ಇಂದು ಶ್ರೀಕ್ಷೇತ್ರಶಕಟಪುರದ ಬ್ರಹ್ಮರಥೋತ್ಸವ
ಕ.ಪ್ರ.ವಾರ್ತೆ ಕೊಪ್ಪ ಮೇ 12
ಮಲೆನಾಡಿನ ಅದ್ಧೂರಿಯ ರಥೋತ್ಸವವೆಂದೇ ವಿಖ್ಯಾತವಾದ ಶ್ರೀಕ್ಷೇತ್ರಶಕಟಪುರದ ಬ್ರಹ್ಮರಥೋತ್ಸವನ್ನು ಮೇ 13 ರ ಅಕ್ಷಯತೃತೀಯ ಸೋಮವಾರದಂದು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಮಠದ ಪತ್ರಿಕಾ ಹೇಳಿಕೆ ತಿಳಿಸಿದ್ದಾರೆ.
ಪಶ್ಟಿಮಘಟ್ಟದ ಮಲೆನಾಡಿನ ಜೀವನದಿಯಾದ ತಂಗೆಯ ಮಡಿಲಲ್ಲಿ ಅನೇಕ ತೀರ್ಥಕ್ಷೇತ್ರಗಳು, ಮಠ-ಮಂದಿರಗಳು ಕಂಗೊಳಿಸುತ್ತಿವೆ. ಅವುಗಳಲ್ಲಿ ತಾಲೂಕಿನ ಶ್ರೀಕ್ಷೇತ್ರಶಕಟಪುರ ಪುರರಾಣ ಪ್ರಸಿದ್ದ, ನಿಸರ್ಗರಮಣೀಯವೂ ಆದ ಪವಿತ್ರತಾಣವಾಗಿದೆ. ಇಲ್ಲಿ ಅದಿಜಗದ್ಗುರು ಶಂಕರಭಗವತ್ಪಾದರಿಂದ ಪ್ರತಿಷ್ಠಾಪಿತವಾದ ಬದರೀ ಜ್ಯೋತಿಷ್ಪೀಠ ಪರಂಪರೆಯ ಧರ್ಮಪೀಠವಿದೆ.
ಶ್ರೀವಿದ್ಯಾಪೀಠ: ಜ್ಯೋತಿಷ್ಟೀಠದ ಪ್ರಥಮ ಆಚಾರ್ಯರಾಗಿದ್ದ ಶ್ರೀ ತೋಟಕಭಗವತ್ಪಾದರ ಪರಂಪರೆಯಲ್ಲಿ ಬಂದ ಜಗದ್ಗುರು ಯೋಗಿವರ್ಯ ಸತ್ಯತೀರ್ಥ ಮಹಾಮುನಿಗಳಿಂದ ಕ್ರಿ.ಶ.1330 ರಲ್ಲಿ ಪ್ರವರ್ತಿತವಾದ ಧರ್ಮಪೀಠವು ಜಗದ್ಗುರು ಬದರೀ ಶಂಕರಾಚಾರ್ಯ ಮಹಾಸಂಸ್ಥಾನಂ ಶ್ರೀಕ್ಷೇತ್ರಶಕಟಪುರ-ಶ್ರೀವಿದ್ಯಾಪೀಠವೆಂದು ಇಂದು ವಿಶ್ವವಿಖ್ಯಾತವಾಗಿದೆ.
ಶ್ರೀವಿದ್ಯಾಂಬಿಕಾ, ಶ್ರೀರಾಜರಾಜೇಶ್ವರೀದೇವಿ,ಶ್ರೀಲಕ್ಷ್ಮೀನರಸಿಂಹ,ಶ್ರೀ ಸಂತಾನ ವೇಣುಗೋಪಾಲಕೃಷ್ಣ ದೇವತೆಗಳ ವಿಶೇಷ ಉಪಾಸನೆಯ ಈ ಧರ್ಮಪೀಠದಲ್ಲಿ ಪರಂಪರೆಯಿಂದ ನಡೆದು ಬಂದಿದೆ. ವರ್ಷಪೂರ್ತಿ ಇಲ್ಲಿ ಅನೇಕ ಮಹೋತ್ಸವನ್ನು ವಿದ್ಯುಕ್ತವಾಗಿ ಆಚರಿಸಲಾಗುತ್ತಿದೆ. ಅವುಗಳಲ್ಲಿ ಪ್ರಮುಖವಾಗಿ ಇಲ್ಲಿಯ ಆರಾಧ್ಯದೇವತೆಯಾದ ಶ್ರೀಸಂತಾನವೇಣುಗೋಪಾಲಕೃಷ್ಣಸ್ವಾಮಿಯ ಬ್ರಹ್ಮರಥೋತ್ಸವವು ಅತ್ಯಂತ ವೈಭವದಿಂದ ನಡೆಸಲಾಗುವುದು.
ಜೀರ್ಣೋದ್ದಾರ ಪೂರ್ಣ: 33ನೇ ಯ ಆಚಾರ್ಯಮಹಾಸ್ವಾಮಿಗಳಾಗಿ ಶ್ರೀ ವಿದ್ಯಾಭಿನವ ಶ್ರೀಕೃಷ್ಣಾನಂದತೀರ್ಥಮಹಸ್ಮಾಮಿಗಳು ತಮ್ಮ ವಿದ್ಯಾತಪೋಬಲದಿಂದ ಶ್ರೀಕ್ಷೇತ್ರದ ಸರ್ವಾಂಗೀಣ ಜೀರ್ಣೋದ್ದಾರವನ್ನು ಪೂರ್ಣಗೊಳಿಸಿದ್ದಾರೆ. ಇಲ್ಲಿ ಸುಂದರಕಲಾಕೃತಿಯ ಶ್ರೀದೇವತಾಮಂದಿರ, ಮನೋಹರ ಶಿಲ್ಪಕಲೆಯ ಮುಕ್ತಿಮಂಟಪ, ಕೀರ್ತಿಮಂಟಪ,ಉನ್ನತ ರಾಜಗೋಪುರಗಳು ರಾರಾಜಿಸುತ್ತಲಿದ್ದು ಅನೇಕ ಯಾತ್ರಿಕರನ್ನು ತನ್ನಡೆಗೆ ಸೆಳೆಯುತ್ತಿವೆ. ಕಾರಣಾಂತರದಿಂದ ಸ್ಥಗಿತಗೊಂಡಿದ್ದ ಶ್ರೀಸಂತಾನವೇಣುಗೋಪಾಲಕೃಷ್ಣ ರಥೋತ್ಸವವನ್ನು 2007 ರಿಂದ ಪುನಃ ಆರಂಭಿಸಲಾಗಿದೆ. ಅತ್ಯಂತ ಶ್ರದ್ದಾ-ಭಕ್ತಿ ರಾಜವೈಭವಗಳಿಂದಲೂ ನಡೆಯುತ್ತಿದೆ.
ಪ್ರತಿ ವರ್ಷ ಗುಜರಾತ್, ಮಹರಾಷ್ಟ್ರ,ತಮಿಳುನಾಡು,ದೆಹಲಿ,ಮುಂತಾದ ರಾಜ್ಯಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಳುತ್ತಿದ್ದು ಈ ವರ್ಷವು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಬರುವ ನಿರೀಕ್ಷೇ ಇದೆ.
ಮೇ 5ರಿಂದಲೇ ಪೂರ್ವಭಾವಿ ರಾಜೋತ್ಸವಗಳು ಆರಂಭಗೊಂಡಿವೆ, ಅಶ್ವವಾಹನ, ಹಂಸವಾಹನ, ಮಯೂರವಾಹನ,ಗಜವಾಹನ, ಸಿಂಹವಾಹನ, ಆಂದೋಲಿಕೋತ್ಸವ, ಪುಷ್ಪರಥೋತ್ಸವ, ಇಂದ್ರರಥೋತ್ಸವ, ಗರುಡವಾಹನೋತ್ಸವಗಳು ಜರುಗಿವೆ.
ಶ್ರೀಮಹಾರಥೋತ್ವವ: ಮೇ 13 ರಂದು ಮಧ್ಯಾಹ್ನ 12 ಗಂಟೆಗೆ ಶ್ರೀ ಬ್ರಹ್ಮರಥೋತ್ಸವವೂ, ಕನಕರತ್ನಾಭಿಷೇಕವೂ ಸಂಜೆ 6 ಗಂಟೆಗೆ ಶ್ರೀಮಹಾರಥೋತ್ವವವೂ ನೆರವೇರಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

