ಭಗತ್,ಸಿಂಗ್ ಯುವಕರಿಗೆ ಸ್ಫೂರ್ತಿ
ಕ.ಪ್ರ.ವಾರ್ತೆ,ಚಿಕ್ಕಮಗಳೂರು, ಮಾ. 24
ದೇಶದಲ್ಲಿ ನವ ವಸಾಹತುಶಾಹಿ, ಗುಲಾಮಗಿರಿ ಇದ್ದು, ಇಂತಹ ಸಂದರ್ಭದಲ್ಲಿ ಭಗತ್,ಸಿಂಗ್ ಅವರ ಆದರ್ಶಗಳು ಯುವ ಜನರಿಗೆ ಸ್ಪೂರ್ತಿದಾಯಕವಾಗಲಿದೆ ಎಂದು ಭಗತ್,ಸಿಂಗ್ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಗೌರವಾಧ್ಯಕ್ಷ ಪ್ರಕಾಶ್ ಹೇಳಿದ್ದಾರೆ.
ಭಗತ್,ಸಿಂಗ್ ಆಟೋ ಚಾಲಕರು ಮತ್ತು ಮಾಲೀಕರ ಸಂಘ ಹಮ್ಮಿಕೊಂಡಿದ್ದ ಭಗತ್,ಸಿಂಗ್,ರವರ 82ನೇ ಹುತಾತ್ಮ ದಿನಾಚರಣೆ ಅಂಗವಾಗಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ,ುಗಳನ್ನು ವಿತರಿಸಿ ಮಾತನಾಡಿದ ಅವರು, ಯುವಜನರು ಭಗತ್,ಸಿಂಗ್ ಕನಸುಗಳನ್ನು ಸಾಕಾರಗೊಳಿಸುವಲ್ಲಿ ಮುಂದಡಿ ಇಡಬೇಕು ಎಂದು ಕರೆ ನೀಡಿದರು.
ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಸರ್ಜನ್ ಡಾ. ಓ.ಜಿ. ಪ್ರಕಾಶ್ ಮಾತನಾಡಿ, ಇಂತಹ ಕಾರ್ಯಕ್ರಮಗಳು ಸಮಾಜಕ್ಕೆ ಮಾರ್ಗದರ್ಶನವಾಗಲಿ ಎಂದು ಹಾರೈಸಿದರು.
ಡಾ. ಕುಮಾರನಾಯಕ್ ಮಾತನಾಡಿ, ಒಳ್ಳೆಯ ಕೆಲಸಗಳಿಗೆ ಸಮಾಜದ ಸಹಕಾರ ಇದ್ದೆ ಇರುತ್ತದೆ. ನಿಮ್ಮ ಸಮಾಜಸೇವೆಗೆ ಜನರಿಂದ ಬೆಂಬಲ ಸಿಗಲಿ ಎಂದು ಹೇಳಿದರು.
ದೇಶಾಭಿಮಾನ ಬೆಳೆಸಿಕೊಳ್ಳಿ: ಸಂಘದ ಖಜಾಂಚಿ ಜಾನ್ ಮಾತನಾಡಿ, ಇಂದಿನ ಯುವಕರು ಹಲವಾರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ.
ಇವುಗಳಿಂದ ಹೊರ ಬರಬೇಕು. ಯುವಕರು ದೇಶಾಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಐ.ಎಂ. ಪೂರ,ೇಶ್ ಮಾತನಾಡಿ, ವಸಾಹತುಶಾಹಿ, ಶೋಷಣೆಯ ವಿರುದ್ಧ ಕ್ರಾಂತಿಕಾರಿ ಹೋರಾಟ ಮಾಡಿ ತನ್ನ 23ನೇ ವಯಸ್ಸಿಗೆ ನಗು ನಗುತ್ತಲೇ ನೇಣುಗಂಭಕ್ಕೇರಿದ ಭಗತ್,ಸಿಂಗ್, ರಾಜಗುರು, ಸುಖದೇವ್,ರವರ ಕನಸುಗಳು ಹಾಗೇ ಉಳಿದುಕೊಂಡಿವೆ ಎಂದು ಹೇಳಿದರು.
ಶೋಷಣೆ ತೀವ್ರ: ನವ ವಸಾಹತು ಶೋಷಣೆ ಇಂದು ತೀವ್ರಗೊಂಡಿದೆ. ಬಹು ರಾಷ್ಟ್ರೀಯ ಕಂಪನಿಗಳು ಇಂದು ಹಲವಾರು ಯೋಜನೆಗಳ ಮೂಲಕ ಭಾರತವನ್ನು ಪ್ರವೇಶಿಸಿ ಲೂಟಿ ಹೊಡೆಯುತ್ತಿವೆ.
ಈಸ್ಟ್ ಇಂಡಿಯಾ ಕಂಪನಿಯನ್ನು ದೇಶದಿಂದ ಹೊರ ಹಾಕಲು 200 ವರ್ಷ ತೆಗೆದುಕೊಂಡ ನಾವು ಇಂದು ಸಾವಿರಾರು ಕಂಪನಿಗಳನ್ನು ಹೊರ ಹಾಕಲು 2ನೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮುಂದಾಗಬೇಕಾಗಿದೆ. ಆಗ ಮಾತ್ರ ಭಗತ್,ಸಿಂಗ್,ರ ಸಂಪೂರ, ಸ್ವಾತಂತ್ರ್ಯದ ಕನಸು ನನಸಾಗಲು ಸಾಧ್ಯ ಎಂದರು.
ಸಂಘದ ಕಾರ್ಯದರ್ಶಿ ರುದ್ರೇಶ್ ಮಾತನಾಡಿದರು. ಸದಸ್ಯರುಗಳಾದ ರಫೀಕ್, ಅಬೀಬುಲ್ಲಾ, ಸೋಮಶೇಖರ್, ಮಂಜುನಾಥ್, ಗಂಗಾಧರ್, ಮೋಹನ್, ಸುಬ್ರಹ್ಮಣ್ಯ ಉಪಸ್ಥಿತರಿದ್ದರು. ಸಾಕೀರ್ ಕಾರ್ಯಕ್ರಮ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

