ಚಿಕ್ಕಮಗಳೂರು

ಟ್ಯಾಂಕರ್, ಬೈಕ್ ಡಿಕ್ಕಿ: ಇಬ್ಬರು ಗಂಭೀರ

Published On :

ನರಸಿಂಹರಾಜಪುರ: ಮುತ್ತಿನಕೊಪ್ಪ ಗ್ರಾಪಂ ಕಚೇರಿ ಎದರು ರಸ್ತೆಯಲ್ಲಿ ಟ್ಯಾಂಕರ್ ಹಾಗೂ ಮೋಟಾರ್ ಬೈಕ್  ಡಿಕ್ಕಿಯಾಗಿ ಮೋಟಾರ್ ಬೈಕ್‌ನ ಇಬ್ಬರು ಸವಾರರಿಗೆ ತೀವ್ರ ಗಾಯವಾದ ಘಟನೆ ಭಾನುವಾರ ಸಂಜೆ ನಡೆದಿದೆ.
 ಭದ್ರಾ ಅಭಯಾರಣ್ಯದ ವಾಚಮನ್‌ಗಳಾದ ಪ್ರದೀಪ್ ಹಾಗೂ ಕಲ್ಯಾಣ ಕುಮಾರ್ ಎಂಬುವರು ನರಸಿಂಹರಾಜಪುರದಿಂದ ಲಕ್ಕವಳ್ಳಿಗೆ ಮೋಟಾರ್ ಬೈಕಿನಲ್ಲಿ ಮರಳಿ ಹೋಗುತ್ತಿದ್ದರು. ಶಿವಮೊಗ್ಗ ಕಡೆಯಿಂದ ಬರುತ್ತಿದ್ದ ಟ್ಯಾಂಕರ್‌ಗೆ ಮೋಟಾರ್ ಬೈಕ್ ಮುತ್ತಿನಕೊಪ್ಪದಲ್ಲಿ ಡಿಕ್ಕಿಯಾಗಿದೆ. ಪ್ರದೀಪ್ ಹಾಗೂ ಕಲ್ಯಾಣ್ ಕುಮಾರ್ ಇಬ್ಬರಿಗೂ ಕಾಲು ತುಂಡಾಗಿದೆ. ತಕ್ಷಣ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ನರಸಿಂಹರಾಜಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.