ಅಪಘಾತ: ಚಿಕ್ಕಮಗಳೂರು ದಂಪತಿ ಸಾವು
ಕಪ್ರ ವಾರ್ತೆ, ಬೇಲೂರು. ಮಾ 6
ಜಿಲ್ಲೆಯಲ್ಲಿ ಮಂಗಳವಾರ ನಡೆದ ಪ್ರತ್ಯೇಕ ಅಪಘಾತದಲ್ಲಿ ಐವರು ಮೃತಪಟ್ಟಿದ್ದಾರೆ.
ಸಾರಿಗೆ ಬಸ್ ಡಿಕ್ಕಿ ಮಾಡಿದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿರುವ ಘಟನೆ ಮಂಗಳವಾರ ಹಾಸನ-ಬೇಲೂರು ರಸ್ತೆಯಲ್ಲಿ ನಡೆದಿದೆ. ಚಿಕ್ಕಮಗಳೂರು ತಾಲೂಕಿನ ಗಂಜಲಗೂಡು ಗ್ರಾಮದ ಶಂಕರೇಗೌಡ (61) ಮತ್ತು ಪತ್ನಿ ರುಕ್ಮಿಣಿ (55) ಸಾವನ್ನಪ್ಪಿದ ದುರ್ದೈವಿಗಳು.
ಶಂಕರೇಗೌಡ ಪತ್ನಿ ರುಕ್ಮಿಣಿ ಹಾಗೂ ಇತರರೊಡನೆ ಕಾರಿನಲ್ಲಿ ಹಾಸನಕ್ಕೆ ಬಂದು ವಾಪಸ್ ಊರಿಗೆ ಹೋಗಲು ಹಾಸನ-ಬೇಲೂರು ರಸ್ತೆ, ನೆಟ್ಟೇಕೆರೆ ಗ್ರಾಮದ ಗಡಿ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಸಾರಿಗೆ ಬಸ್ ಚಾಲಕನ ನಿರ್ಲಕ್ಷ್ಯತೆಯಿಂದ ಡಿಕ್ಕಿ ಮಾಡಿದ ಪರಿಣಾಮ ಕಾರಿನಲ್ಲಿದ್ದವರಿಗೆಲ್ಲ ತೀವ್ರ ಸ್ವರೂಪದ ಗಾಯವಾಗಿದ್ದು, ಶಂಕರೇಗೌಡ ಮತ್ತು ರುಕ್ಮಿಣಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮೆಸ್ಕಾಂ ಮನವಿ
ತರೀಕೆರೆ: ಸಂಜೆ 6 ರಿಂದ 10 ರವರೆಗೆ ಸಿಂಗಲ್ ಫೇಸ್ ನೀಡುವ ಸಮಯದಲ್ಲಿ ಐಪಿ ಮತ್ತು ಇತರ ಗ್ರಾಹಕರು ಕಂಡೆನ್ಸರ್ ಬಳಸಬಾರದೆಂದು ಮೆಸ್ಕಾಂ ಗ್ರಾಹಕರಲ್ಲಿ ಮನವಿ ಮಾಡಿದೆ. ಈ ಬಗ್ಗೆ ಪ್ರಕಟಣೆ ನೀಡಿ, ಗ್ರಾಹಕರು ಕಂಡೆನ್ಸರ್ ಬಳಸುವುದರಿಂದ ಫೀಡರ್ಗಳು ಅತಿ ಹೆಚ್ಚಿನ ಹೊರೆ ಹೊಂದಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದೆ. ಇದರಿಂದ ಎಸ್ಎಸ್ಎಲ್ಸಿ ಪಿಯುಸಿ ಪರೀಕ್ಷೆಗಳು ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳಿಗೆ ತುಂಬಾ ಆನಾನುಕೂಲವಾಗುವುದರಿಂದ ಸಂಜೆ ವೇಳೆ ಕಂಡೆನ್ಸರ್ ಬಳಸಬಾರದೆಂದು ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.
ಹಲ್ಲೆಗೀಡಾದ ವ್ಯಕ್ತಿ ಸಾವು
ಶಿವಮೊಗ್ಗ: ಹಲ್ಲೆಗೀಡಾದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆ ನಡೆಸಿದ ಆರೋಪಕ್ಕೆ ಗುರಿಯಾಗಿರುವ ಇಬ್ಬರ ವಿರುದ್ಧ ಕೋಟೆ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಬಾಪೂಜಿ ನಗರದ ನಿವಾಸಿ ರಫೀಕ್ ಮೃತಪಟ್ಟವರು. ಹಮೀದ್ ಹಾಗೂ ಸಮೀರ್ ಎಂಬುವರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
ರಫೀಕ್ ಹಮೀದ್ ಜೊತೆ ಲಾರಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಇವರಿಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಇತ್ತೀಚೆಗೆ ಹಮೀದ್ ತನ್ನ ಸಹಚರನೊಂದಿಗೆ ಬಾಪೂಜಿ ನಗರದ ನಿವಾಸಕ್ಕೆ ಆಗಮಿಸಿ ರಫೀಕ್ ಮೇಲೆ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡ ಅವರನ್ನು ಮಂಗಳೂರಿನ ಎನಪೋಯಾ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಿಸಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

