ಸ್ಮಶಾನ ಒತ್ತುವರಿ ಆರೋಪಿಗಳಿಗೆ ಪೊಲೀಸರ ರಕ್ಷಣೆ: ಆರೋಪ
ಮೂಡಿಗೆರೆ: ಹಳೇಕೆರೆ ಗ್ರಾಮದ ಮಡಿವಾಳ ಜನಾಂಗದವರಿಗೆ ಸೇರಿದ ಸ್ಮಶಾನ ಭೂಮಿ ಒತ್ತುವರಿ ಸಂಬಂಧ ಸ್ಥಳೀಯರಾದ ಪ್ರಸನ್ನ ಎಂಬವರು ಇತರರೊಂದಿಗೆ ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಿದ ಕುರಿತು ಪ್ರಕರಣ ಗೋಣಿಬೀಡು ಠಾಣೆಯಲ್ಲಿ ದಾಖಲಾಗಿದೆ. ಅವರನ್ನು ಬಂಧಿಸುವಲ್ಲಿ ವಿಫಲವಾಗಿದ್ದು ಆರೋಪಿಗೆ ರಕ್ಷಣೆ ನೀಡುತ್ತಿದ್ದಾರೆಂದು ಕನ್ನಡಪರ ಹೋರಾಟಗಾರ ಹಳೇಕೆರೆ ರಘು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಳೇಕೆರೆ ಗ್ರಾಮದ ಸ.ನಂ. 47ರಲ್ಲಿ 30 ಗುಂಟೆ ಜಮೀನನ್ನು ಸ್ಥಳೀಯರಾದ ಜೆಪ್ರಿ ಡಿಸೋಜಾ ಅತಿಕ್ರಮಿಸಿದ್ದನ್ನು ಗ್ರಾಮಸ್ಥರ ಹೋರಾಟದ ಫಲವಾಗಿ ತೆರವುಗೊಳಿಸಿ ಬೇಲಿ ಹಾಕಲಾಗಿತ್ತು. ಇದನ್ನು ಮತ್ತೆ ಒತ್ತುವರಿದಾರರು ಆಕ್ರಮಿಸಿಕೊಂಡಿದ್ದನ್ನು ಬಿಡಿಸಿಕೊಡುವಂತೆ ಮನವಿ ಸಲ್ಲಿಸಿದರೆ ತಾಲೂಕು ಆಡಳಿತ ನಿರ್ಲಕ್ಷ್ಯ ವಹಿಸಿತ್ತು. ಈ ಸಂಬಂಧ ಪ್ರಸನ್ನ ಎಂಬವರು ಫೆ.23ರಂದು ಹಳೇಕೆರೆ ಗ್ರಾಮಸ್ಥರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಗ್ರಾಮದಲ್ಲಿ ಸುಮಾರು 10 ಮಡಿವಾಳ ಜನಾಂಗದ ಬಡ ಕುಟುಂಬಗಳಿವೆ. ಆ ಕುಟುಂಬಗಳಲ್ಲಿ ಮಡಿದವರ ಶವ ಸಂಸ್ಕಾರಕ್ಕೆ ತೊಂದರೆ ಉಂಟಾಗಿದೆ. ಸ್ಮಶಾನದ ಸುತ್ತಮುತ್ತಲ ಜಮೀನಿನ ಭೂಮಿಯನ್ನು ಈಗಾಗಲೇ ತಹಸೀಲ್ದಾರರು ಜೆಫ್ರಿ ಡಿಸೋಜಾರಿಗೆ ಮಂಜೂರಾತಿ ನೀಡಿದ್ದಾರೆ. ಆದರೆ ಅವರು ಹಾಕಿದ್ದ ಬೇಲಿ ಕಿತ್ತು ಆಕ್ರಮಿಸಿಕೊಂಡಿದ್ದಾರೆ. ಪ್ರಕರಣ ದಾಖಲಾಗಿದ್ದರೂ ಸ್ಥಳೀಯ ಪೊಲೀಸರು ಆರೋಪಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ. ಆದ್ದರಿಂದ ಅವರ ವಿರುದ್ಧ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಗ್ರಾಮಸ್ಥರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

