ಕುಡಿವ ನೀರು ಪೂರೈಕೆಗೆ ಚಾಲನೆ
ಕ.ಪ್ರ.ವಾರ್ತೆ, ಕಡೂರು, ಮಾ.28
ಹಲವು ದಿನಗಳಿಂದ ಕುಡಿಯವ ನೀರಿಗೆ ತೊಂದರೆ ಅನುಭವಿಸುತ್ತಿದ್ದ ಈ ಭಾಗದಲ್ಲಿ ಹೊಸ ಕೊಳವೆ ಬಾವಿಯಲ್ಲಿ ಉತ್ತಮ ನೀರು ಸಿಗುವ ಮೂಲಕ ಇಲ್ಲಿನ ಜನರ ನೀರಿನ ಸಮಸ್ಯೆ ಬಗೆಹರಿದಂತಾಗಿದೆ ಎಂದು ಕಡೂರು ಪಟ್ಟಣದ ನಾಲ್ಕನೇ ವಾರ್ಡಿನ ಪುರಸಭಾ ಸದಸ್ಯ ತೋಟದ ಮನೆ ಮೋಹನ್ ಕುಮಾರ್ ಹೇಳಿದರು.
ಕಡೂರು ಪಟ್ಟಣದ ದೊಡ್ಡ ಪೇಟೆಯ ನಾಲ್ಕನೇ ವಾರ್ಡಿನಲ್ಲಿ ಹೊಸದಾಗಿ ಕೊರೆಸಲಾಗಿರುವ ಕೊಳವೆ ಬಾವಿಯಿಂದ ಉತ್ತಮ ನೀರು ಬಂದ ಹಿನ್ನೆಲೆಯಲ್ಲಿ ವಾರ್ಡಿನ ಹೆಣ್ಣುಮಕ್ಕಳು ಸಂತಸದಿಂದ ಗಂಗೆಪೂಜೆ ಮಾಡಿದ ನಂತರ ಕುಡಿವ ನೀರು ಪೂರೈಕೆಗೆ ಚಾಲನೆ ನೀಡಿ ಮಾತನಾಡಿದರು.
6 ಪಾಯಿಂಟ್: ಈ ವಾರ್ಡಿನಲ್ಲಿ ಈಗಾಗಲೇ 6 ಪಾಯಿಂಟ್ಗಳನ್ನು ಮಾಡಲಾಗಿದ್ದು, ಹೆಚ್ಚು ತೊಂದರೆ ಅನುಭವಿಸುತ್ತಿದ್ದ ರಾಮದೇವರ ಗುಡಿಬೀದಿ, ದಾಸಯ್ಯನ ಬೀದಿ, ಮಲಿಯಮ್ಮನ ದೇವಾಲಯದ ಬೀದಿ ಸೇರಿದಂತೆ ಹಲವು ಬೀದಿಗಳಿಗೆ ಈ ಹೊಸ ಕೊಳವೆ ಬಾವಿಯಿಂದ ನೀರು ದೊರಕಿರುವುದರಿಂದ ನೀರಿನ ಸಮಸ್ಯೆ ನೀಗುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸ ನಲ್ಲಿಗಳ ಅಳವಡಿಕೆ ಮಾಡಿ ನೀರು ಪೂರೈಸಲು ಅಗತ್ಯ ಕ್ರಮ ಕೈಗೊಲ್ಳಲಾಗುವುದು. ಉತ್ತಮ ನೀರು ಬಂದಿರುವುದರಿಂದ ಸಂತಸದಿಂದ ವಾರ್ಡಿನ ಮಹಿಳೆಯರು ಗಂಗೆಪೂಜೆ ಮಾಡಿದ್ದಾರೆ ಎಂದರು.
ಈ ಭಾಗದ ಪುರಸಭಾ ಸದಸ್ಯನಾಗಿ ಜನರಿಗೆ ಮೂಲ ಸವಲತ್ತುಗಳಾದ ಕುಡಿಯುವ ನೀರು, ಬೀದಿದೀಪ, ಆರೋಗ್ಯ, ಚರಂಡಿ, ರಸ್ತೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕಾಗಿರವುದು ನನ್ನ ಕರ್ತವ್ಯವಾಗಿದೆ ಎಂದರು.
ವಾರ್ಡಿನ ಹಲವೆಡೆ ಹೊಸ ಕೊಳವೆ ಬಾವಿ ಕೊರೆಸಲು ಪಾಯಿಂಟ್ಗಳನ್ನು ಮಾಡಲಾಗಿದ್ದು, ಶೀಘ್ರದಲ್ಲಿಯೇ ಕೊಳವೆ ಬಾವಿ ಕೊರೆಸಿ ನೀರು ಪೂರೈಸಲಾಗುವುದು ಎಂದು ಹೇಳಿದ ಮೋಹನ್, ಈ ಭಾಗಕ್ಕೆ ಆಗಬೇಕಾಗಿರುವ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ಇದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಗಮನಹರಿಸಿ ಆದ್ಯತೆಯ ಮೇಲೆ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಜನರಲ್ ತಿಮ್ಮಯ್ಯ, ಚಂದ್ರು, ಲಕ್ಷ್ಮಣ್, ಹಾಲಪ್ಪನವರ ರಾಜು, ಚಂದ್ರು, ಶ್ರೀನಿವಾಸ್, ರವಿ, ಮಂಜುನಾಥ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

