ಭದ್ರಾ ಪಥ ಬದಲಾವಣೆಗೆ ಒತ್ತಾಯಿಸಿ ಜಾಥಾ
ತರೀಕೆರೆ: ತಾಲೂಕಿಗೆ ಶಾಶ್ವತ ನೀರಾವರಿ ವ್ಯವಸ್ಥೆ ಮತ್ತು ಭದ್ರಾ ಮೇಲ್ದಂಡೆ ಯೋಜನೆಯ ಪಥ ಬದಲಾವಣೆ ಮಾಡಿ ನೀರು ಒದಗಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದಿಂದ ಸೋಮವಾರ ಅಜ್ಜಂಪುರದಿಂದ ತರೀಕೆರೆ ವರೆಗೆ 22 ಕಿ.ಮೀ ರೈತರ ಕಾಲ್ನಡಿಗೆ ಜಾಥಾ ಮತ್ತು ವಿವಿಧ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಎತ್ತಿನ ಗಾಡಿಗಳ ಮೆರವಣಿಗೆ ಏರ್ಪಡಿಸಲಾಗಿತ್ತು.
ಪಟ್ಟಣದ ವಿಧಾನ ಸೌಧದ ಆವರಣದಲ್ಲಿ ನೆಡೆಯುತ್ತಿರುವ ಅನಿರ್ಥಿಷ್ಠಾವದಿ ಹೋರಾಟದ ಹಿನ್ನಲೆಯಲ್ಲಿ ಹಮ್ಮಿಕೊಂಡಿರುವ ಹೋರಾಟದಲ್ಲಿ ನಂದೀಪುರದ ನಂದೀಶ್ವರ ಸ್ವಾಮಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ಅಧ್ಯಕ್ಷ ಈ. ಹಾಲೇಶಪ್ಪ, ಕಾರ್ಯಾಧ್ಯಕ್ಷ ಎಸ್.ಬಿ. ಪುಟ್ಟಮಲ್ಲಪ್ಪ,
ಉಪಾಧ್ಯಕ್ಷ ಟಿ.ಎಸ್. ಗಿರಿರಾಜ್, ಪ್ರಧಾನ ಕಾರ್ಯದರ್ಶಿ ಸುರೇಶ್, ಖಚಾಂಚಿ ರುದ್ರೇಗೌಡ, ಎಚ್.ಎಸ್. ಸೋಮೇಶೇಖರ್, ಜೆ.ಎಸ್. ರೇವಣಸಿದ್ದಪ್ಪ, ತಾಪಂ ಸದಸ್ಯ ರಾಜ್ಕುಮಾರ್, ರಾಜಶೇಖರ್, ಯತೀಶ್ ಷಣ್ಮುಖ, ಪುಟ್ಟಣ್ಣ, ಈಶ್ವರಪ್ಪ ಮತ್ತು ಸುತ್ತಮುತ್ತಲ ಗ್ರಾಮದ ರೈತರು ಭಾಗವಹಿಸಿದ್ದರು.
ಒಣಗಿದ ತಂಗು, ಅಡಕೆ ಸೋಗೆ: ತಾಲೂಕಿನಲ್ಲಿ ನೀರಿಲ್ಲದೆ ಒಣಗಿದ ತೆಂಗು ಮತ್ತು ಅಡಕೆ ಸೋಗೆ, ತೆಂಗು ಅಡಕೆ ಗುಳ್ಳುಗಳನ್ನು ಎತ್ತಿನ ಗಾಡಿಗೆ ಕಟ್ಟಿ ಪ್ರದರ್ಶಸಲಾಗಿತ್ತು. ನಂದೀಪುರ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಜ್ಜಂಪುರ ಮಹಾತ್ಮಾಗಾಂಧಿ ವೃತ್ತದಲ್ಲಿ ಬೆಳಿಗ್ಗೆ ರೈತರ ಕಾಲ್ನಡಿಗೆ
ಜಾಥಾ ಉದ್ಗಾಟನೆ ನೆರವೇರಿಸಿ ಮಾತನಾಡಿ, ನಮಗೆ ನೀರು ಬೇಕು, ತರೀಕೆರೆ ತಾಲೂಕು ಸಮಗ್ರ ನೀರಾವರಿಯಾಗಬೇಕು, ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಆಳ ಕಾಲುವೆ ಮತ್ತು ಸುರಂಗ ಮಾರ್ಗ
ಯಾವುದೇ ಕಾರಣಕ್ಕೂ ಬೇಡವೇ ಬೇಡ, ತಾಲೂಕಿನಲ್ಲಿ ಈ ಸಾರಿ ತೀವ್ರವಾದ ಬರಗಾಲ ತಲೆದೋರಿದೆ, ನೀರಿಗೂ ಅನ್ನಕ್ಕೂ ದಾರಿ ಇಲ್ಲದಂತಾಗಿದೆ ತಾಲೂಕಿನ ಸಮಗ್ರ ಜನತೆಗಾಗಿ ಹೋರಾಟ ಅಗತ್ಯವಾಗಿದೆ. ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ರೈತರ ಹೋರಾಟ ಆಗಲಿ ಎಂದು ಅವರು ತಿಳಿಸಿದರು.
ಯುವ ಶಕ್ತಿಯಿಂದ ಸಾಧ್ಯ: ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಪ್ರಧಾನ ಕಾರ್ಯದರ್ಶಿ ಸುರೇಶ್ ಮಾತನಾಡಿ, ಹೋರಾಟದಲ್ಲಿ ಕಾಲೇಜು ವಿದ್ಯಾರ್ಥಿಗಳು
ಭಾಗವಹಿಸಿರುವುದು ಸಂತೋಷದ ವಿಷಯ. ಹೋರಾಟ ಯಶಸ್ವಿಗೊಳಿಸಲು ಯುವಶಕ್ತಿಯಿಂದ ಸಾಧ್ಯ ಎಂದು ತಿಳಿಸಿದರು. ತರೀಕೆರೆಯಲ್ಲಿ ನೆಡೆದ ಸಭೆಯಲ್ಲಿ ಎಚ್.ಎಸ್. ಸೋಮಶೇಖರ್ ಮಾತನಾಡಿ, ತಾಲೂಕಿನ ರೈತರಿಗೆ ಅನ್ಯಾಯವಾಗಿದೆ. ರೈತರ ಚಳುವಳಿಯನ್ನು ಹತ್ತಿಕ್ಕುವ ಮತ್ತು ಹಾದಿ ತಪ್ಪಿಸುವ ಪ್ರಯತ್ನ ನೆಡಯುತ್ತಿದೆ ಎಂದು ಆರೋಪಿಸಿದರು.
15 ದಿನ ಅವಧಿ: ಪ್ರಧಾನ ಕಾರ್ಯದರ್ಶಿ ಸುರೇಶ್ ಮಾತನಾಡಿ, ತಾಲೂಕಿಗೆ ನೀರಾವರಿ ವ್ಯವಸ್ಥೆ ಕಲ್ಪಿಸಲು ಕೋರಿ 110 ದಿನಗಳಿಂದ ಅನಿರ್ಧಿಷ್ಠ ಮುಷ್ಕರ ನೆಡೆಯುತ್ತಿದೆ. ತಾಲೂಕಿನಲ್ಲಿ 15 ದಿನದೊಳಗಾಗಿ ರೈತರ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಸರ್ಕಾರಿ ಕಚೇರಿಗಳಿಗೆ ಬೀಗ ಹಾಕಲಾಗುತ್ತದೆ ಎಂದು ಎಚ್ಚರಿಸಿದರು.
ನಂದೀಶ್ವರ ಸ್ವಾಮೀಜಿ, ರುದ್ರೇಗೌಡ, ಸುರೇಶ್ ಮಾತನಾಡಿದರು. ರೈತರ ಜಾಥಾದಲ್ಲಿ ಉತ್ಸಾಹದಿಂದ ಭಾಗವಹಿಸಿದ ನಂದೀಪುರ ಶ್ರೀಗಳು ರೈತರೊಡಗೂಡಿ ಅಜ್ಜಂಪುರದಿಂದ ತರೀಕೆರೆ ವರೆಗೆ ಕಾಲ್ನಡಿಗೆ ಜಾಥಾದಲ್ಲಿ ನೆಡದು ಬಂದರು. ಪಟ್ಟಣದ ಮಹಾತ್ಮಾಗಾಂದಿ ವೃತ್ತದ ಬಳಿ ನೂರಾರು ಎತ್ತಿನ ಗಾಡಿಗಳು ಎತ್ತಿನ ಕೊರಳು ಬಿಚ್ಚಿ ರಸ್ತೆ ತಡೆ ಮತ್ತು ವೃತ್ತದ ಸುತ್ತ ಎತ್ತಿನ ಗಾಡಿ ನಿಲ್ಲಿಸಿ ಮುಷ್ಕರ ಮಾಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

