ಚಿಕ್ಕಮಗಳೂರು

'ಶಿಕ್ಷಕರಲ್ಲಿ ಪಾಠ ಮಾಡುವ ಬದ್ಧತೆ ಮಾಯ'

Published On :

ಕ.ಪ್ರ.ವಾರ್ತ್ಣೆ ಶಿವಮೊಗ್ಗ ಮೇ 25
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಜ್ಞಾನದಾಹ ಕಡಿಮೆಯಾಗಿದ್ದು, ಇದನ್ನು  ನೀಗಿಸಬೇಕಾದ ಶಿಕ್ಷಕರಲ್ಲಿಯೂ ಜ್ಞಾನದ ಉಗ್ರಾಣವೂ ಖಾಲಿಯಾಗಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಚ್.ಬಿ. ವಾಲೀಕರ್ ವಿಷಾದ ವ್ಯಕ್ತಪಡಿಸಿದರು.
 ನಗರದ ಸಹ್ಯಾದ್ರಿ ಕಾಲೇಜಿನ ಪ್ರೊ. ಸಿಎನ್‌ಆರ್‌ರಾವ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸಹ್ಯಾದ್ರಿ ವಿಜ್ಞಾನ (ಸ್ವಾಯತ್ತ) ಕಾಲೇಜು 4ನೇ ಪದವಿ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಅವರು, ಪಾಠ ಕೇಳುವ ತಾಳ್ಮೆ ವಿದ್ಯಾರ್ಥಿಗಳಲ್ಲಿ, ಪಾಠ ಮಾಡುವ ಬದ್ಧತೆ ಶಿಕ್ಷಕರಲ್ಲಿ ಮಾಯವಾಗಿದೆ. ಶಿಕ್ಷಕರಲ್ಲಿ ಓದುವ ಪ್ರವೃತ್ತಿ ಕಡಿಮೆಯಾಗಿದೆ. ಓದೇ ಇಲ್ಲದೆ ಜ್ಞಾನ ಬೆಳವಣಿಗೆ ಆಗಬೇಕು ಎಂದರೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
 ಮಕ್ಕಳನ್ನು ವಿದ್ಯಾವಂತರು, ಜ್ಞಾನವಂತರನ್ನಾಗಿ ಮಾಡುವಲ್ಲಿ ಪೋಷಕರು, ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ವದ್ದು. ಇದರಲ್ಲಿ ಯಾರೇ ಜವಾಬ್ದಾರಿಯಿಂದ ನುಣುಚಿಕೊಂಡರೂ ಅದರ ಪರಿಣಾಮ ಆಗುವುದು ವಿದ್ಯಾರ್ಥಿಗಳ ಮೇಲೆ. ವಿದ್ಯಾರ್ಥಿಗಳು ಸಮಾಜದ, ದೇಶದ ಆಸ್ತಿಗಳಾಗಬೇಕಾದಲ್ಲಿ ಪೋಷಕರು ಮತ್ತು ಶಿಕ್ಷಕರು ಪ್ರತಿ ಹಂತದಲ್ಲೂ ತಮ್ಮ ಜವಾಬ್ದಾರಿ ಸಮರ್ಪಕವಾಗಿ ನಿರ್ವಹಿಸಬೇಕು. ಜವಾಬ್ದಾರಿ ಮರೆತಲ್ಲಿ ವಿದ್ಯಾರ್ಥಿಗಳು ಆಸ್ತಿಯಾಗದೆ ಸಮಾಜಕ್ಕೆ ಹೊರೆಯಾಗುತ್ತಾರೆ ಎಂದು ಎಚ್ಚರಿಸಿದರು.
 ಇದೇ ವೇಳೆ 47 ವಿದ್ಯಾರ್ಥಿಗಳಿಗೆ ರ್ಯಾಂಕ್ ಮತ್ತು ಐವರು ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು.  ಕುವೆಂಪು ವಿವಿ ಪರೀಕ್ಷಾಂಗ ಕುಲಸಚಿವ ಎಚ್.ಎಸ್. ಭೋಜಾನಾಯ್ಕ್, ಪ್ರಾಂಶುಪಾಲರಾದ ಪ್ರೊ.ಜಿ.ಶಕುಂತಲಾ, ಸಹ್ಯಾದ್ರಿ ಕಾಲೇಜು ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ. ನಾಗಭೂಷಣ ರೆಡ್ಡಿ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.