ಕಾಡಾನೆ ದಾಳಿ: ಜೀಪ್ಶೆಡ್ಗೆ ಹಾನಿ
ಕ.ಪ್ರ. ವಾರ್ತೆ, ಮೂಡಿಗೆರೆ, ಮೇ 30
ತಾಲೂಕಿನ ಬೆಟ್ಟಗೆರೆ ಗ್ರಾಮದ ಪಾರ್ಶ್ವನಾಥ್ ಜೈನ್ ಎಂಬವರ ಮನೆ ಮತ್ತು ಜೀಪ್ಶೆಡ್ ಮೇಲೆ ನಡು ರಾತ್ರಿ ಕಾಡಾನೆ ದಾಳಿ ಮಾಡಿದ್ದು, ಶೆಡ್ ಸಂಪೂರ್ಣ ಜಖಂಗೊಂಡು ಜೀಪ್ಗೆ ಹಾನಿಯಾಗಿದೆ.
ಕಾಡಾನೆ ಕಂಡ ಎರಡು ಸಾಕು ನಾಯಿಗಳು ಬೊಗಳ ತೊಡಗಿದೆ. ಕೋಪಗೊಂಡ ಆನೆ ನಾಯಿಗಳನ್ನು ಅಟ್ಟಿಸಿಕೊಂಡು ನೇರ ಮನೆಯ ಜೀಪ್ಶೆಡ್ಗೆ ನುಗ್ಗಿ ಸಂಪೂರ್ಣವಾಗಿ ದಾಳಿ ಮಾಡಿದ್ದು, ಈ ಸಮಯದಲ್ಲಿ ಮನೆಯಲ್ಲಿದ್ದವರು ಭಯಗೊಂಡು ತಕ್ಷಣ ಅರಣ್ಯ ಇಲಾಖೆಗೆ ತಿಳಿಸಿದ್ದಾರೆ. ಈ ಭಾಗದಲ್ಲಿ ಇತ್ತೀಚೆಗೆ ಆನೆ ಹಾವಳಿ ಮಿತಿಮೀರಿದ್ದು, ಹಗಲಿನಲ್ಲೆ ದಾಳಿ ನಡೆಸುತ್ತಿದೆ.
ಕೆಲವು ದಿನಗಳ ಹಿಂದೆ ಮತದಾನಕ್ಕೆ ತೆರಳುತ್ತಿದ್ದ ಫಲ್ಗುಣಿಯ ನಾಸೀರ್ ಖಾನ್ ಎಂಬವರನ್ನು ತುಳಿದು ಶವವನ್ನು ಮರದಿಂದ ಮುಚ್ಚಿದರೆ ಈ ಹಿಂದೆ ಸಬ್ಬೇನಹಳ್ಳಿ ಸಮೀಪ ರಸ್ತೆಯ ಬದಿಯಲ್ಲಿ ಹೋಗುತ್ತಿದ್ದ ಮಹಿಳೆ ಕಮಲ ಹಾಗೂ ಬೈಕ್ನಲ್ಲಿ ತೆರಳುತ್ತಿದ್ದ ಸವಾರರೊಬ್ಬರ ಮೇಲೆ ಮಾರಣಾಂತಿಕ ದಾಳಿ ಮಾಡಿ ಶಾಶ್ವತ ಅಂಗವೈಕಲ್ಯ ಉಂಟು ಮಾಡಿತ್ತು. ಕೋಳೂರು, ಹಳಿಕೆ, ಜಾರ್ಗಲ್, ಚಕ್ಕಮಕ್ಕಿ, ಗುತ್ತಿಹಳ್ಳಿ, ಕೋಗಿಲೆ ಮುಂತಾದ ಭಾಗಗಳಲ್ಲಿ ಕಾಡಾನೆ ಹಾವಳಿ ಅತಿಯಾಗಿದ್ದು ಜನರು ಸಂಚರಿಸಲು ಹೆದರುತ್ತಿದ್ದಾರೆ. ಈ ಗ್ರಾಮಗಳಲ್ಲಿ ಜನರು ಭೀತಿಯಿಂದ ಜೀವನ ಸಾಗಿಸುವಂತಹ ಪರಿಸ್ಥಿತಿ ಉಂಟಾಗಿದೆ.
ಕಾರ್ಮಿಕರು ತೋಟದತ್ತ ಸುಳಿಯದೆ ವಾಣಿಜ್ಯ ಬೆಳೆಗಳಾದ ಕಾಫಿ, ಕಾಳು ಮೆಣಸು, ಬಾಳೆ, ಏಲಕ್ಕಿ ಮತ್ತು ಬತ್ತದ ಗದ್ದೆಗಳು ಹಾಳು ಬೀಳುವ ಸ್ಥಿತಿ ತಲುಪಿದೆ. ಈ ಗ್ರಾಮದಲ್ಲಿ ಸಂಚರಿಸುತ್ತಿರುವ ನರ ಹಂತಕ ಆನೆಯನ್ನು ಕೂಡಲೇ ಸ್ಥಳಾಂತರಗೊಳಿಸಬೇಕೆಂದು ಸಂಪತ್ ಬೆಟ್ಟಗೆರೆ, ಶಿವು ಫಲ್ಗುಣಿ, ರವಿ ಬಡವಣ ದಿಣ್ಣೆ, ಮನೋಜ್ ಬೆಟ್ಟಗೆರೆ, ಸುಧೀರ್ ಸಬ್ಬೇನಹಳ್ಳಿ, ಅಶೋಕ್ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

