ಕಡಿಮೆಯಾಗುತ್ತಿರುವ ದುರಭ್ಯಾಸಗಳು
ಕ.ಪ್ರ.ವಾರ್ತೆ ಟಿ ನ.ರಾ. ಪುರ ಟಿ ಮಾ.25
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗ್ರಾಮಗಳಲ್ಲಿ ಮದ್ಯಪಾನದಂತಹ ದುರಭ್ಯಾಸಗಳು ಕಡಿಮೆಯಾಗುತ್ತಿದೆ ಎಂದು ಕಾನೂರು ಸಿದ್ದಿವಿನಾಯಕ ದೇವಸ್ಥಾನದ ಸಮಿತಿ ಅಧ್ಯಕ್ಷ ಕೆ. ರಂಗಪ್ಪಯ್ಯ ತಿಳಿಸಿದರು.
ಅವರು ಸೋಮವಾರ ವಗ್ಗಡೆಕಲ್ನಲ್ಲಿ ನಡೆದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಗ್ಗಡೆಕಲ್ಲು ಹಾಗೂ ಗುಡ್ಡೇಹಳ್ಳ ಪ್ರಗತಿಬಂಧು, ಸ್ವಸಹಾಯ ಸಂಘಗಳ ಒಕ್ಕೂಟದ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕಳೆದ 31 ವರ್ಷಗಳ ಹಿಂದೆ ಧರ್ಮಸ್ಥಳ ಧರ್ಮಾಧಿಕಾರಿಗಳು ಕಂಡ ಕನಸು ಈಗ ನನಸಾಗಿದೆ. ಗ್ರಾಮಗಳಲ್ಲಿ ಜಾತಿ, ಮತ ಬೇದವಿಲ್ಲದೆ ಎಲ್ಲ ಕುಟಂಬಗಳು ಈಗ ಆರ್ಥಿಕವಾಗಿ, ಸಾಮಾಜಿಕವಾಗಿ ಮುಂದೆ ಬರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
2015ಕ್ಕೆ ರಾಜ್ಯಕ್ಕೆ ವಿಸ್ತರಣೆ: ಮುಖ್ಯ ಅತಿಥಿಯಾಗಿದ್ದ ಧ.ಗ್ರಾ. ಯೋಜನೆಯ ಕೊಪ್ಪ ಕ್ಷೇತ್ರದ ಯೋಜನಾಧಿಕಾರಿ ಎ.ಎಸ್. ಸುಕೇಶ್ ಮಾತನಾಡಿ, 1982ರಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಪ್ರಾರಂಭಗೊಂಡ ಧ.ಗ್ರಾ. ಯೋಜನೆ ಈಗ ರಾಜ್ಯದ 16 ಜಿಲ್ಲೆಗೆ ವಿಸ್ತರಣೆಗೊಂಡಿದೆ. ಏಪ್ರಿಲ್ ತಿಂಗಳಿಂದ ಮತ್ತೆ 6 ಜಿಲ್ಲೆಗೆ ವಿಸ್ತರಣೆಗೊಳ್ಳಲಿದೆ. 2015ರ ಹೊತ್ತಿಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಧ.ಗ್ರಾ ಯೋಜನೆ ಪ್ರಾರಂಭಿಸಬೇಕು ಎಂಬುದು ಡಿ. ವೀರೇಂದ್ರ ಹೆಗ್ಗಡೆಯವರ ಕನಸಾಗಿದೆ.
ನರಸಿಂಹರಾಜಪುರ, ಕೊಪ್ಪ, ಶೃಂಗೇರಿ ತಾಲೂಕುಗಳು ಸೇರಿ ಕೊಪ್ಪ ಕ್ಷೇತ್ರದಲ್ಲಿ ಕಳೆದ 6 ವರ್ಷಗಳ ಹಿಂದೆ ಪ್ರಾರಂಭಗೊಂಡ ಯೋಜನೆಯಲ್ಲಿ ಈಗ 2600 ಸ್ವಸಹಾಯ ಸಂಘಗಳಿವೆ. ರು. 96 ಕೋಟಿ ಪ್ರಗತಿನಿಧಿಯ ಸಾಲ ನೀಡಿದ್ದೇವೆ. ಇದರಲ್ಲಿ ರು. 32 ಕೋಟಿ ಮಾತ್ರ ಸಾಲ ಬಾಕಿ ಉಳಿದಿದೆ. ರು. 6 ಕೋಟಿ 54 ಲಕ್ಷ ಉಳಿತಾಯವಾಗಿದೆ.
ಸಮುದಾಯ ಯೋಜನೆಗಳಿಗೆ ಶೌಚಾಲಯ ಸೇರಿದಂತೆ ಹಲವು ಯೋಜನೆ ಜಾರಿಗೆ ತರಲಾಗಿದೆ. 96 ವಿದ್ಯಾರ್ಥಿಗಳಿಗೆ ಸುಜ್ಞಾನನಿಧಿ, 32 ಅನಾಥರಿಗೆ ಮಾಶಾಸನ ನೀಡಿದ್ದೇವೆ. ರೈತರಿಗೆ ಕೃಷಿ ವಿಚಾರ ಸಂಕಿರಣ, ರಾಜ್ಯ ಹಾಗೂ ಅಂತರರಾಜ್ಯ ಕೃಷಿ ಪ್ರವಾಸ ಕೈಗೊಂಡಿದ್ದೇವೆ ಎಂದು ಅವರು ವಿವರಿಸಿದರು.
ಸಭೆಯ ಅಧ್ಯಕ್ಷತೆಯನ್ನು ಗುಡ್ಡೇಹಳ್ಳ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ರಮೇಶ್ ವಹಿಸಿದ್ದರು. ಅತಿಥಿಗಳಾಗಿ ವಗ್ಗಡೆಕಲ್ಲು ಚೈತ್ರಶ್ರೀ ವಾಲೀಬಾಲ್ ಕ್ಲಬ್ ಅಧ್ಯಕ್ಷ ಆರ್. ಗೋಪಿ, ಸಿ.ಕೆ. ಗುರುಶಾಂತಪ್ಪ, ಗುಬ್ಬಿಗಾ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ವಾಸುದೇವ್, ಗುಡ್ಡೇಹಳ್ಳ ಪ್ರಗತಿ ಬಂಧು ಸಂಘಗಳ ಒಕ್ಕೂಟದ ನೂತನ ಅಧ್ಯಕ್ಷ ಪುರುಶೋತ್ತಮ್, ವಗ್ಗಡೆಕಲ್ಲು ಒಕ್ಕೂಟದ ನಿರ್ಗಮಿಸುವ ಅಧ್ಯಕ್ಷ ಡೇವಿಡ್ ಕಾರ್ಡೋಜ್, ನೂತನ ಅಧ್ಯಕ್ಷ ಉಷಾ ಮೋಹನ್ ಇದ್ದರು.
ನೂತನ ಅಧ್ಯಕ್ಷರಿಗೆ ವೀಳ್ಯ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಲಾಯಿತು. ನಿಶಾ ವರದಿ ವಾಚಿಸಿದರು. ಉಷಾ ಮೋಹನ್ ಪ್ರಾರ್ಥಿಸಿ, ಸಂಧ್ಯಾಪ್ರಕಾಶ್ ಸ್ವಾಗತಿಸಿದರು. ಗಣೇಶ್ ನಿರೂಪಿಸಿದರು. ಗಿರೀಶ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

