ಚಿಕ್ಕಮಗಳೂರು

ಕುವೆಂಪು ವಿವಿ ಪದಕ ಪ್ರವೀಣೆಯರು

Published On :

ಕ.ಪ್ರ.ವಾರ್ತೆ,ಕೊಪ್ಪ, ಮಾ.15
ಕುವೆಂಪು ವಿ.ವಿ. ಯಲ್ಲಿ ಮಂಗಳವಾರ ನಡೆದ 23ನೇ ಘಟಿಕೋತ್ಸವದಲ್ಲಿ ತಾಲೂಕಿನ ಮೂವರು ವಿದ್ಯಾರ್ಥಿನಿಯರು 6 ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ.
ಕನ್ನಡ ಎಂ.ಎ. ಸ್ನಾತಕೊತ್ತರ ವಿಭಾಗದಲ್ಲಿ ಕನ್ನಡವನ್ನು ಐಚ್ಛಿಕವಾಗಿ ಪಡೆದುಕೊಂಡು ಕನ್ನಡ ಜಾನಪದ ಸಾಹಿತ್ಯ ವಿಷಯದಲ್ಲಿ ಅಧ್ಯಯನ ನಡೆಸಿದ್ದ ಕು. ವಂದನಾ ಎಂ.ಎನ್. ಇವರು ಮೊದಲ ರ್ಯಾಂಕ್‌ನಲ್ಲಿ ತೇರ್ಗಡೆ ಹೊಂದಿದ್ದು, 4 ಚಿನ್ನದ ಪದಕ ಹಾಗೂ ನಗದು ಪುರಸ್ಕಾರವನ್ನು ಪಡೆಕೊಂಡಿದ್ದಾರೆ.
ವಂದನಾ ತಾಲೂಕಿನ ಮೇಲ್ಪಾಲ್ ಪ್ರಾಥಮಿಕ ಶಾಲಾ ಶಿಕ್ಷಕಿ ಸುಧಾಮಣಿ ಇವರ ಪುತ್ರಿಯಾಗಿದ್ದಾರೆ.
ಸಂಸ್ಕೃತ ಎಂ.ಎ.ನಲ್ಲಿ ಮೊದಲ ರ್ಯಾಂಕ್ ಅಮೃತ ಡಿ.ವಿ. ಇವರ ಪಾಲಾಗಿದ್ದು, ಚಿನ್ನದ ಪದಕದೊಂದಿಗೆ ನಗದು ಪುರಸ್ಕಾರ ಪಡೆದುಕೊಂಡಿದ್ದಾರೆ. ತಾಲೂಕಿನ ಅದ್ದಡ ಸಮೀಪದ ದಬ್ಬಲಗೊಂಡಿಯ ಕೃಷಿಕ ವೆಂಕಟರಮಣ ಮತ್ತು ಇಂದಿರ ದಂಪತಿಯ ಪುತ್ರಿ. ಯೋಗದಲ್ಲಿ ಪಿ.ಜಿ. ಡಿಪ್ಲೋಮಾ ಪದವಿಯನ್ನು ಪೂರೈಸಿರುವ ಇವರು ಪ್ರಸ್ತುತ ಶಂಕರಘದ ವಿ.ವಿ. ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಎಂ.ಕಾಂ ವಿಭಾಗದಲ್ಲಿ 2ನೇ ರ್ಯಾಂಕ್ ಗಳಿಸಿರುವ ಕು. ಪದ್ಮಿನಿ ನವಿಲೂರು ಚಿನ್ನದ ಪದಕದೊಂದಿಗೆ ನಗದು ಪುರಸ್ಕಾರ ಪಡೆದುಕೊಂಡಿದ್ದಾರೆ.
ಪದ್ಮಿನಿ ತಾಲೂಕಿನ ಬೊಮ್ಮಲಾಪುರ ಸಮೀಪದ ನವಿಲೂರಿನ ಕೃಷಿಕ ನಾಗೇಶ್ ಮತ್ತು ಗಾಯತ್ರಿ ದಂಪತಿಯ   ಪುತ್ರಿ. ಪ್ರಸ್ತುತ ಶೃಂಗೇರಿ ಜೆಸಿಬಿಎಂ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ವಿದ್ಯಾಭ್ಯಾಸ ಮಾಡಿದ ತಾಲೂಕಿನ ಶಾಲಾ- ಕಾಲೇಜು ಅಧ್ಯಾಪಕ ವರ್ಗದವರು ಇವರ ಸಾಧನೆಯನ್ನು ಪ್ರಶಂಶಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರಾಥಮಿಕ ಶಾಲೆ ನಿವೃತ್ತ ಶಿಕ್ಷಕಿಗೆ ಬೀಳ್ಕೊಡುಗೆ
ಕ.ಪ್ರ ವಾರ್ತೆ, ಚಿಕ್ಕಮಗಳೂರು, ಮಾ.15
ತಾಲೂಕಿನ ಕೈಮರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 12 ವರ್ಷಗಳಿಂದ ಮುಖ್ಯಶಿಕ್ಷಕಿಯಾಗಿ ಕರ್ತವ್ಯನಿರ್ವಹಿಸುತ್ತಿದ್ದ ಕೆ.ಆರ್. ರಾಧಮ್ಮ ಅವರಿಗೆ ಸೇವೆಯಿಂದ ನಿವೃತ್ತರಾದ ಹಿನ್ನೆಲೆಯಲ್ಲಿ ಇತ್ತೀಚೆಗೆ ಬೀಳ್ಕೊಡುಗೆ ನೀಡಲಾಯಿತು. ರಘು ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ರಾಧಮ್ಮರನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಪ್ರಭಾರಿ ಮುಖ್ಯಶಿಕ್ಷಕ ಸಿ.ಎಸ್. ದುಗ್ಗೇಗೌಡ ಮಾತನಾಡಿದರು. ಚಂದ್ರೇಗೌಡ,  ಗುರುವೇ ಗೌಡ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.