ಜನಪ್ರತಿನಿಧಿ ಶ್ರೀಸಾಮಾನ್ಯನಿಗೂ ಹತ್ತಿರವಾಗಲಿ
ಕ.ಪ್ರ.ವಾರ್ತೆ ಕಡೂರು ಮೇ 24
ಜನಪ್ರತಿನಿಧಿಯಾದವರು ಜನರ ಕೈಗೆ ಸಿಗುವುದಿಲ್ಲ ಎಂಬ ಅಪವಾದ ತೊಡೆದು ಹಾಕಿ ಜನರಿಗೆ ಹತ್ತಿರವಾಗಬೇಕೆಂಬ ಹಿನ್ನೆಲೆಯಲ್ಲಿ ಹೋಟೆಲುಗಳಲ್ಲಿಯೂ ಶಾಸಕರು ಸಿಗುತ್ತಾರೆಂಬ ಸಂಪ್ರದಾಯ ಆರಂಭಿಸಿದ್ದ ಕೆ.ಎಂ. ಕೃಷ್ಣಮೂರ್ತಿಯವರು ಹಾಕಿದ ಅಂಕಿತವನ್ನು ಕಡೂರು ವಿಧಾನಸಭಾ ಕ್ಷೇತ್ರದ ಶಾಸಕ ವೈ.ಎಸ್.ವಿ. ದತ್ತ ಮುಂದುವರಿಸುತ್ತಿದ್ದಾರೆ.
ಚುನಾವಣೆಗಳಲ್ಲಷ್ಟೇ ಜನರಿಗೆ ಮುಖ ತೋರಿಸಿ ನಂತರ ಕ್ಷೇತ್ರದ ಜನರ ಕಣ್ಣಿನಿಂದ ಮರೆಯಾಗುತ್ತಾರೆ ಎಂಬ ಮಾಮೂಲಿ ಆರೋಪಕ್ಕೆ ಅಪವಾದ ಎಂಬಂತೆ ಕಡೂರು ಕ್ಷೇತ್ರದಲ್ಲಿ ಶಾಸಕರಾಗಿದ್ದ ಕೆ.ಎಂ. ಕೃಷ್ಣಮೂರ್ತಿ ಜನರಿಗೆ ಮತ್ತಷ್ಟು ಹತ್ತಿರವಾಗಿ ಅವರ ಜೊತೆ ಬೆರೆಯುವ ಮೂಲಕ ಕಡೂರಿನ ವಿನಾಯಕ ಹೋಟೆಲಿನಲ್ಲಿ ಭೇಟಿಯಾಗಿ ಸಮಸ್ಯೆ ತಿಳಿದೊಕಂಡು ಜನ ಸಂಪರ್ಕದಲ್ಲಿ ಇರಲು ಪ್ರಯತ್ನಿಸುತ್ತಿದ್ದರು.
ಮುಂದುವರಿದ ಸಂಪ್ರದಾಯ: ಇದೇ ಸಂಪ್ರದಾಯವನ್ನು ಇದೀಗ ಕ್ಷೇತ್ರದ ಶಾಸಕ ವೈ.ಎಸ್.ವಿ. ದತ್ತ ಕೂಡ ಶಾಸಕರಾದ ಕೂಡಲೇ ಜನರಿಂದ ನಾಪತ್ತೆಯಾಗುತ್ತಾರೆ ಎಂಬ ವಿರೋಧಿಗಳ ಟೀಕೆಗೆ ಉತ್ತರಿಸುವಂತೆ ತಮ್ಮ ರಾಜಕೀಯ ಜೀವನ ಕೂಡ ಜನರ ನಡುವೆಯೇ ಆರಂಭವಾಗಿದೆ. ಅದಕ್ಕೆ ತಕ್ಕಂತೆ ನಾನೂ ಕೂಡ ಜನರಿಗೆ ಹತ್ತಿರವಾಗಿ ಜನರ ಸಮಸ್ಯೆ ಕೇಳಿ ಸ್ಪಂದಿಸುವ ಶಾಸಕನಾಗಬೇಕೆಂಬ ಹಿನ್ನೆಲೆಯಲ್ಲಿ ಶಾಸಕರಾದ ಕೂಡಲೇ ನನ್ನ ಸ್ನೇಹಿತನ ಸಂಪ್ರದಾಯವನ್ನು ನಾನು ಮುಂದುವರಿಸುತ್ತಿದ್ದೇನೆ ಎಂದರು.
ಆ ಮೂಲಕ ಶಿವಮೊಗ್ಗ ಬೆಂಗಳೂರು ರಾ.ಹೆ. ಹಾದುಹೋಗುವ ಕಡೂರು ಪಟ್ಟಣದ ವಿನಾಯಕ ಹೋಟೆಲಿನಲ್ಲಿ ತಮ್ಮ ಬೆಂಬಲಿಗರು, ಮುಖಂಡರು, ಅಭಿಮಾನಿಗಳು ಮತ್ತು ಕಾರ್ಯಕರ್ತರೊಂದಿಗೆ ಆಗಮಿಸಿ ಕಾಫಿ ಹೀರುವ ಮೂಲಕ ತಮ್ಮ ಸಂತಸ ಹಂಚಿಕೊಂಡು ಜನರೊಂದಿಗೆ ಕೆಲಕಾಲ ಕಳೆದರು.
ಮಾಯವಾಗುವ ಪ್ರವೃತ್ತಿ ನಿಲ್ಲಲ್ಲಿ: ಈ ಕುರಿತು ಮಾತನಾಡಿ, ಚುನಾವಣೆಯಲ್ಲಿ ಜನರ ಕೈಗೆ ಕಾಲಿಗೆ ಸಿಗುತ್ತಿದ್ದ ರಾಜಕೀಯ ಮುಖಂಡರು ಚುನಾವಣೆ ಮುಗಿದ ಕೂಡಲೇ ಮಾಯವಾಗುವ ಪ್ರವೃತ್ತಿ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ. ಇದು ನಿಲ್ಲಬೇಕು ಎಂದರು.
ಚುನಾವಣೆ ನಂತರ ಗೆದ್ದ ಶಾಸಕರನ್ನು ಕಾಣಲು ಜನ ಸಾಮಾನ್ಯರು ವಿಧಾನಸೌಧ ಅಥವಾ ಐಷಾರಾಮಿ ಹೋಟೆಲುಗಳು ಮತ್ತಿತರ ಕಡೆ ಮಾತ್ರ ಭೇಟಿ ಮಾಡುವ ಸಂಪ್ರದಾಯದ ಆರೋಪವಿರುವ ಕರ್ನಾಟಕದಲ್ಲಿ ಇಂತಹ ಹೊಸ ಸಂಪ್ರದಾಯಗಳಿಗೆ ನಾಂದಿ ಹಾಡಿದಲ್ಲಿ ಜನರೂ ಕೂಡ ಮುಕ್ತವಾಗಿ ಶಾಸಕರ ಬಳಿ ತಮ್ಮ ಕಷ್ಟ ಹೇಳಿಕೊಂಡು ಅಹವಾಲುಗಳನ್ನು ಸಾರ್ವಜನಿಕರ ಸಮ್ಮುಖದಲ್ಲಿಯೇ ಹೇಳಿದಲ್ಲಿ ಅದಕ್ಕೆ ತಕ್ಕ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಜೆಡಿಎಸ್ ನಗರ ಘಟಕದ ಕಾರ್ಯಾಧ್ಯಕ್ಷ ಭಂಡಾರಿ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಗಂಗಾಧರಾನಾಯ್ಕ, ಮುಖಂಡ ಕೆ.ಎಸ್. ತಿಪ್ಪೇಶ್, ವೆಂಕಟೇಶ್, ಪರಮೇಶ್, ಜಿಗಣೇಹಳ್ಳಿ ನೀಲಂಕಂಠಪ್ಪ ಸೇರಿದಂತೆ ಹಲವರು ಇದ್ದರು.
-ಕಡೂರು ಕೃಷ್ಣಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

