ರಾಜ್ಯಮಟ್ಟದ ಎತ್ತಿನ ಗಾಡಿ ಓಟಕ್ಕೆ ಚಾಲನೆ
ಕ.ಪ್ರ.ವಾರ್ತೆ, ಕಡೂರು, ಮೇ 11
ಪಟ್ಟಣದಲ್ಲಿ ಬಸವ ಜಯಂತಿ ಅಂಗವಾಗಿ ರಾಜ್ಯಮಟ್ಟದ ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆಗೆ ಚಾಲನೆ ನೀಡಲಾಯಿತು. ಕಡೂರು ಪಟ್ಟಣದ ವೀರಭದ್ರಸ್ವಾಮಿ ಯುವಕ ಸಂಘ, ಕಡೂರಿನ ರೈತರು
ಮತ್ತು ಸಮಸ್ತ ನಾಗರಿಕರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆಯನ್ನು ಮಾಜಿ ಪುರಸಭಾಧ್ಯಕ್ಷ, ಜೆಡಿಎಸ್ ನಗರ ಘಟಕದ ಕಾರ್ಯಧ್ಯಕ್ಷ ಭಂಡಾರಿ ಶ್ರೀನಿವಾಸ್ ಉದ್ಘಾಟಿಸಿ ಮಾತನಾಡಿದರು.
ಬರಗಾಲದ ಜೊತೆ ಮಳೆಯಿಲ್ಲದೆ ಬೇಸರದಲ್ಲಿರುವ ತಾಲೂಕಿನ ಮತ್ತು ರಾಜ್ಯದ ರೈತರಿಗಾಗಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವಂತೆ ಸುಗ್ಗಿ ಮುಗಿದ ಮೇಲೆ ರೈತರ ಮನರಂಜನೆಗಾಗಿಯೇ ನಡೆಸುವ ಸಾಂಪ್ರದಾಯಿಕ ಕ್ರೀಡೆಗಳಲ್ಲಿ ಎತ್ತಿಗಾಡಿ ಸ್ಪರ್ಧೆ ಕೂಡ ಒಂದಾಗಿದೆ ಎಂದರು.
ಹಗುರಾಗಲು ಕ್ರೀಡೆ ಅವಶ್ಯಕ: ಕಡೂರು ತಾಲೂಕಿನ ಜನ ಕಳೆದ ಆರೇಳು ವರ್ಷದಿಂದ ಬರಗಾಲಕ್ಕೆ ತುತ್ತಾಗಿ ರೈತರು ತುಂಬಾ ಸಂಕಷ್ಟದಲ್ಲಿದ್ದಾರೆ. ಪ್ರಕೃತಿಯು ಮನಸ್ಸು ಮಾಡುವ ಮೂಲಕ ರೈತರ ಸಂಕಷ್ಟವನ್ನು ಪರಿಹರಿಸಬೇಕಾಗಿದ್ದು, ಬೇಸರದಲ್ಲಿರುವ ರೈತರ ಮನಸ್ಸು ಕೊಂಚ ಹಗುರಾಗಲು ಇಂತಹ ಕ್ರೀಡೆಗಳು ಅತಿ ಅವಶ್ಯಕವಾಗಿವೆ. ಇದರಿಂದ ರೈತರ ಒಡನಾಡಿ ಮತ್ತು ಮಿತ್ರನಾಗಿರುವ ಎತ್ತುಗಳು ತಮ್ಮ ಒಡೆಯನ ಕ್ರೀಡಾಭಿರುಚಿಗೆ ಕೈ ಜೋಡಿಸುವ ಮೂಲಕ ಜೋಡಿ ಎತ್ತಿನಗಾಡಿ ಸ್ಪರ್ಧೆ ಕಡೂರು ಪಟ್ಣಣದಲ್ಲಿ ನಡೆಯುತ್ತಿರುವುದು ಸಂತೋಷದ ಸಂಗತಿ ಎಂದವರು ಹೇಳಿದರು.
ಇಂತಹ ಕ್ರೀಡೆಗಳಲ್ಲಿ ಗೆಲ್ಲುವುದನ್ನೇ ಪ್ರಧಾನವಾಗಿ ಇಟ್ಟುಕೊಳ್ಳುವುದಕ್ಕಿಂತ ಭಾಗವಹಿಸುವುದು ಬಹುಮುಖ್ಯ. ಎಲ್ಲೆಡೆಯಿಂದ ಭಾಗವಹಿಸಿರುವ ಕ್ರೀಡಾ ರೈತರನ್ನು ಅಭಿನಂದಿಸುವುದಾಗಿ ಹೇಳಿ ಜೋಡಿ ಎತ್ತಿನಗಾಡಿ ಸ್ಫರ್ಧೆಗೆ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿದ್ದ ಪುರಸಭಾ ಸದಸ್ಯ ತೋಟದ ಮನೆ ಮೋಹನ್, ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆ.ಎಸ್. ಆನಂದ್ ಮತ್ತು ಮಾಜಿ ಪುರಸಭಾ ಅಧ್ಯಕ್ಷ ಕೆ.ಎಚ್. ಲಕ್ಕಣ್ಣ ಮಾತನಾಡಿ, ಇಂತಹ ಸಾಂಪ್ರದಾಯಿಕ ಕ್ರೀಡೆಗಳಿಂದ ಶ್ರಮ ಜೀವಿಯಾಗಿರುವ ರೈತರಿಗೆ ಮನಸ್ಸಿಗೆ ಸ್ವಲ ಮಟ್ಟಿಗಾದರೂ ಕೂಡ ಮನರಂಜನೆ ಒದಗಿಸುವ ಮೂಲಕ ಮನಸ್ಸಿಗೆ ಉಲ್ಲಾಸ ಒದಗಿಸುತ್ತಿದೆ ಎಂದರು.
ಎಪಿಎಂಸಿ ನಿರ್ದೇಶಕ ಕೆ.ಆರ್. ಕೇಶವನಾಯ್ಕ, ವೀರಭದ್ರೇಶ್ವರಸ್ವಾಮಿ ಯುವಕ ಸಂಘದ ಗೌರವಾಧ್ಯಕ್ಷ ಸೋಮೇಶೇಖರ್, ಅಧ್ಯಕ್ಷ ರಂಗನಾಥ್, ಉಪಾಧ್ಯಕ್ಷ ವಸಂತಕುಮಾರ್, ಕಾರ್ಯಾಧ್ಯಕ್ಷ ದರ್ಶನ್, ಖಜಾಂಚಿ ನಿರಂಜನ್, ಕಾರ್ಯದರ್ಶಿ ಪ್ರಸನ್ನ, ನಿರ್ದೇಶಕ ರಾಜು, ಮಂಜಣ್ಣ, ಕೃಷ್ಣಮೂರ್ತಿ, ರಮೇಶ್, ಶ್ರೀಧರ್, ಪ್ರಕಾಶ್, ರಾಜು, ಹರೀಶ್, ರಾಮು, ಮೋಹನ್, ರಂಗನಾಥ್, ಸಚಿನ್, ಸುರೇಶ್, ಮಂಜುನಾಥ್, ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

