ಯಾರಿಗೆ ಕಾಣಲಿದೆ 'ಅಮಾವಾಸ್ಯೆ' ಬೆಳಕು..?
ಕ.ಪ್ರ.ವಾರ್ತೆ, ಚಿಕ್ಕಮಗಳೂರು,
ಚಿಕ್ಕಮಗಳೂರು ನಗರಸಭೆಗೆ ಗುರುವಾರ ನಡೆದ ಚುನಾವಣೆಯಲ್ಲಿ ಶೇ. 67.67 ಮಾತ್ರ ಮತದಾನವಾಗಿದೆ.
ಕಡಿಮೆ ಮತದಾನವಾಗಿದ್ದರಿಂದ ಯಾವ ಪಕ್ಷಕ್ಕೆ ನಷ್ಟ ಎಂಬ ಲೆಕ್ಕಾಚಾರ ನಡೆಯುತ್ತಿದೆ.
ನಗರದ 35 ವಾರ್ಡ್‌ಗಳಲ್ಲಿ ಒಟ್ಟು 79,672 ಮತದಾರರು ಇದ್ದು, ಮತ ಚಲಾವಣೆ ಮಾಡಿರುವವರು 53,915 ಮಂದಿ ಮಾತ್ರ. ಅಂದರೆ 25,757 ಜನರು ತಮ್ಮ ಹಕ್ಕು ಚಲಾಯಿಸಿಲ್ಲ.
1,729 ಮತದಾರರನ್ನು ಹೊಂದಿರುವ 25ನೇ ವಾರ್ಡ್‌ನಲ್ಲಿ ಮತದಾನವಾಗಿದ್ದು ಕೇವಲ 983 ಮಾತ್ರ. ಅಂದರೆ ಶೇ. 56.85 ರಷ್ಟು ಮಾತ್ರ ಮತದಾನವಾಗಿದೆ. ಕಡಮೆ ಮತದಾನವಾಗಿದ್ದರಿಂದ ಯಾರಿಗೆ ನಷ್ಟ ಎಂಬುದು ಸದ್ಯ ರಾಜಕೀಯ ವಲಯದ ಮುಂದಿರುವ ಪ್ರಶ್ನೆ.
ಹೆಚ್ಚು ಸ್ಥಾನದ ವಿಶ್ವಾಸ: ಬಿಜೆಪಿ ಹಾಗೂ ಕಾಂಗ್ರೆಸ್ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ. ಅವರ ಲೆಕ್ಕಚಾರದ ಪ್ರಕಾರ ಬಹುಮತ ಬರುವ ವಿಶ್ವಾಸ ಹೊಂದಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರುವುದಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಚಿಕ್ಕಮಗಳೂರು ನಗರಸಭೆಯಲ್ಲಿ 35 ವಾರ್ಡ್‌ಗಳಿದ್ದು, ನಗರಸಭೆಯ ಅಧಿಕಾರದ ಚುಕ್ಕಾಣಿ ಹಿಡಿಯಬೇಕಾದರೆ 18 ಸದಸ್ಯರ ಸಂಖ್ಯಾ ಬಲಬೇಕು. ಅದುದರಿಂದ ಸದಸ್ಯರ ಸಂಖ್ಯೆ ಕಡಿಮೆಯಾದರೆ ಇತರೆ ಪಕ್ಷಗಳ ಬೆಂಬಲ ಅನಿವಾರ್ಯವಾಗಲಿದೆ.
ಒಟ್ಟಾರೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಶಿವರಾತ್ರಿಯ ಅಮಾವಾಸ್ಯೆ ದಿನ ಹೊರ ಬೀಳಲಿದೆ. ಈ ಅಮಾವಾಸ್ಯೆ ಯಾರ ರಾಜಕೀಯ ಭವಿಷ್ಯಕ್ಕೆ ಕತ್ತಲಾಗುತ್ತದೆಯೋ ಕಾದು ನೋಡಬೇಕಾಗಿದೆ.
ನಗರದ 35 ವಾರ್ಡ್‌ಗಳಲ್ಲಿರುವ ಮತದಾರರು ಹಾಗೂ ಚಲಾವಣೆಯಾದ ಮತಗಳ ವಿವರ ಈ ಕೆಳಕಂಡಂತೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

