ಚಿಕ್ಕಮಗಳೂರು

ಕಡೂರು ತಾಲೂಕಿಂದ 3,782 ವಿದ್ಯಾರ್ಥಿಗಳು....

Published On :

ಕಡೂರು: ಏಪ್ರಿಲ್ 1 ರಿಂದ ಆರಂಭಗೊಳ್ಳಲಿರುವ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಈ ಭಾರಿ ತಾಲೂಕಿನ 3,782 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಈ ಬಗ್ಗೆ ಕಡೂರು ಹಾಗೂ ಬೀರೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ಮಾಹಿತಿ ನೀಡಿದ್ದು, ಕಡೂರು ಶೈಕ್ಷಣಿಕ ವಲಯದಲ್ಲಿ 2,191 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಕಡೂರು ಕ್ಲಸ್ಟರ್, ಕಡೂರು ಸರ್ಕಾರಿ ಪದವಿ ಪೂರ್ವ ಕಾಲೇಜು ವ್ಯಾಪ್ತಿಯ 7 ಶಾಲೆಗಳಲ್ಲಿ 490 ವಿದ್ಯಾರ್ಥಿಗಳು, ಕಡೂರಿನ ವೇದಾವತಿ ಫ್ರೌಢಶಾಲೆ ವ್ಯಾಪ್ತಿಯ 4 ಶಾಲೆಯಲ್ಲಿ 294 ವಿದ್ಯಾರ್ಥಿಗಳು, ಗೌರಮ್ಮ ಫ್ರೌಢಶಾಲೆಯ ವ್ಯಾಪ್ತಿಯ 4 ಶಾಲೆಗಳಲ್ಲಿ 118 ವಿದ್ಯಾರ್ಥಿಗಳು,  ಧೃವತಾರೆ ಪ್ರೌಢಶಾಲೆ ವ್ಯಾಪ್ತಿಯ 5 ಶಾಲೆಗಳಲ್ಲಿ  248 ವಿದ್ಯಾರ್ಥಿಗಳು, ಕಡೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ 4 ಶಾಲೆಗಳಲ್ಲಿ 182 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕ್ಲಸ್ಟರ್ ರಹಿತ 2 ನೇ ಹಂತದ ಪಂಚನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜು ವ್ಯಾಪ್ತಿಯ 5 ಶಾಲೆಗಳಲ್ಲಿ 174 ವಿದ್ಯಾರ್ಥಿಗಳು, ಕ್ಲಸ್ಟರ್ ರಹಿತ 3ನೇ ಹಂತದಲ್ಲಿ ಸಿಂಗಟಗೆರೆಯ ಸರ್ಕಾರಿ ಪದವಿಪೂರ್ವ ಕಾಲೇಜು ವ್ಯಾಪ್ತಿಯ 6 ಶಾಲೆಗಳಲ್ಲಿ 247 ವಿದ್ಯಾರ್ಥಿಗಳು, ಕ್ಲಸ್ಟರ್ ರಹಿತ 4ನೇ ಹಂತದ ಚೌಳಹಿರಿಯೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ 5 ಶಾಲೆಗಳಲ್ಲಿ 173 ವಿದ್ಯಾರ್ಥಿಗಳು, 5ನೇ ಕ್ಲಸ್ಟರ್ ರಹಿತ ಹೇಮಗಿರಿಯ ಮಲ್ಲಿಕಾರ್ಜುನ ಗ್ರಾಮಾಂತರ ಪ್ರೌಢಶಾಲೆ ವ್ಯಾಪ್ತಿಯ 6 ಶಾಲೆಗಳಲ್ಲಿ 265 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 2,191 ವಿದ್ಯಾರ್ಥಿ ವಿದ್ಯಾರ್ಥಿನಿಯರು ಪರೀಕ್ಷೆ ಎದುರಿಸಲಿದ್ದಾರೆ ಎಂದರು.
ಬೀರೂರು ಶೈಕ್ಷಣಿಕ ವಲಯದಲ್ಲಿ ಒಟ್ಟು 1,591 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇದರಲ್ಲಿ ಬೀರೂರು ಶೈಕ್ಷಣಿಕ ವಲಯದ ಬೀರೂರಿನ ಕೆಎಲ್ಕೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವ್ಯಾಪ್ತಿಯ 6 ಶಾಲೆಗಳಲ್ಲಿ 277 ವಿದ್ಯಾರ್ಥಿಗಳು, ಬೀರೂರು ಅಕ್ಕಮಹಾದೇವಿ ಪ್ರೌಢಶಾಲೆ ವ್ಯಾಪ್ತಿಯ 4 ಶಾಲೆಗಳಲ್ಲಿ 217 ವಿದ್ಯಾರ್ಥಿಗಳು, ಬಾಣೂರಿನ ಬಸವೇಶ್ವರ ಪ್ರೌಢಶಾಲೆ ವ್ಯಾಪ್ತಿಯ 5 ಶಾಲೆಗಳಲ್ಲಿ  112 ವಿದ್ಯಾರ್ಥಿಗಳು, ಲಿಂಗದಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವ್ಯಾಪ್ತಿಯ 5 ಶಾಲೆಗಳಲ್ಲಿ 325 ವಿದ್ಯಾರ್ಥಿಗಳು, ದೇವನೂರಿನ ಲಕ್ಷ್ಮೀಶ ಸರ್ಕಾರಿ ಪದವಿಪೂರ್ವ ಕಾಲೇಜಿನ ವ್ಯಾಪ್ತಿಯ 4 ಶಾಲೆಗಳಲ್ಲಿ 184 ವಿದ್ಯಾರ್ಥಿಗಳು, ನಿಡಘಟ್ಟದ ರೇವಣಸಿದ್ದೇಶ್ವರ ಪ್ರೌಢಶಾಲೆ ವ್ಯಾಪ್ತಿಯ 5 ಶಾಲೆಗಳಲ್ಲಿ 170 ವಿದ್ಯಾರ್ಥಿಗಳು, ಸಖರಾಯಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವ್ಯಾಪ್ತಿಯ 4 ಶಾಲೆಯ 154 ವಿದ್ಯಾರ್ಥಿಗಳು, ಗುಬ್ಬೀಹಳ್ಳಿಯ ಸರ್ಕಾರಿ ಪ್ರೌಢಶಾಲೆ ವ್ಯಾಪ್ತಿಯ 5 ಶಾಲೆಗಳಲ್ಲಿ 152 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 1,591 ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಭಾರಿ ಪರೀಕ್ಷೆ ಎದುರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.