ಚಿಕ್ಕಮಗಳೂರು

ನಾಳೆ ಕೊಂಕಣಿ ಭಾಷಿಗರ ರಾಷ್ಟ್ರೀಯ ಸಮಾವೇಶ

Published On :

ಚಿಕ್ಕಮಗಳೂರು: ಕ್ಯಾಥೋಲಿಕ್ ಕೊಂಕಣಿ ಭಾಷಿಗರ ರಾಷ್ಟ್ರೀಯ ಸಮಾವೇಶ ನಗರದ ಕ್ಯಾಥೋಲಿಕ್ ಕ್ಲಬ್‌ನಲ್ಲಿ ಮಾ.10ರಂದು  ನಡೆಯಲಿದೆ. ಜಾಗತಿಕ್ ಕೊಂಕಣಿ ಸಂಘಟನ್ ಮತ್ತು ಕ್ಯಾಥೊಲಿಕ್ ಕೊಂಕಣಿ ರಾಕಣ್ ಸಂಚಾಲನ್ ಆಶ್ರಯದಲ್ಲಿ ನಡೆಯಲಿರುವ ಸಮಾವೇಶವನ್ನು ಅಂದು ಬೆಳಿಗ್ಗೆ 9.30ಕ್ಕೆ ಕೊಂಕಣಿ ಸಾಹಿತಿ ವಲ್ಲಿ ವಗ್ಗ ಉದ್ಘಾಟಿಸಲಿದ್ದಾರೆ.  ಸಮಾರಂಭದ ಅಧ್ಯಕ್ಷತೆಯನ್ನು ಜೆ.ಕೆ.ಎಸ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಎರಿಕ್ ಒಝೇರಿಯೋ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗೋವಾದ ರೆವರೆಂಡ್ ಡಾ. ಪ್ರತಾಪ್ ನಾಯ್ಕ್, ನ್ಯಾಯವಾದಿ ವಿನೋದ್ ಪುಟ್ತಾದೊ, ಮಹಾರಾಷ್ಟ್ರದ ಕೊಂಕಣಿ ಕವಿ ಆನ್ಸಿ ಪಲಡ್ಕ, ಸಾಹಿತಿ ರಾಜು ಉಕ್ಕಿನಡ್ಕ ಭಾಗವಹಿಸಲಿದ್ದಾರೆ. ದೇಶದ ವಿವಿಧ ಭಾಗಗಳಿಂದ ಸಮಾವೇಶಕ್ಕೆ ಗಣ್ಯರು ಆಗಮಿಸಲಿದ್ದಾರೆ. ಕ್ಯಾಥೋಲಿಕ್ ಕೊಂಕಣಿ ಭಾಷಿಗರ ಪ್ರಸಕ್ತ ಸ್ಥಿತಿಗತಿ ಕುರಿತು ಸಮಾವೇಶದಲ್ಲಿ ಚರ್ಚೆ ನಡೆಸಲಿದ್ದಾರೆ ಎಂದು ಕ್ಯಾಥೋಲಿಕ್ ಕೊಂಕಣ್ ರಾಕಣ್ ಸಂಚಾಲನ್ ಸಂಸ್ಥೆಯ ಕಿರಣ್ ಡಿಸೋಜಾ ತಿಳಿಸಿದ್ದಾರೆ.
11ರಂದು ಮತ ಎಣಿಕೆ
ಮೂಡಿಗೆರೆ: ಪಟ್ಟಣ ಪಂಚಾಯತ್‌ನ 11 ವಾರ್ಡ್‌ಗಳಲ್ಲಿ ಗುರುವಾರ ನಡೆದ ಚುನಾವಣೆ ಫಲಿತಾಂಶದ ಎಣಿಕೆ ಕಾರ್ಯವು ಸೋಮವಾರ ನಡೆಯಲಿರುವುದು ಎಂದು ತಹಸೀಲ್ದಾರ್ ರುದ್ರಪ್ಪಾಜಿರಾವ್ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿ, ಸೋಮವಾರ ಬೆಳಿಗ್ಗೆ 8 ಗಂಟೆಯಿಂದ ತಾಲೂಕು ಕಚೇರಿಯಲ್ಲಿ ಎಣಿಕೆ ಕಾರ್ಯ ಪ್ರಾರಂಭವಾಗಲಿದೆ. 11 ವಾರ್ಡ್‌ಗಳ ಎಣಿಕೆ ಕಾರ್ಯ ನಡೆಯುತ್ತದೆ. ಅಂದು 11 ವಾರ್ಡ್‌ಗಳ ಅಭ್ಯರ್ಥಿಗಳು ಅಥವಾ ಏಜೆಂಟರು ನಿಗದಿತ ಸಮಯಕ್ಕೆ ಸಿದ್ಧರಾಗಿದ್ದು ಎಣಿಕೆ ಕಾರ್ಯದಲ್ಲಿ ಭಾಗವಹಿಸಬೇಕು. ಎಂದರು.
ಸಭೆಯಲ್ಲಿ ತಹಸೀಲ್ದಾರ್ ಗ್ರೇಡ್2 ಸೈಯದ್‌ಮುನೀರ್, ಚುನಾವಣಾಧಿಕಾರಿ ರುದ್ರಪ್ಪ, ಸಹಾಯಕ ಚುನಾವಣಾಧಿಕಾರಿ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಭವನ ಕಟ್ಟಡಕ್ಕೆ ಅನುದಾನ
ಕೊಪ್ಪ: ತಾಲೂಕಿನ ಬಿಂತ್ರವಳ್ಳಿ ಗ್ರಾಪಂ ವ್ಯಾಪ್ತಿಯ ಬಾಳಗಡಿಯ ಕನ್ನಡ ಸಾಹಿತ್ಯ ಭವನ ಕಟ್ಟಡದ ಅಭಿವೃದ್ಧಿಗಾಗಿ ರು. 10 ಲಕ್ಷ ಅನುದಾನವನ್ನು ನೀಡುವಂತೆ ತಾಲೂಕು ಕಸಾಪದಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದು ಅವರಿಗೆ ಕೋರಿಕೆ ಸಲ್ಲಿಸಿದ ಹಿನ್ನಲೆಯಲ್ಲಿ, ಪ್ರಾಧಿಕಾರದಿಂದ ರು. 10 ಲಕ್ಷ ಅನುದಾನ ಮಂಜೂರು ಮಾಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.