ಜಾಗೃತಿಗೆ ಕರಪತ್ರ ಹಂಚಲು ವ್ಯವಸ್ಥೆ
ಕ.ಪ್ರ ವಾರ್ತೆ, ನರಸಿಂಹರಾಜಪುರ, ಮಾ.5
ಮತದಾನದ ಬಗ್ಗೆ ಮತದಾರರಿಗೆ ಜಾಗೃತಿ ಮೂಡಿಸಲು ಮುತ್ತಿನಕೊಪ್ಪ ಸೂರ್ಯೋದಯ ಜಾಗೃತಿ ವೇದಿಕೆಯಿಂದ ಕರಪತ್ರ ಹಂಚಲು ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಆದರೆ, ಚುನಾವಣಾಧಾರಿಗಳು ಕರ ಪತ್ರ ಹಂಚಲು ಅನುಮತಿ ನೀಡಿಲ್ಲ ಎಂದು ಸೂರ್ಯೋದಯ ಜಾಗೃತಿ ವೇದಿಕೆ ಅಧ್ಯಕ್ಷ ಸಿ.ಎಲ್. ಮನೋಹರ್ ಚುನಾವಣಾಧಿಕಾರಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಲೋಕಸಭಾ ಉಪ ಚುನಾವಣೆಯಲ್ಲೂ ನಮ್ಮ ಸೂರ್ಯೋದಯ ಜಾಗೃತಿ ವೇದಿಕೆಯಿಂದ ಮತದಾರರರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ನ.ರಾ.ಪುರ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಬ್ಯಾನರ್ ಹಾಕಿ ಅಭಿಯಾನ ನಡೆಸಿದ್ದೆವು. ಈ ಬಾರಿ ಪಟ್ಟಣ ಪಂಚಾಯ್ತಿಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಜಾಗೃತಿ ಮೂಡಿಸಲು ಕರಪತ್ರಗಳನ್ನು ಮುದ್ರಿಸಿದ್ದೆವು. ಚುನಾವಣಾ ಅಧಿಕಾರಿಗಳಲ್ಲಿ ಅನುಮತಿ ಕೇಳಿ ಮನವಿ ಸಲ್ಲಿಸಿದ್ದೆವು. ಆದರೆ, ಚುನಾವಣಾಧಿಕಾರಿಗಳು ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು ಕರಪತ್ರ ಹಂಚಲು ಅನುಮತಿ ನಿರಾಕರಿಸಿದ್ದಾರೆ. ಇದರಿಂದಾಗಿ ಮತದಾರರಿಗೆ ಜಾಗೃತಿ ಮೂಡಿಸುವ ಕರಪತ್ರ ಹಂಚಲು ಸಾದ್ಯವಾಗಿಲ್ಲ ಎಂದರು.
ಮತ ಮಾರಿಕೊಳ್ಳಬೇಡಿ: ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಾಗಲು ಭ್ರಷ್ಟ ಚುನಾಯಿತ ಪ್ರತಿನಿಧಿಗಳಿಗೆ ಮತ ನೀಡಿರುವುದೇ ಕಾರಣವಾಗಿದೆ. ರಾಜಕಾರಣಿಗಳೆಂದರೆ ಎಲ್ಲರೂ ಕೆಟ್ಟವರಲ್ಲ. ಪ್ರಾಮಾಣಿಕ ಅಭ್ಯರ್ಥಿಗಳು ಚುನಾವಣೆಗೆ ನಿಂತಾಗ ಅವರಿಗೆ ಮತ ನೀಡಿ. ಹಣ, ಹೆಂಡ ಹಾಗೂ ಇತರೆ ಆಮಿಷಗಳಿಗೆ ಬಲಿಯಾಗಿ ಮತವನ್ನು ಮಾರಿಕೊಳ್ಳಬೇಡಿ. ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಮತದಾರರ ಸಹಕಾರವೂ ಬೇಕಾಗಿದೆ. ಮಾ.7ರಂದು ನಡೆಯುವ ಪಟ್ಟಣ ಪಂಚಾಯ್ತಿ, ಪುರಸಭೆ, ನಗರಸಭೆ ಚುನಾವಣೆಗಳಲ್ಲಿ ಅಭ್ಯರ್ಥಿಗಳು ಯಾವುದೇ ಪಕ್ಷದಲ್ಲಿ ನಿಂತಿದ್ದರೂ ಪ್ರಾಮಾಣಿಕ, ಭ್ರಷ್ಟರಲ್ಲದ ಅಭ್ಯರ್ಥಿಗಳಿಗೆ ಮತ ನೀಡಿ ನಾಳಿನ ಭವಿಷ್ಯಕ್ಕಾಗಿ ಒಳ್ಳೆಯ ವ್ಯವಸ್ಥೆ ನಿರ್ಮಿಸಲು ಸಹಕಾರ ನೀಡಿ ಎಂಬುದೇ ಸೂರ್ಯೋದಯ ಜಾಗೃತಿ ವೇದಿಕೆಯ ಆಶಯ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸೂರ್ಯೋದಯ ಜಾಗೃತಿ ವೇದಿಕೆ ಕಾರ್ಯದರ್ಶಿ ಸಿ.ವೈ. ಶ್ರೀಕಾಂತ್, ವೇದಿಕೆಯ ಸದಸ್ಯರಾದ ವರ್ಕಾಟೆ ಸುಧಾಕರ್, ಗೋವಿಂದ ಉಪಸ್ಥಿರಿದ್ದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

