ಕ್ಷೇತ್ರದ ಜನರ ಋಣ ತೀರಿಸುವೆ
ನರಸಿಂಹರಾಜಪುರ: ನಾನು ಎರಡು ಜನ್ಮ ಎತ್ತಿ ಬಂದರೂ ಶೃಂಗೇರಿ ಕ್ಷೇತ್ರದ ಮತದಾರರ ಋಣ ತೀರಿಸಲು ಸಾದ್ಯವಿಲ್ಲ ಎಂದು ಶೃಂಗೇರಿ ಕ್ಷೇತ್ರದ ನೂತನ ಶಾಸಕ ಹಾಗೂ ಮಾಜಿ ಸಚಿವ ಡಿ.ಎನ್.ಜೀವರಾಜ್ ತಿಳಿಸಿದರು.
ಅವರು ಶನಿವಾರ ಪಟ್ಟಣದ ವಾಟರ್ ಟ್ಯಾಂಕ್ ಸಮೀಪದ ನೂತನ ರಂಗಮಂದಿರ ದಲ್ಲಿ ನಡೆದ ವಿಜಯೋತ್ಸವ ಕಾರ್ಯಕ್ರಮದಲ್ಲಿ ತಾಲೂಕು ಬಿಜೆಪಿ ಘಟಕ ತಮಗೆ ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ನನಗೆ ಇದು ಸಂತಸದ ಕ್ಷಣವಾಗಿದೆ. ಶೃಂಗೇರಿ ಕ್ಷೇತ್ರದಲ್ಲಿ ನನ್ನ ಜೊತೆ ಕಾರ್ಯಕರ್ತರ ಪಡೆ ಹಾಗೂ ಅಭಿವೃದ್ದಿ ಕೆಲಸಗಳು ಇದ್ದವು. ಶೃಂಗೇರಿ ಗುರುಗಳ ಆಶೀರ್ವಾದವೂ ಇತ್ತು. ನಾನು ಮಾಡಿದ ಸಾಧನೆ, ಅಭಿವೃದ್ದಿ ಮೆಚ್ಚಿ ಈ ಕ್ಷೇತ್ರದ ಮತದಾರರು ಮತ ನೀಡಿ ನನ್ನನ್ನು 3 ನೇ ಬಾರಿ ಗೆಲ್ಲಿಸಿದ್ದಾರೆ.ಮತದಾರರ ಋಣವನ್ನು ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಅವರು ಭರವಸೆ ನೀಡಿದರು.
ಭರವಸೆ: ನರಸಿಂಹರಾಜಪುರ ಪಟ್ಟಣದಲ್ಲೂ ಸಹ ನಾನು ಹೆಚ್ಚಗೆ ಮತ ಪಡೆದಿದ್ದೇನೆ. ಬಾಳೆಹೊನ್ನೂರು, ಖಾಂಡ್ಯದಲ್ಲಿ ಕಾಂಗ್ರೆಸ್ ಮುಂದಿದೆ ಎಂಬ ವದಂತಿ ಹಬ್ಬಿಸಲಾಗಿತ್ತು. ಆದರೆ, ಎಲ್ಲಾ ಮತಗಟ್ಟೆಗಳಲ್ಲೂ ನಾನು ಮುಂದಿದ್ದೆ.
ಈ ಕ್ಷೇತ್ರದ ಪ್ರಬುದ್ದ ಮತದಾರ, ಮದ್ಯಮವರ್ಗದವರು,ಬಡವರು, ಕೂಲಿಕಾರರು ನನ್ನನ್ನು ಎತ್ತಿ ಹಿಡಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಾಮಾಣಿಕವಾಗಿ ಅವರ ಋಣ ತೀರಿಸುತ್ತೇನೆ ಎಂದು ಅವರು ಭರವಸೆ ನೀಡಿದರು.
ವಿಠಲರಾವ್ರಾಜಕೀಯ ಗುರು: ಬಿಜೆಪಿ ಮುಖಂಡ ಬಿ.ಎಸ್.ವಿಠಲರಾವ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಡಿ.ಎನ್.ಜೀವರಾಜ್, ವಿಠಲರಾವ್ನ್ನಗೆ ರಾಜಕೀಯ ಗುರುವಾಗಿದ್ದರು. 1994 ರಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿದ್ದ ವಿಠಲರಾವ್ ನನಗೆ ಶೃಂಗೇರಿ ಕ್ಷೇತ್ರಕ್ಕೆ ಟಿಕೆಟ್ ನೀಡಿದ್ದರು. ಅವರು ಶುದ್ದ ಹಸ್ತದ ರಾಜಕಾರಣಿಯಾಗಿದ್ದು ಮುಂದಿನ ಪೀಳಿಗೆಯ ರಾಕಾರಣಿಗಳಿಗೆ ಅವರ ಬದುಕು ಮಾರ್ಗದರ್ಶನವಾಗಬೇಕು ಎಂದರು.
ಸಭೆಯಲ್ಲಿ ಶೃಂದೇರಿ ಕ್ಷೇತ್ರದ ಬಿಜೆಪಿ ಅಧ್ಯಕ್ಷ ನೀಲೇಶ್, ಬಿಜೆಪಿ ಮುಖಂಡ ಕೆ.ಎಸ್.ಸುರೇಶ್,ಜಿಲ್ಲಾ ಪಂಚಾಯ್ತಿ ಸದಸ್ಯರಾದ ರಾಮಸ್ವಾಮಿ, ಸುಜಾತ, ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಪಿ.ಸಂಪತ್ಕುಮಾರ್, ಹೋಬಳಿ ಅಧ್ಯಕ್ಷ ಎಚ್.ಎಂ.ಮನು, ತಾಲೂಕು ಪಂಚಾಯ್ತಿ ಅದ್ಯಕ್ಷ ಜೆ.ಜಿ.ನಾಗರಾಜ್, ಪಟ್ಟಣ ಪಂಚಾಯ್ತಿ ಸದಸ್ಯರು ಉಪಸ್ಥಿತರಿದ್ದರು.
ಮೆರವಣಿಗೆ: ತಾಲೂಕು ಬಿಜೆಪಿ ಘಟಕದಿಂದ ನೂತನ ಶಾಸಕ ಡಿ.ಎನ್.ಜೀವರಾಜ್ ಅವರಿಗೆ ಮೈಸೂರು ಪೇಟ ತೊಡಿಸಿ ಅಭಿನಂದಿಸಲಾಯಿತು. ಇದಕ್ಕೂ ಮೊದಲು ಬಸ್ತಿಮಠದಿಂದ ಪ್ರವಾಸಿ ಮಂದಿರದವರೆಗೆ ತೆರೆದ ವಾಹನದಲ್ಲಿ ಡಿ.ಎನ್.ಜೀವರಾಜ್ ಅವರನ್ನು ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

