ಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನ
ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ಮಾ.26
ಶಿವಮೊಗ್ಗ: ಚಿಕ್ಕಮಗಳೂರಿನ ಕಾರ್ಪೊರೇಷನ್ ಬ್ಯಾಂಕ್ ಸ್ವ-ಉದ್ಯೋಗ ತರಬೇತಿ ಸಂಸ್ಥೆಯು ಏಪ್ರಿಲ್ 2013 ರಿಂದ ಮಾರ್ಚ್ 2014 ರವರೆಗೆ ವಿವಿಧ ವಿಷಯಗಳಲ್ಲಿ ಸ್ವಯಂ ಉದ್ಯೋಗ ತರಬೇತಿಯನ್ನು ಏರ್ಪಡಿಸಲು ಉದ್ದೇಶಿಸಿದ್ದು, ಆಸಕ್ತ ಯುವಕ- ಯುವತಿಯರಿಂದ ಅರ್ಜಿ ಆಹ್ವಾನಿಸಿದೆ.
21 ದಿನಗಳ ಬೇಸಿಕ್ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ, ಬ್ಯೂಟಿ ಪಾರ್ಲರ್ ಮೇನೇಜ್ಮೆಂಟ್, 30 ದಿನಗಳ ಅವಧಿಯ ಕಂಪ್ಯೂಟರ್ ಬೇಸಿಕ್, 45 ದಿನಗಳ ಕಂಪ್ಯೂಟರ್ ಡಿಟಿಪಿ, ಹಾರ್ಡ್ವೇರ್ ಮತ್ತು ನೆಟ್ವರ್ಕಿಂಗ್, ಒಂದು ವಾರ ಅವಧಿಯಲ್ಲಿ ಹೈನುಗಾರಿಕೆ ತರಬೇತಿ, ಮಹಿಳೆ ಮತ್ತು ಪುರುಷರಿಗೆ 21 ದಿನಗಳ ಡ್ರೆಸ್ ಡಿಸೈನಿಂಗ್ ತರಬೇತಿ, 15 ದಿನಗಳ ಅವಧಿಯ ಆಹಾರ ವಸ್ತುಗಳು ಬೇಕರಿ ಉತ್ಪನ್ನಗಳ ತಯಾರಿಕಾ ತರಬೇತಿ, 30 ದಿನಗಳ ಮಲ್ಟಿಫೋನ್ ಸರ್ವೀಸಿಂಗ್ ತರಬೇತಿ, 10 ದಿನಗಳು ಪೇಪರ್ ಕವರ್, ಪೇಪರ್ ಬ್ಯಾಗ್, ಎನ್ವಲಪ್ ಮತ್ತು ಫೈಲ್ಗಳ ತಯಾರಿಕೆ ಹಾಗೂ 15 ದಿನಗಳು ಗೃಹೋಪಯೋಗಿ ವಸ್ತುಗಳ ತಯಾರಿಕೆ ತರಬೇತಿ ನಡೆಸಲಾಗುವುದು. ಅಭ್ಯರ್ಥಿಗಳು 18 ರಿಂದ 45 ವರ್ಷ ವಯೋವುತಿಯೊಳಗಿನವರಾಗಿರಬೇಕು.
ತರಬೇತಿ ಸಮಯದಲ್ಲಿ ತಮ್ಮ ಸ್ವಬರಹದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ನಿರ್ದೇಶಕರು, ಕಾರ್ಪೊರೇಷನ್ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಹತ್ತಿರ, ಕಡೂರು ರಸ್ತೆ, ಚಿಕ್ಕಮಗಳೂರು. ವಿವರಗಳಿಗಾಗಿ- 08262-210064, 210477,ಅಥವಾ 8277111902
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

