ಪಶ್ಚಿಮಘಟ್ಟ ರಕ್ಷಣೆ ಎಲ್ಲರ ಹೊಣೆ
ಕ.ಪ್ರ ವಾರ್ತೆ, ಕೊಪ್ಪ, ಮಾ. 29
ಪಶ್ಚಿಮ ಘಟ್ಟ ಪ್ರಾಂತ್ಯದಲ್ಲಿರುವ ಅಪರೂಪದ ಜೀವವೈವಿಧ್ಯ ಪ್ರಬೇಧಗಳ ಸಸ್ಯ ಮತ್ತು ಜೀವಿಗಳ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಮೈಸೂರಿನ ಜೆಎಸ್ಎಸ್ ವೈದ್ಯಕೀಯ ಮಹಾವಿದ್ಯಾಲಯದ ಡಾ. ಲಲಿತಾ ಭಾಸ್ಕರ್ ತಿಳಿಸಿದರು.
ಇಲ್ಲಿನ ಆರೂರು ಆಯರ್ವೇದ ಮಹಾವಿದ್ಯಾಲಯದಲ್ಲಿ ತಾಲೂಕು ಕಸಾಪದಿಂದ ನಡೆದ ಆರೂರು ರವಿರಾವ್ ಸ್ಮಾರಕ ದತ್ತಿ ನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಪಶ್ಚಿಮ ಘಟ್ಟಗಳ ಔಷಧಿ ಸಸ್ಯಗಳು ವಿಚಾರದ ಕುರಿತು ಮಾತನಾಡಿದರು.
ಪಶ್ಚಿಮ ಘಟ್ಟಗಳು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ 1,600 ಕಿಮೀ ಉದ್ದವಿದ್ದು ಇದರ ವ್ಯಾಪ್ತಿ 1,40,000 ಸಾವಿರ ಚದರ ಕಿಮೀ ರಷ್ಟು ವ್ಯಾಪಿಸಿದೆ. ಶೇ. 60 ಭಾಗ ಕರ್ನಾಟಕದಲ್ಲಿ ವ್ಯಾಪಿಸಿರುವುದರಿಂದ ಇದರ ರಕ್ಷಣೆಯ ಹೆಚ್ಚಿನ ಜವಬ್ದಾರಿ ನಮ್ಮದಾಗಿದೆ ಎಂದರು.
ಮಾನವ ತನ್ನ ಸುತ್ತ ಮುತ್ತ ಇರುವ ಸಸ್ಯ ಪ್ರಬೇಧವನ್ನು ಬಳಸಿಕೊಂಡು ಶೇ.80 ರಷ್ಟು ಆರೋಗ್ಯವನ್ನು ಕಾಪಡಿಕೊಳ್ಳಬಹುದಾಗಿದೆ. ಅದರೆ ನಾಗರಿಕರಣ, ವ್ಯಾಪಾರಿ ಮನೋಭಾವ, ಅಧುನಿಕರಣದಿಂದ ತಮ್ಮ ಸ್ವಾರ್ಥಕ್ಕಾಗಿ ಇವುಗಳನ್ನು ಬಲಿಕೊಡುತ್ತಿರುವುದರಿಂದ 352 ಬಗೆ ಸಸ್ಯ ಮತ್ತು ಜೀವಿ ಸಂಕುಲಗಳು ಅವನತಿಯ ಅಂಚಿನಲ್ಲಿದೆ. ಇವುಗಳ ರಕ್ಷಣೆಯಾಗದಿದ್ದಲ್ಲಿ ಮಾನವನ ನಾಶವಾಗುತ್ತವೆ. ಪೂರ್ವಿಕರು ಔಷಧ ಸಸ್ಯಗಳ ಬಗ್ಗೆ ಸಾಹಿತ್ಯದಲ್ಲಿ ಉಲ್ಲೇಕ ಮಾಡಿರುವುದರಿಂದ ಆರ್ಯುವೇದದ ಅಧ್ಯಯನಕ್ಕೆ ಸಹಕಾರಿಯಾಗುತ್ತಿದೆ ಎಂದು ಹೇಳಿದರು.
ಆರ್ಯುವೇದ ಔಷಧ ತಯಾರಿಕೆಗೆ ಪೂರಕವಾದದ್ದು ಸಾಹಿತ್ಯವಾಗಿದೆ. ಅದ್ದರಿಂದ ಆರ್ಯುವೇದ ವೈದ್ಯರು ಅಪರೂಪದ ಸಸ್ಯ ಪ್ರಬೇದಗಳ ಪ್ರಯೋಜನ ಮತ್ತು ಉಪಯೋಗಳನ್ನು ತಿಳಿದುಕೊಳ್ಳಲು ಸಾಹಿತ್ಯ ಅಧ್ಯಯನ ಅವಶ್ಯಕವಾಗಿದೆ ಎಂದರು.
ಆರೂರು ವಿದ್ಯಾಸಂಸ್ಥೆ ಅಧ್ಯಕ್ಷ ಎ. ರಮೇಶ್ ರಾವ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಾಲೂಕು ಕಸಾಪ ಅಧ್ಯಕ್ಷ ಗುಡ್ಡೇ ತೋಟ ನಟರಾಜ್ ಅಧ್ಯಕ್ಷತೆ ವಹಿಸಿದ್ದು, ಪ್ರಾಂಶುಪಾಲ ಡಾ. ಸಂಜಯ್, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಸಹಾಯಕ ಕುಲ ಸಚಿವ ಡಾ.ವಿ.ವಿ. ಜಾವಳಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

