ಬರ ನಿರ್ವಹಣೆಗೆ ನೋಡಲ್ ಅಧಿಕಾರಿ ನೇಮಕ
ಕಪ್ರ ವಾರ್ತೆ, ಚಿಕ್ಕಮಗಳೂರು ಮಾ.1
ಜಿಲ್ಲೆಯ ನಾಲ್ಕು ತಾಲೂಕುಗಳ ಬರ ನಿರ್ವಹಣೆಗಾಗಿ ಹೋಬಳಿವಾರು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಕಡೂರು, ತರೀಕೆರೆ, ಚಿಕ್ಕಮಗಳೂರು ಹಾಗೂ ಮೂಡಿಗೆರೆ ತಾಲೂಕುಗಳ ಬರ ಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಪೂರೈಕೆ ಹಾಗೂ ಸಂರಕ್ಷಣೆಗಾಗಿ ಅಧಿಕಾರಿಗಳನ್ನು ಜಿಲ್ಲಾಡಳಿತ ನೇಮಕ ಮಾಡಿದೆ.
ಹೋಬಳಿವಾರು ವಿವರ
ಕಡೂರು ತಾಲೂಕು: ಸಖರಾಯಪಟ್ಟಣ ಹಾಗೂ ಕಸಬಾ ಹೋಬಳಿಗೆ ಬಿ.ಆರ್. ರೂಪ, ಜಿಲ್ಲಾ ವ್ಯವಸ್ಥಾಪಕರು ಕೆ.ಎಸ್.ಎಫ್.ಸಿ. (9448263897), ಬೀರೂರು, ಹಿರೇನಲ್ಲೂರು ಹೋಬಳಿ- ಲಕ್ಷ್ಮೀನರಸಯ್ಯ, ಉಪ ಕಾರ್ಯದರ್ಶಿ- 1, ಜಿಲ್ಲಾ ಪಂಚಾಯಿತಿ, ಚಿಕ್ಕಮಗಳೂರು. ( 9480860001), ಸಿಂಗಟಗೆರೆ, ಪಂಚನಹಳ್ಳಿ ಹೋಬಳಿ- ವಿಠಲ್, ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯಿತಿ, ಚಿಕ್ಕಮಗಳೂರು, (08262-220288), ಚೌಳ ಹಿರಿಯೂರು ಹಾಗೂ ಯಗಟಿ ಹೋಬಳಿ- ಎಂ. ರಾಜು ಉಪ ನಿರ್ದೇಶಕರು, ಕೃಷಿ ಇಲಾಖೆ, (8722413493).
ತರೀಕೆರೆ ತಾಲೂಕು: ಅಮೃತಾಪುರ, ಲಕ್ಕವಳ್ಳಿ ಹೋಬಳಿ- ಶಿವಣ್ಣ ಉಪನಿರ್ದೇಶಕರು, ರೇಷ್ಮೇ ಇಲಾಖೆ (9342156812), ಲಿಂಗದಹಳ್ಳಿ, ಕಸಬಾ ಹೋಬಳಿ- ನಾಗೇಂದ್ರ ಉಪ ನಿರ್ದೇಶಕರು, ಪಶುಸಂಗೋಪನಾ ಇಲಾಖೆ, (9448816680), ಶಿವನಿ, ಅಜ್ಜಂಪುರ ಹೋಬಳಿ- ಸಂಪತ್ ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ (9448999222).
ಚಿಕ್ಕಮಗಳೂರು ತಾಲೂಕು: ಕಸಬಾ, ಲಕ್ಯಾ ಹೋಬಳಿ- ಶ್ರೀವಳ್ಳಿ ಸಹಾಯಕ ಕಾರ್ಮಿಕ ಆಯುಕ್ತರು, ಕಾರ್ಮಿಕ ಇಲಾಖೆ (9886173025), ಅಂಬಳೆ, ವಸ್ತಾರೆ ಹೋಬಳಿ- ಎಚ್.ಜೆ. ಚಂದ್ರಶೇಖರಯ್ಯ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ( 9449030427), ಜಾಗರ, ಆವತಿ ಹೋಬಳಿ- ಯಾಲಕ್ಕಿಗೌಡ ಉಪ ಕಾರ್ಯದರ್ಶಿ- 2, ಜಿಲ್ಲಾ ಪಂಚಾಯಿತಿ, ಚಿಕ್ಕಮಗಳೂರು. (9480860007),ಆಲೂರು, ಖಾಂಡ್ಯ ಹೋಬಳಿ- ಸುರೇಶ್, ಜಂಟಿ ನಿರ್ದೇಶಕರು, ಕೈಗಾರಿಕಾ ಇಲಾಖೆ, (9845247272).
ಮೂಡಿಗೆರೆ ತಾಲೂಕು: ಬಾಳೂರು ಹಾಗೂ ಕಸಬಾ ಹೋಬಳಿ- ರತ್ನಾಕರ್ ನಾಯ್ಕ ಉಪ ನಿರ್ದೇಶಕರು, ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ (9448344573)
ನೋಡಲ್ ಅಧಿಕಾರಿಗಳು ತಮ್ಮ ಹೋಬಳಿ ವ್ಯಾಪ್ತಿಯಲ್ಲಿ ಪ್ರವಾಸ ಕೈಗೊಂಡು ಕುಡಿಯುವ ನೀರು, ಮೇವಿನ ಸಮಸ್ಯೆ ಮತ್ತು ಪರಿಹಾರೋಪಾಯ ಹಾಗೂ ಬರ ಪರಿಹಾರ ಕಾಮಗಾರಿಗಳ ಪರಿಶೀಲಿಸಿ ವರದಿ ನೀಡಲು ಸೂಚಿಸಲಾಗಿದೆ.
ಸಿದ್ಧತೆ ಪರಿಶೀಲನೆ
ಚಿಕ್ಕಮಗಳೂರು: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆ ಚುನಾವಣಾ ವೀಕ್ಷಕರಾದ ರಾಜ್ಯ ವಕ್ಫ್ ಮಂಡಳಿ ಕಾರ್ಯನಿರ್ವಹಣಾಧಿಕಾರಿ ಎ.ಬಿ. ಇಬ್ರಾಹಿಂ ಅವರು ಗುರುವಾರ ಚಿಕ್ಕಮಗಳೂರು ತಾಲೂಕು ಕಚೇರಿಗೆ ಭೇಟಿ ನೀಡಿ ಚುನಾವಣಾ ಸಿದ್ಧತೆಗಳ ಪರಿಶೀಲನೆ ನಡೆಸಿದರು. ಚುನಾವಣಾ ಪೂರ್ವ ಸಿದ್ಧತೆಗಳ ಅವಲೋಕನ ನಡೆಸಿದ ಅವರು, ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಸೇರ್ಪಡೆಗಳ ಕುರಿತು ತಹಸೀಲ್ದಾರ್ ವೀಣಾ ಅವರೊಂದಿಗೆ ಚರ್ಚೆ ನಡೆಸಿದರು. ಚುನಾವಣಾ ಸಿಬ್ಬಂದಿಗಳ ತರಬೇತಿಯ ಕುರಿತು ವಿವರ ಪಡೆದರು.
ನಗರ ಸಭೆ ತೆರಿಗೆ ಪಾವತಿಗೆ ಸೂಚನೆ
ಚಿಕ್ಕಮಗಳೂರು ನಗರಸಭೆಯ 2012-13 ನೇ ಸಾಲಿನ ಆಸ್ತಿ ತೆರಿಗೆ, ನೀರಿನ ತೆರಿಗೆ, ಉದ್ದಿಮೆ ಪರವಾನಗಿ ಶುಲ್ಕ, ಜಾಹಿರಾತು ಶುಲ್ಕ ಇತ್ಯಾಧಿಗಳನ್ನು ಪಾವತಿ ಮಾಡಲು ನಗರಸಭೆ ಸೂಚಿಸಿದೆ. ಮಾ. 1 ರಿಂದ ನಗರಸಭೆ ಅಧಿಕಾರಿಗಳು ಕಟ್ಟಡಗಳಿಗೆ, ಉದ್ದಿಮೆಗಳಿಗೆ ಭೇಟಿ ನೀಡಿ ತೆರಿಗೆ ಪಾವತಿ, ಪರವಾನಿಗೆ ಪರಿಶೀಲಿಸಲಿದ್ದಾರೆ ಎಂದು ಆಯುಕ್ತ ಪ್ರಭಾಕರ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

