ಅಭಿವೃದ್ಧಿಯೇ 3ನೇ ಬಾರಿ ಆಯ್ಕೆಗೆ ಕಾರಣ
ಕ.ಪ್ರ.ವಾರ್ತೆ ಟಿ ಕಡೂರು ಟಿ ಮೇ 20
ಕಡೂರು ತಾಲೂಕಿನ ನಿಡಘಟ್ಟ ಗ್ರಾಮದಲ್ಲಿ 350 ಬಡ ಕುಟುಂಬಗಳಿಗೆ ಉಚಿತ ವಿದ್ಯುತ್ ಸಂಪರ್ಕ ಕೊಡಿಸುವ ಮೂಲಕ ನಿಡಘಟ್ಟ ತಾಪಂ ಮತ್ತು ಗ್ರಾಪಂ ವ್ಯಾಪ್ತಿಯಲ್ಲಿ ರು. 11 ಕೋಟಿಗೂ ಹೆಚ್ಚು ಅನುದಾನದಿಂದ ವಿವಿಧ ಅಭಿವೃದ್ಧಿ ಸಾಧನೆ ಮಾಡಿರುವುದರಿಂದ ಕ್ಷೇತ್ರದಲ್ಲಿ ಶಾಸಕ ಸಿ.ಟಿ. ರವಿಯವರನ್ನು ಮೂರನೇ ಬಾರಿ ಅತಿ ಹೆಚ್ಚು ಮತ ನೀಡಿ ಆಯ್ಕೆ ಮಾಡಿದ್ದಾರೆ ಎಂದು ಎಂದು ಬಿಜೆಪಿಯ ನಿಡಘಟ್ಟ ಕ್ಷೇತ್ರ ಸಮಿತಿ ಅಧ್ಯಕ್ಷ ಎನ್.ಕೆ. ಲೋಕೇಶ್ ಹೇಳಿದರು.
ಈ ಬಗ್ಗೆ ಮಾಹಿತಿ ನೀಡಿ, ಕೇವಲ 5 ವರ್ಷ ಅವಧಿಯಲ್ಲಿ ನಿಡಘಟ್ಟ ಗ್ರಾಪಂ ಮತ್ತು ನಿಡಘಟ್ಟ ತಾಪಂ ವ್ಯಾಪ್ತಿಯಲ್ಲಿ ಸುಮಾರು ರು. 11 ಕೋಟಿ ಅನುದಾನ ತಂದು ರವಿಯವರ ಸಹಕಾರದಿಂದ ವಿವಿಧ ಅಭಿವೃದ್ಧಿ ಕಾರ್ಯ ಮಾಡಲಾಗಿದೆ ಎಂದರು.
ನೂತನ ಬಸ್ ನಿಲ್ದಾಣ: ನಿಡಘಟ್ಟ ಗ್ರಾಮದಲ್ಲಿ ರು. 80 ಲಕ್ಷ ವೆಚ್ಚದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಅಲ್ಲದೆ ಗ್ರಾಮದ ಸಾರ್ವಜನಿಕರು ಹಾಗೂ ರೋಗಿಗಳು ದೂರದ ಊರುಗಳಿಗೆ ಚಿಕಿತ್ಸೆಗಾಗಿ ಹೋಗುವುದನ್ನು ತಪ್ಪಿಸಲು ರು. 50 ಲಕ್ಷ ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆದು ಅಗತ್ಯ ವೈದ್ಯರು, ಸಿಬ್ಬಂದಿ ನೇಮಿಸಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದರು.
ನಿಡಘಟ್ಟ ಗ್ರಾಮದಲ್ಲಿ ರು. 80 ಲಕ್ಷ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಿಸಲಾಗಿದೆ. ತಿಪ್ಪನಹಳ್ಳಿ ಚಟ್ಟನಹಳ್ಳಿ ಮಾರ್ಗದ ರಸ್ತೆಯನ್ನು ರು. 30 ಲಕ್ಷ ವೆಚ್ಚದಲ್ಲಿ ಅಭಿವದ್ಧಿಪಡಿಸಲಾಗಿದೆ.
ರು. 15 ಲಕ್ಷ ವೆಚ್ಚದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲಾಗಿದ್ದು, ರಾಜೀವ್ ಗಾಂಧಿ ರೋಜಗಾರ್ ಯೋಜನೆಯಲ್ಲಿ ನಿಡಘಟ್ಟ ಗ್ರಾಮದ 350 ಬಡ ಕುಟುಂಬಗಳನ್ನು ಆಯ್ಕೆಮಾಡಿ ಉಚಿತ ವಿದ್ಯುತ್ ಸಂಪರ್ಕ ನೀಡಲಾಗಿದೆ ಎಂದರು.
ಸಮುದಾಯ ಭವನ: ನಿಡಘಟ್ಟ ಗ್ರಾಮದ ಹರಿಜನ ಕಾಲೋನಿಗೆ ರು. 4ಲಕ್ಷ ವೆಚ್ಚದಲ್ಲಿ ಸಮುದಾಯ ಭವನ, ರು. 30 ಲಕ್ಷದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ,
ನಿಡಘಟ್ಟದಲ್ಲಿ 3ನೇ ಹಂತದಲ್ಲಿ ರು. 20 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, ನಾಗರಾಳು ಚನ್ನಯ್ಯನ ಕೊಪ್ಪಲು ರಸ್ತೆ ನಿರ್ಮಾಣಕ್ಕೆ ರು. 30 ಲಕ್ಷ ಅನುದಾದಿಂದ ರಸ್ತೆ ನಿರ್ಮಿಸಲಾಗಿದೆ ಎಂದವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

