ಚಿಕ್ಕಮಗಳೂರು

ಜಾತ್ರೆಯಲ್ಲಿ ಸುಂಕ ವಸೂಲಿಗೆ ವಿರೋಧ

Published On :

ಕ.ಪ್ರ.ವಾರ್ತೆ \ ಸೊರಬ \  ಮಾ.19
ಪ್ರಸಿದ್ಧ ಚಂದ್ರಗುತ್ತಿ ಜಾತ್ರೆ ಆರಂಭವಾಗುತ್ತಿದ್ದಂತೆಯೇ ಇಲ್ಲಿನ ಸ್ಥಳೀಯ ಆಡಳಿತ ಗ್ರಾಮಕ್ಕೆ ಬರುವ ಪ್ರವಾಸಿಗರನ್ನು ತಡೆದು ವಾಹನ ಶುಲ್ಕ ವಸೂಲಿ ಮಾಡುತ್ತಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.
ಗ್ರಾಪಂ ಆಡಳಿತ ಸುಂಕ ವಸೂಲಿಗೆಂದು ವರ್ಷದ ಗುತ್ತಿಗೆಗೆ ಜಾತ್ರೆ ವೇಳೆ ಪ್ರತ್ಯೇಕ ಹರಾಜು ಕರೆಯುತ್ತದೆ. ಪ್ರತಿ ವರ್ಷ ಹುಣ್ಣಿಮೆ, ದಸರಾ ಹಾಗೂ ಜಾತ್ರೆ ವೇಳೆ ವಾಹನ ಶುಲ್ಕದ ವಸೂಲಾತಿ ನಡೆಯುತ್ತಿದ್ದು, ಇಲ್ಲಿ ಈಗ ನಾಲ್ಕು ಮತ್ತು ಹೆಚ್ಚಿನ ಚಕ್ರಗಳ ವಾಹನಗಳಿಗೆ 30, ತ್ರಿಚಕ್ರ, ದ್ವಿಚಕ್ರ ವಾಹನಗಳಿಗೆ 20 ರು.ಶುಲ್ಕ ವಿಧಿಸಲಾಗುತ್ತಿದೆ.
ಜಾತ್ರೆ ಒಂದು ವಾರವಿದೆ ಎನ್ನುವಷ್ಟರಲ್ಲೆ ವಾಹನ ಶುಲ್ಕದ ವಸೂಲಿ ನಡೆಯುತ್ತಿದ್ದು, ಹಿಂದಿನ ಶುಲ್ಕಕ್ಕಿಂತ ಎರಡು ಪಟ್ಟು ಜಾಸ್ತಿಯಾಗಿದೆ. ವಾಹನಗಳಿಗೆ ಸಮರ್ಪಕ ಪಾರ್ಕಿಗ್ ವ್ಯವಸ್ಥೆಯೂ ಇಲ್ಲ. ಒಟ್ಟಾರೆ ದೇವರ ಹೆಸರಿನಲ್ಲಿ ಇದೊಂದು ವ್ಯವಸ್ಥಿತ ಲೂಟಿ ಎಂದು ಕ್ಷೇತ್ರಕ್ಕೆ ಬಂದ ಭಕ್ತಾದಿಗಳು ನೋವು ತೋಡಿಕೊಂಡಿದ್ದಾರೆ.
ಶುಲ್ಕ ಕಡೆಮೆಗೊಳಿಸಲಿ: ಪ್ರಸ್ತುತ ಶುಲ್ಕ ಹೊರೆಯಾಗುತ್ತದೆ. ವಾಹನ ನಿಲ್ಲಿಸಲು ವ್ಯವಸ್ಥೆ ಕಲ್ಪಿಸದೆ ಶುಲ್ಕ ವಸೂಲಿ ನಡೆಸುವ ಮುನ್ನ ಸಾಮಾನ್ಯ ಜನರ ಜೀವನ ಮಟ್ಟ ಎಂತದ್ದು ಎಂದು ನೋಡಬೇಕು. ಕೂಡಲೆ ಶುಲ್ಕ ವಿಚಾರ ಕುರಿತಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಚರ್ಚಿಸಿ ಮುಂದಿನ ದಿನಗಳಲ್ಲಾದರೂ ಕಡಿಮೆಗೊಳಿಸಲಿ ಎಂದು ಒತ್ತಾಯಿಸಿದ್ದಾರೆ.
ಸಮಿತಿ ಅಳಲು: ಕೇವಲ ಜಾತ್ರೆ ವೇಳೆ ವಾಹನಗಳ ಮೇಲೆ ವಿಧಿಸಲಾಗುವ ಸುಂಕ 10 ಲಕ್ಷಕ್ಕೂ ಅಧಿಕ ಆದಾಯ ತರುತ್ತದೆ.
ಒಟ್ಟಾರೆ ಜಾತ್ರೆಯ ವೇಳೆ ಬೇರೆಬೇರೆ ಬಾಬತ್ತಿನಿಂದ ಲಕ್ಷಾಂತರ ರು. ಸಂಗ್ರಹವಾಗುತ್ತದೆ. ದೇಗುಲ ಮುಜರಾಯಿಗೆ ಸೇರಿರುವುದರಿಂದ ಇದರಲ್ಲಿ ದೇವಸ್ಥಾನಕ್ಕೆ ಸೇರುವ ಬಾಬತ್ತು ಗ್ರಾಮಾಡಳಿತಕ್ಕಾಗಲಿ, ಸಮಿತಿಗಾಗಲಿ ಸಿಗುವುದಿಲ್ಲ, ಇಷ್ಟೆಲ್ಲ ಆದಾಯವಿದ್ದರೂ ಇಲ್ಲಿನ ಮೂಲ ಸಮಸ್ಯೆಗಳು ಬೆಟ್ಟದಷ್ಟೆ ಇದೆ.
ಭಕ್ತಾದಿಗಳಿಗೆ ಸಮರ್ಪಕ ಸೌಲಭ್ಯ ಒದಗಿಸಿಕೊಡುವುದು ಕಷ್ಟದಾಯಕವಾಗಿದೆ ಎಂದು ಜಾತ್ರಾ ಸಮಿತಿ, ದೇಗುಲ ಸಮಿತಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.