ಚಿಕ್ಕಮಗಳೂರು

ಪ್ರಕೃತಿ ವಿಕೋಪ ನಿರ್ವಹಣೆ ಕುರಿತು ಪ್ರಾತ್ಯಕ್ಷಿಕೆ

Published On :

ಕ.ಪ್ರ ವಾರ್ತೆ, ಮೊಳಕಾಲ್ಮುರು, ಮೇ 22
ಪ್ರಕೃತಿ ವಿಕೋಪದಿಂದ ಸಂಭವಿಸಬಹುದಾದ ಭೂಕಂಪ, ಪ್ರವಾಹ, ಅತಿವೃಷ್ಟಿ, ಕಟ್ಟಡ ಕುಸಿತಗಳಂತಹ ಸಂದರ್ಭಗಳಲ್ಲಿ ಜನರು ಕೈಗೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದಿಂದ ತಾಲೂಕಿನ ಜನತೆಯಲ್ಲಿ ಜಾಗೃತಿ ಮೂಡಿಸಲಾಯಿತು.
ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನರು ಪ್ರಾಣಾಪಾಯದಿಂದ ತಪ್ಪಿಸಿಕೊಳ್ಳಲು ಮನೆಗಳಲ್ಲಿಯೇ ಇರುವ ದಿನ ಬಳಕೆ ವಸ್ತುಗಳಾದ ಮುಚ್ಚಿದ ಡ್ರಮ್, ಒಣಗಿದ ತೆಂಗಿನಕಾಯಿ, ಖಾಲಿ ನೀರಿನ ಬಾಟಲಿಗಳನ್ನು ಪೋಣಿಸಿಕೊಂಡು ಆಗುವ ಅನಾಹುತಗಳನ್ನು ತಪ್ಪಿಸಬಹುದೆಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ಜನತೆಗೆ ಮನವರಿಕೆ ಮಾಡಿದರು.
ಸರಳುಗಳಡಿ ಸಿಕ್ಕಾಗ...: ಆಳ ಸಮುದ್ರದಲ್ಲಿ ಜನರು ಸಿಲುಕಿಕೊಂಡಾಗ, ಕಟ್ಟಡ ಕುಸಿತಗಳಲ್ಲಿ ಸಿಲುಕಿಕೊಂಡಾಗ, ಅವುಗಳಡಿಯಿಂದ ಜನರನ್ನು ರಕ್ಷಿಸಲು ಕಬ್ಬಿಣದ ಸರಳು ಮತ್ತು ಗೋಡೆಗಳನ್ನು ಕತ್ತರಿಸಲು ಯಂತ್ರಗಳ ಸಹಾಯ ಬಳಸಲಾಗುತ್ತದೆ. ಕಟ್ಟಡದ ಅಡಿಯಲ್ಲಿ ಸಿಲುಕಿ ಮೂಳೆಗಳು ಅಥವಾ ತಲೆಗೆ ಹೆಚ್ಚಿನ ಅನಾಹುತ ಸಂಭವಿಸಿ ರಕ್ತ ಸ್ರಾವ ವಾಗುತ್ತಿದ್ದರೆ ಅವರಿಗೆ ಯಾವ ರೀತಿಯಾಗಿ ಪ್ರಥಮ ಚಿಕಿತ್ಸೆ ನೀಡಬೇಕೆಂಬುದರ ಮಾಹಿತಿ ನೀಡಿದರು.
ಅಣು ಸೋರಿಕೆ, ವಿಷ ಅನಿಲ ಸೋರಿಕೆಯಾದಾಗ ಅದರ ಅನಾಹುತದಿಂದ ತಪ್ಪಿಸಲು ವಿಷವು ಯಾವ ಮಟ್ಟದಲ್ಲಿ ಹರಡಿದೆ ಎಂಬುದರ ಬಗ್ಗೆ ಸುಸಜ್ಜಿತ ಉತ್ತಮ ಯಂತ್ರೋಪಕರಣಗಳಿದ್ದು, ಅವುಗಳ ಸಹಾಯದಿಂದ ಅಲ್ಲಿನ ಪರಿಸರದಲ್ಲಿ ಹರಡಿರುವ ವಿಷ ಅನಿಲವನ್ನು ಪತ್ತೆ ಹಚ್ಚಿ ನಿಯಂತ್ರಣದ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬಹುದೆಂದು ತಿಳಿಸಿದರು. ಸಭೆಯಲ್ಲಿ ಗ್ರೇಡ್-2 ತಹಸೀಲ್ದಾರ್ ಚಂದ್ರಹಾಸ್, ಪ.ಪಂ. ಮುಖ್ಯಾಧಿಕಾರಿ ಮಹಬೂಬ್, ರಕ್ಷಣಾ ಪಡೆ ಸಿಬ್ಬಂದಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.