ಚಿಕ್ಕಮಗಳೂರು

ಲಕ್ಷದವರೆಗೆ ಖರ್ಚು ಮಾಡಲು ಅವಕಾಶ

Published On :

ನರಸಿಂಹರಾಜಪುರ: ಪಪಂ ಅಭ್ಯರ್ಥಿಗಳಿಗೆ 1 ಲಕ್ಷ ರುಪಾಯಿ ವರೆಗೆ ಮಾತ್ರ ಖರ್ಚು ಮಾಡಲು ಅವಕಾಶವಿದೆ ಎಂದು ಚುನಾವಣಾಧಿಕಾರಿ ಬಿ.ಜಿ. ಮಾಳಮ್ಮನವರ್ ತಿಳಿಸಿದರು.
ಪಪಂ ಸಭಾಂಗಣದಲ್ಲಿ ಪಪಂ ಚುನಾವಣೆ ಅಭ್ಯರ್ಥಿ ಹಾಗೂ ರಾಜಕೀಯ ಪಕ್ಷಗಳ ಪದಾಧಿಕಾರಿಗಳಿಗೆ ಏರ್ಪಡಿಸಿದ್ದ ಚುನಾವಣಾ ನೀತಿ ಸಂಹಿತೆ ಹಾಗೂ ಮತ ಯಂತ್ರದ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿ, ಚುನಾವಣೆಗೂ ಮುನ್ನ ಮತ ಗಟ್ಟೆ ಏಜೆಂಟರ ಸಮ್ಮುಖದಲ್ಲಿ ಅಣುಕ ಮತದಾನ ಮಾಡಿ ತೋರಿಸಲಾಗುತ್ತದೆ. ಮತದಾನ ಮಾಡುವ ಜಾಗಕ್ಕೆ ಯಾರೂ ಹೋಗುವಂತಿಲ್ಲ.
ಕುರುಡರು, ಅಶಕ್ತರು ಮತದಾನಕ್ಕೆ ಬಂದಾಗ ಅವರ ಕುಟಂಬದ 18 ವರ್ಷಕ್ಕೆ ಮೇಲ್ಪಟ್ಟ ಒಬ್ಬರು ಮತದಾನಕ್ಕೆ ಸಹಾಯ ಮಾಡಬಹುದು. ಚುನಾವಣೆಯ ಅಭ್ಯರ್ಥಿಗಳು, ಕಾರ್ಯಕರ್ತರು ಮತದಾನದ ಕೇಂದ್ರದಿಂದ 100 ಮೀಟರ್ ದೂರದಲ್ಲಿ ಮತದಾರರಿಗೆ ಮಾಹಿತಿ ನೀಡಬಹುದು. ಮತಯಂತ್ರದಲ್ಲಿ ಕ್ರಮ ಸಂಖ್ಯೆ, ಹೆಸರು, ಚಿಹ್ನೆ ಇರುತ್ತದೆ. ಅದರ ಮುಂಬಾಗದ ಬಟನ್ ಒತ್ತುವ ಮೂಲಕ ಮತದಾರರು ಮತ ನೀಡಬಹುದು. ಅಭ್ಯರ್ಥಿಗಳು ಪ್ರತಿ ದಿನ ತಮ್ಮ ಖರ್ಚಿನ ಬಗ್ಗೆ ಲೆಕ್ಕ ನೀಡಬೇಕು.ಚಾಲೆಂಜ್ ಮತಗಳು ನೀಡಬೇಕಾದರೆ ಮತಯಂತ್ರದಿಂದ ಸಾಧ್ಯವಿಲ್ಲ. ಇದಕ್ಕೆ ಬೇರೆ ಏರ್ಪಾಡು ಮಾಡಲಾಗಿದೆ ಎಂದು ತಿಳಿಸಿದರು.
ತಹಸೀಲ್ದಾರ್ ಕೃಷ್ಣಮೂರ್ತಿ ಮಾತನಾಡಿ, ಜನವರಿ 1 ರಿಂದ ಫೆಬ್ರವರಿ 16 ವರೆಗೆ ಹೊಸ ಮತದಾರರು ತಮ್ಮ ದಾಖಲೆಯೊಂದಿಗೆ ನೀಡಿದ ಅರ್ಜಿಗಳನ್ನು ಪರಿಶೀಲಿಸಿ ದಾಖಲೆಗಳು ಸರಿಯಾಗಿರುವ ಮತದಾರರನ್ನು ಪಟ್ಟಿಗೆ ಸೇರಿಸಲಾಗಿದೆ.ಅವರಿಗೆ ಪಪಂ ಚುನಾವಣೆಯಲ್ಲಿ ಮತ ನೀಡಲು ಅವಕಾಶ ನೀಡಲಾಗುವುದು.ಫೆಬ್ರವರಿ 16 ರ ನಂತರ  ನೀಡಿದ ಅರ್ಜಿಗಳನ್ನು ಈ ಚುನಾವಣೆಗಳಿಗೆ ಸೇರಿಸಲಾಗಿಲ್ಲ. ಈಗ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು ಅಭ್ಯರ್ಥಿಗಳು ಉಲ್ಲಂಘನೆ ಮಾಡಬಾರದು. ಚುನಾವಣೆಗೆ 48 ಗಂಟೆ ಇದ್ದಾಗ ಬಹಿರಂಗ ಪ್ರಚಾರ ನಿಲ್ಲಿಸಬೇಕು.
ನಂತರ ಮನೆ, ಮನೆಗಳಿಗೆ ತೆರಳಿ ಪ್ರಚಾರ ಮಾಡಬಹುದು.ಚುನಾವಣೆಗೆ 48 ಗಂಟೆಗಳು ಇದ್ದಾಗ ಮತದಾರರ ಪಟ್ಟಿ ಇಲ್ಲದೆ ಇದ್ದವರು ಪಟ್ಟಣದಿಂದ ತಮ್ಮ ಊರಿಗೆ ಹೋಗಬೇಕು ಎಂದರು. ತಾಪಂ ಕಾರ್ಯನಿರ್ವಹಣಾಧಿಕಾರಿ ವಿಜಯಕುಮಾರ್, ಆರಕ್ಷಕ ವೃತ್ತ ನಿರೀಕ್ಷಕ ಕೃಷ್ಣಮೂರ್ತಿ, ಪೊಲೀಸ್ ಠಾಣಾಧಿಕಾರಿ ತಿಮ್ಮರಾಜು, ಲೆಕ್ಕಾಧಿಕಾರಿ ರಾಮಚಂದ್ರ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.