲ್ಲೂ ಕ್ರಿಕೆಟ್ ಬಗ್ಗೆ ಆಸಕ್ತಿ ವ್ಯಕ್ತವಾಗುತ್ತಿದೆ. ಕೆಟ್ಟ ಹವ್ಯಾಸಗಳಿಗೆ ದಾಸರಾಗದೆ ಶಿಸ್ತಿನಿಂದ ಆಸಕ್ತಿ ಇರುವ ಕ್ಷೇತ್ರವನ್ನು ಗುರುತಿಸಿ ಅದರಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಬೇಕೆಂದು ಕಿವಿ ಮಾತು ಹೇಳಿದರು.
ಗ್ರಾಮೀಣ ಮಟ್ಟದಲ್ಲಿ ಕ್ರಿಕೆಟ್: ಶಿವಮೊಗ್ಗ ವಲಯ ಕ್ರಿಕೆಟ್ ಸಂಚಾಲಕ ಕೆ.ಎನ್. ಪ್ರಭಾಕರ್ ಮಾತನಾಡಿ, ಹೆಚ್ಚು ಜನಪ್ರಿಯವಾಗಿರುವ ಕ್ರಿಕೆಟ್ ಶಿಸ್ತು ಬದ್ಧ ಆಟ. ಶಿಸ್ತು, ಸಂಯಮ, ಶಾಂತಿಯಿಂದ ಕ್ರಿಕೆಟ್ನಲ್ಲಿ ತೊಡಗಿಸಿಕೊಂಡರೆ ಮಹಾನ್ ಆಟಗಾರರಾಗಿ ರೂಪುಗೊಳ್ಳಬಹುದೆಂಬುದಕ್ಕೆ ದ್ರಾವಿಡ್, ಸಚಿನ್ ಮತ್ತಿತರರು ಉದಾಹರಣೆಯಾಗಿದ್ದಾರೆ. ಗ್ರಾಮೀಣ ಮಟ್ಟದಲ್ಲಿ ಕ್ರಿಕೆಟ್ ಪ್ರೋತ್ಸಾಹ ವ್ಯಕ್ತವಾಗುತ್ತಿದೆ. ಕ್ರಿಕೆಟ್ ಅಕಾಡೆಮಿಯ ಉಚಿತ ತರಬೇತಿಯನ್ನೂ ನೀಡುತ್ತಿದೆ. ಇಲ್ಲಿ ಪ್ರತಿಭೆ ತೋರಿದರೆ ಕೆಪಿಎಲ್ಗೂ ಹೋಗಬಹುದು ಎಂದರು.
ಕಾಲೇಜು ಪ್ರಾಂಶುಪಾಲೆ ಪ್ರೊ. ಜರೀನಾ ಕೌಸರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ದೈಹಿಕ, ಮಾನಸಿಕ, ನೈತಿಕ ಬೆಳವಣಿಗೆಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯೂ ಅಗತ್ಯ. ್ಲ ಕಾಲೇಜುಗಳಲ್ಲೂ ದೈಹಿಕ ಶಿಕ್ಷಣ ನಿರ್ದೇಶಕರನ್ನು ಕಡ್ಡಾಯವಾಗಿ ನೇಮಿಸುವುದರಿಂದ ಕ್ರೀಡಾ ಚಟುವಟಿಕೆಗಳಿಗೆ ಆದ್ಯತೆ ಸಿಗುತ್ತದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

