ರು. 12 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ
ತರೀಕೆರೆ: ಮುಖ್ಯಮಂತ್ರಿ ಗ್ರಾಮ ಸಡಕ್ (ನಮ್ಮ ಗ್ರಾಮ ನಮ್ಮ ರಸ್ತೆ) ಯೋಜನೆಯಲ್ಲಿ 12 ಕೋಟಿ ರು. ವೆಚ್ಚದಲ್ಲಿ ತಾಲೂಕಿನ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಶಾಸಕ ಡಿ.ಎಸ್. ಸುರೇಶ್ ತಿಳಿಸಿದ್ದಾರೆ.
ಸಮೀಪದ ಮೆಣಸಿನಕಾಯಿ ಹೊಸಹಳ್ಳಿಯಲ್ಲಿ ಯೋಜನೆಯಡಿ, 1 ಕೋಟಿ 32 ಲಕ್ಷ ರು.ಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಯೋಜನೆಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ಮೆಣಿಸಿನಕಾಯಿ ಹೊಸಹಳ್ಳಿಯಿಂದ ಬಂಕನಕಟ್ಟೆ ಮತ್ತಿತರ ಪ್ರದೇಶಗಳಿಗೆ ರೈತರು ಬೆಳೆದ ಬೆಳೆಗಳನ್ನು ಸಾಗಿಸಲು ಅನುಕೂಲವಾದ ಸಂಪರ್ಕ ರಸ್ತೆಗಳು ಅಗತ್ಯವಾಗಿದೆ. ಸಂಪರ್ಕ ರಸ್ತೆ ಅಭಿವೃದ್ಧಿ ಪಡಿಸಲು ಯೋಜನೆಯಡಿ 1 ಕೋಟಿ 32 ಲಕ್ಷ ರು. ಹಣ ಮಂಜೂರು ಮಾಡಿದೆ. ಇದರಿಂದ ಶಾಶ್ವತವಾಗಿ ಉಳಿಯುವ ಗುಣಮಟ್ಟದ ರಸ್ತೆ ಕಾಮಗಾರಿ ಮಾಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
30 ಕಿಮೀ ರಸ್ತೆ ಅಭಿವೃದ್ಧಿ: ಗ್ರಾಮದಲ್ಲಿ ಕಡಿಮೆ ಅವಧಿಯಲ್ಲಿ ಸುಸಜ್ಜಿತವಾದ ಸಮುದಾಯ ಭವನ ನಿರ್ಮಾಣವಾಗಿದೆ. ನಮ್ಮ ಗ್ರಾಮ ನಮ್ಮ ರಸ್ತೆ
ಯೋಜನೆಯಡಿ ಸುಮಾರು 30 ಕಿಮೀ ಗ್ರಾಮೀಣ ಸಂಪರ್ಕ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.
ದ್ವೀಪ ಇದ್ದ ಹಾಗಿತ್ತು: ಶಿವಲಿಂಗಪ್ಪ ಮಾತನಾಡಿ, ಮೆಣಸಿನಕಾಯಿ ಹೊಸಹಳ್ಳಿ ಒಂದು ದ್ವೀಪ ಇದ್ದ ಹಾಗಿತ್ತು, ಶಾಸಕ ಡಿ.ಎಸ್. ಸುರೇಶ್ ರಸ್ತೆ ಅಭಿವೃದ್ಧಿ ಮಾಡಿಸುವುದರ ಮೂಲಕ ಅದನ್ನು ನೀಗಿಸಿದ್ದಾರೆ ಎಂದು ತಿಳಿಸಿದರು. ಎಸ್.ಬಿ. ಆನಂದಪ್ಪ ಮಾತನಾಡಿ, ಬೆಳೆಗಳನ್ನು ಸಾಗಿಸಲು ತೊಂದರೆಯಾಗುತ್ತಿತ್ತು. ಇದೀಗ ರಸ್ತೆ ಅಭಿವೃದ್ಧಿಯಾಗುತ್ತಿದೆ ಎಂದರು.
ಜಿಪಂ ಸದಸ್ಯ ಆನಂದಪ್ಪ, ಸಿದ್ರಾಮಪ್ಪ, ಬಸವರಾಜಪ್ಪ ಮಾತನಾಡಿದರು. ತಾಪಂ ಅಧ್ಯಕ್ಷೆ ದೀಪಾ ಉಮೇಶ್, ಭಾಗ್ಯಮ್ಮ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

