ಟ್ರಾಫಿಕ್ ನಿಯಂತ್ರಣ: ಗೃಹ ರಕ್ಷಕದಳಕ್ಕೆ ಬೇಡ
ಕ.ಪ್ರ.ವಾರ್ತೆ ಟಿ ಶೃಂಗೇರಿ ಟಿ ಮಾ.26
ಪಟ್ಟಣದ ಮುಖ್ಯರಸ್ತೆಯಲ್ಲಿ ಗೃಹರಕ್ಷಕ ದಳವರಿಂದ ಪ್ರವಾಸಿಗರು, ಸ್ಥಳೀಯರು ಸೇರಿದಂತೆ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದ್ದು, ಈ ಬಗ್ಗೆ ಜಿಲ್ಲಾ ವರಿಷ್ಠಾಧಿಕಾರಿಗಳು ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ. ನೆರೆ ಪ್ರವಾಹ, ಚುನಾವಣೆ ಭದ್ರತೆ ಕರ್ತವ್ಯ ನಿರ್ವಹಿಸುತ್ತಿದ್ದ ಗೃಹರಕ್ಷಕ ದಳದ ಸಿಬ್ಬಂದಿಗಳಿಗೆ ಕಳೆದ ಕೆಲ ತಿಂಗಳುಗಳಿಂದ ಟ್ರಾಫಿಕ್ ನಿಯಂತ್ರಣದ ಅಧಿಕಾರ ನೀಡಿರುವುದು ನಾಗರಿಕರಿಗೆ ತಲೆನೋವಾಗಿ ಪರಿಣಮಿಸಿದೆ.
ಟ್ರಾಫಿಕ್ ಸಮಸ್ಯೆ: ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ತಡೆದು ಪರವಾನಗಿ, ಚಾಲನಾ ಲೈಸೆನ್ಸ್ ಕೇಳುವ ನೆಪದಲ್ಲಿ ತಗಾದೆ ತೆಗೆಯುವುದರಿಂದ ವಾಹನ ನಿಲುಗಡೆಯಾಗುತ್ತ ಟ್ರಾಫಿಕ್ ಸಮಸ್ಯೆ
ಉದ್ಘವಿಸುತ್ತಿದೆ.
ಪೊಲೀಸ್ ಇಲಾಖೆ ಇಲ್ಲದಂತೆ ತಮ್ಮ ಅಧಿಕಾರ ಚಲಾಯಿಸುತ್ತಿದ್ದಾರೆ. ಇದ್ದರೂ ಕೈಕಟ್ಟಿ ಕುಳಿತಂತೆ ಇರುವುದು ಸಾರ್ವಜನಿಕರಲ್ಲಿ ಆಶ್ಟರ್ಯ ಹುಟ್ಟಿಸಿದೆ. ವಾಹನಗಳನ್ನು ತಡೆಯುವುದು ಅಲ್ಲದೆ ಅವ್ಯಾಚ್ಚ ಶಬ್ದಗಳಿಂದ ನಿಂದಿಸುವುದು, ಕೆಲವರು ಹಲ್ಲೆ ನಡೆಸಲು ಮುಂದಾದ ಪ್ರಸಂಗಗಳು ನಡೆದಿವೆ. ಪೊಲೀಸರು ಯಾರು, ಗೃಹರಕ್ಷಕ ದಳದವರು ಯಾರು ಎನ್ನುವ ಗೊಂದಲ ನಾಗರಿಕರಲ್ಲಿ ಉಂಟಾಗಿದೆ. ಇವರಿಗೆ ಈ ಅಧಿಕಾರ ನೀಡಿದವರು ಯಾರು ಎನ್ನುವ ಪ್ರಶ್ನೆ ಪಟ್ಟಣದ ಪ್ರತಿ ನಾಗರಿಕರನ್ನು ಕಾಡುತ್ತಿದೆ.
ಹಣ ಕೀಳುವ ದಂಧೆ: ಕೆಲವರು ಉನ್ನತ ಪೊಲೀಸ್ ಅಧಿಕಾರಿಗಳ ಹೆಸರು ಹೇಳಿಕೊಂಡು ಹೆದರಿಸಿ ಹಣ ಕೀಳುವ ದಂಧೆಗೂ ಮುಂದಾಗಿದ್ದಾರೆನ್ನಲಾಗಿದೆ. ಗ್ರಾಹಕರು ವೈನ್ ಶಾಪ್‌ನಿಂದ ಹಣಕೊಟ್ಟು ವೈನ್ ಕೊಂಡೊಯ್ಯತ್ತಿದ್ದರು.
ಅವರನ್ನು ಬೆನ್ನಟ್ಟಿ ಅಕ್ರಮ ಮದ್ಯ ಸಾಗಿಸುತ್ತಿದ್ದೀರೆಂದು ಹೆದರಿಸಿ ಅಧಿಕಾರ ಚಲಾಯಿಸಲು ಹೋಗಿ ಗೂಸ ತಿಂದ ಘಟನೆಯೂ ನಡೆದಿದೆ.
ಇವರ ವರ್ತನೆ ನೋಡುತ್ತಿದ್ದರೆ ಜನ ಸಾಮಾನ್ಯರು ಸಂಚರಿಸುವುದು ಕಷ್ಟವಾಗಿದೆ. ಇದನ್ನು ಪ್ರಶ್ನಿಸಲು ಹೋದ ಪತ್ರಕರ್ತಕೊಬ್ಬರ ಮೇಲೆಯೂ ಹರಿಹಾಯ್ದ ಘಟನೆ ಇತ್ತೀಚೆಗೆ ನಡೆದಿತ್ತು. ಇದನ್ನು ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದರೆ ಯಾವುದೇ ರೀತಿ ಕ್ರಮಕ್ಕೆ ಮುಂದಾಗಿಲ್ಲ.
ಶೃಂಗೇರಿ ಠಾಣೆಯಲ್ಲಿ ಒಟ್ಟು 40 ಸಿಬ್ಬಂದಿ ಇದ್ದು, ಅವರಲ್ಲಿ 35 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
5 ಹುದ್ದೆಗಳು ಖಾಲಿ ಇವೆ. ಶೃಂಗೇರಿ ಒಂದು ಯಾತ್ರಾ ಸ್ಥಳವಾದ್ದರಿಂದ ಇಲ್ಲಿಗೆ ದಿನನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಾರೆ. ಸಾರ್ವಜನಿಕರಿಗೆ ತೊಂದರೆ ನೀಡುವ ಗೃಹರಕ್ಷಕ ದಳದವರಿಗೆ ಪಟ್ಟಣದ ಟ್ರಾಫಿಕ್ ನಿರ್ವಹಣೆ ಕರ್ತವ್ಯ ಕೊನೆಗೊಳಿಸಿ ಪೊಲೀಸ್ ಸಿಬ್ಬಂದಿಯನ್ನು ನೇಮಿಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

