ಚಿಕ್ಕಮಗಳೂರು

'ಬಿಜೆಪಿ ಆಡಳಿತ ಕೊನೆಗೊಳಿಸಿ'

Published On :

ಮೂಡಿಗೆರೆ: ಬಿಜೆಪಿಯ ಭ್ರಷ್ಟ ಆಡಳಿತ ಕೊನೆಗಾಣಿಸುವುದರ ಮೂಲಕ ರಾಜ್ಯದ ಸಂಪತ್ತು  ಉಳಿಸಲು ಈ ಬಾರಿ ಮತದಾರರೇ ತೀರ್ಮಾನಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಎಂ.ಎಂ. ಲಕ್ಷ್ಮಣಗೌಡ  ತಿಳಿಸಿದರು.
ಪಟ್ಟಣದ ಇಂದಿರಾಗಾಂಧಿ ಸ್ಮಾರಕ ಭವನದ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ 83ನೇ ಹುಟ್ಟುಹಬ್ಬ ಹಾಗೂ ಕಾರ್ಮಿಕ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಲೆನಾಡಿನ ಹೃದಯ ಭಾಗವಾದ ಮೂಡಿಗೆರೆ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹತ್ತು ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆ ಜಾರಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಹಲವು ಯೋಜನೆ: ಕಾಫಿ, ವಿದರ್ಭ ಪ್ಯಾಕೇಜ್, ವಸತಿ ಯೋಜನೆ, ರೈತರ, ಬೆಳೆಗಾರರ ಹಾಗೂ ಕಾರ್ಮಿಕರ   ಪರವಾಗಿ ಸೇರಿದಂತೆ ಹತ್ತು ಹಲವು ಯೋಜನೆ ಜಾರಿಗೆ ತರುವುದರೊಂದಿಗೆ ಸ್ತ್ರೀ ಶಕ್ತಿ ಗುಂಪು ರಚನೆಯಂತಹ ಹಲವು ಜನೋಪಯೋಗಿ ಕಾರ್ಯಕ್ರಮ ಜಾರಿಗೆ ತಂದರು ಎಂದವರು ಹೇಳಿದರು.
ನಂತರ ಬಂದ ಜೆಡಿಎಸ್ ಮತ್ತು ಬಿಜೆಪಿ ಕಾಂಗ್ರೆಸ್‌ನ ಯೋಜನೆಗಳನ್ನೇ ಮುಂದುವರೆಸಿಕೊಂಡು, ತಾವು ಜಾರಿಗೆ ತಂದೆವೆಂದು ಹೇಳಿಕೊಳ್ಳುತ್ತಾ  ಮತದಾರರನ್ನು ವಂಚಿಸುತ್ತಿದ್ದಾರೆ. ಆದ್ದರಿಂದ ಈ ಬಾರಿ ಬಿಜೆಪಿ ಹಾಗೂ ಜೆಡಿಎಸ್‌ಗೆ ತಕ್ಕ ಪಾಠ ಕಲಿಸಲು ಮತದಾರರು ಮುಂದಾಗಿದ್ದಾರೆ ಎಂದರು.
ವಿಶೇಷ ಆದ್ಯತೆ: ಕೆಪಿಸಿಸಿ ಕಾಯದರ್ಶಿ ಜಿ.ಎಚ್. ಹಾಲಪ್ಪ ಗೌಡ ಮಾತನಾಡಿ, ಎಸ್.ಎಂ. ಕೃಷ್ಣ ಮುಖ್ಯ ಮಂತ್ರಿಯಾಗಿದ್ದಾಗ ಬೆಂಗಳೂರಿಗೆ ವಿಶೇಷ ಆದ್ಯತೆ ನೀಡಿದರು ಎಂದರು.
ಎಂ.ಪಿ. ಮನು ಅಧ್ಯಕ್ಷತೆ ವಹಿಸಿದ್ದರು. ವಿನಯ ಕುಮಾರ್, ಮಂಚೇಗೌಡ, ಕೃಷ್ಣೇಗೌಡ, ಸಂಪತ್, ಇಮ್ತಿಯಾಜ್ ಅಹಮ್ಮದ್, ಜಿಪಂ ಸದಸ್ಯೆ ಜ್ಯೋತಿ ಹೇಮಶೇಖರ್ ಸೇರಿದಂತೆ ಹಲವು  ಗಣ್ಯರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.