ವೈಭವಯುತ ದುರ್ಗಾಂಬೆ ರಥೋತ್ಸವ
ಶೃಂಗೇರಿ: ಇಲ್ಲಿನ ಶ್ರೀ ಶಾರದಾ ಪೀಠದ ನಾಲ್ಕು ರಕ್ಷಣಾ ದೇವತೆಗಳಲ್ಲಿ ಪ್ರಮುಖವಾಗಿರುವ ಹರಾವರಿ ಶ್ರೀ ದುರ್ಗಾಂಬೆಯ ಮಹಾರಥೋತ್ಸವ ಮಂಗಳವಾರ ವೈಭವಯುತವಾಗಿ ಜರುಗಿತು.
ದಟ್ಟ ಕಾನನಗಳ ನಡುವೆ ಸಹಸ್ರಾರು ಸಂಖ್ಯೆಯ ಭಕ್ತ ಸಮೂಹದ ನಡುವೆ ವಿಪ್ರೋತ್ತಮ ವೇದ ಘೋಷಗಳೊಂದಿಗೆ ರಥ ಸಾಗಿತು. ಸುಡು ಬಿಸಿಲನ್ನು ಲಕ್ಕಿಸದೇ ಜಮಾಯಿಸಿದ್ದ ಸಹಸ್ರಾರು ಸಂಖ್ಯೆಯ ಭಕ್ತಾದಿಗಳು ರಸ್ತೆಯ ಇಕ್ಕೆಗಳಲ್ಲಿ ನಿಂತು ದುರ್ಗಾಂಬೆಯನ್ನು ಭಕ್ತಿ ಭಾವದಿಂದ ನಮಿಸುತ್ತಿದ್ದರು. ರಥೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ಬೆಳಗ್ಗೆಯಿಂದಲೇ ದೇವಿಗೆ ವಿಶೇಷ ಪೂಜೆ ಸೇರಿದಂತೆ ಧಾರ್ಮಿಕ ಕಾರ್ಯಗಳು ನಡೆದವು. ಛತ್ರ ಚಾಮರ, ವಾದ್ಯ, ಶ್ರೀ ಮಠದ ಆನೆಗಳಾದ ಲಕ್ಷ್ಮಿ, ಜಯಲಕ್ಷ್ಮಿ, ಹಸುಗಳು ರಥೋತ್ಸವದಲ್ಲಿ ಪಾಲ್ಗೊಂಡು ಮೆರವಣಿಗೆಗೆ ವಿಶೇಷ ಮೆರುಗು ತಂದವು. ಮಹಾಮಂಗಳಾರತಿಯ ನಂತರ ರಥೋತ್ಸವ ಜರುಗಿತು.
ಭಕ್ತಾದಿಗಳು ದೇವಿಯ ಸನ್ನಿಧಿಯಲ್ಲಿ ದುರ್ಗಾಸಪ್ತಶತಿ ಪಾರಾಯಣ, ತುಲಾಭಾರ ಸೇವೆ, ಕುಂಕುಮಾರ್ಚನೆ ಸೇವೆಗಳನ್ನು ಅರ್ಪಿಸಿದರು. ಭಕ್ತಾದಿಗಳಿಗೆಲ್ಲ ಪಾನಕ, ಪ್ರಸಾದ ಭೋಜನ ವ್ಯವಸ್ಥೆ ಏರ್ಪಡಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

