ಚಿಕ್ಕಮಗಳೂರು

ಮಧುಮೇಹ ನಿಯಂತ್ರಣಕ್ಕೆ ಸಮತೋಲನ ಆಹಾರ ಅಗತ್ಯ: ಅಶ್ವಥ್ ಬಾಬು ಅಭಿಮತ

Published On :

ಚಿಕ್ಕಮಗಳೂರು: ಸಮತೋಲನದ ಆಹಾರ ಮತ್ತು ವ್ಯಾಯಾಮ ಉಪಚಾರದಿಂದ ಮಧುಮೇಹ ನಿಯಂತ್ರಿಸಬಹುದೆಂದು ಚಿಕ್ಕಮಗಳೂರು ಡಯಾಬಿಟಿಕ್ ಸೆಂಟರ್ ಮುಖ್ಯಸ್ಥ ಡಾ. ಎಚ್.ಎಸ್. ಅಶ್ವಥ್ ಬಾಬು ಹೇಳಿದ್ದಾರೆ.
 ಚಿಕ್ಕಮಗಳೂರು ರೋಟರಿ ಕಾಫಿಲ್ಯಾಂಡ್ ನಗರದ ಎಂ.ಎಲ್.ವಿ. ರೋಟರಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಧುಮೇಹದ ಉಪಚಾರ ಕುರಿತ ಪವರ್ ಪಾಯಿಂಟ್ನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  
ಮಧುಮೇಹವು ಅಧಿಕ ರಕ್ತ, ಗ್ಲುಕೋಸ್ ಮಟ್ಟಗಳಿರುವ ಗುಣಲಕ್ಷಣಗಳಿಂದ ವ್ಯಕ್ತವಾಗಿರುವ ಒಂದು ರೋಗಸ್ಥಿತಿ.  ದೇಹದಲ್ಲಿರುವ ಮೇದೋಜಿರಕ ಗ್ರಂಥಿ ಎಂಬ ಅಂಗ ರಕ್ತ, ಗ್ಲುಕೋಸ್ ಮಟ್ಟಗಳನ್ನು ನಿಯಂತ್ರಿಸುವ ಇನ್ಸುಲಿನ್ ಉತ್ಪಾದಿಸಲು ಜವಾಬ್ದಾರಿಯಾಗಿರುತ್ತದೆ.
 ಆಹಾರ ಸೇವಿಸಿದಾಗ ದೇಹವು ಅದನ್ನು ವಿಭಜಿಸಿ ಮುಖ್ಯಶಕ್ತಿ ಮೂಲವಾದ ಗ್ಲುಕೋಸ್ನ ರೂಪಕ್ಕೆ ಪರಿವರ್ತಿಸುತ್ತದೆ. ಗ್ಲುಕೋಸ್ನ ಮಟ್ಟ ಹೆಚ್ಚುತ್ತಿದ್ದಂತೆ ದೇಹವು ಮೇದೋಜಿರಕ ಗ್ರಂಥಿಗೆ ಸೂಚನೆಯನ್ನು ನೀಡುತ್ತದೆ ಆಗ ಅದು ಇನ್ಸುಲಿನ್ ಬಿಡುಗಡೆ ಮಾಡುತ್ತದೆ ಎಂದವರು ಹೇಳಿದರು.
 ಮಧುಮೇಹಿಗಳು ಸಿಹಿ ತಿನಿಸು, ಐಸ್ಕ್ರೀಮ್ ಸೇರಿದಂತೆ ಇಷ್ಟಪಡುವ ಯಾವುದೇ ಹಣ್ಣು ತಿಂಡಿಯನ್ನು ಜೀವನಪೂರ್ತಿ ತಿನ್ನಲೇ ಬಾರದೆಂಬ ನಿಯಮವಿಲ್ಲ.
    ಆದರೆ, ರೋಗದ ಲಕ್ಷಣ, ವಯಸ್ಸು ಎತ್ತರ ಮತ್ತು ತೂಕ ಪರಿಗಣಿಸಿ ವೈದ್ಯರು ಸೂಚಿಸುವ ಆಹಾರವನ್ನು ಕ್ಯಾಲರಿಯಲ್ಲಿ ಬೆಳಿಗ್ಗೆ-ಮಧ್ಯಾಹ್ನ-ರಾತ್ರಿ ಸೇವಿಸುವುದು ಉತ್ತಮ.  ವಿಶೇಷ ತಿನಿಸು ಸೇವಿಸಿದಾಗ ಇತರೆ ವ್ಯಂಜನಗಳನ್ನು ಕ್ಯಾಲರಿ ಲೆಕ್ಕಕನುಗುಣವಾಗಿ ಸೇವಿಸಬಹುದು. ಉತ್ತಮ ಗುಣಮಟ್ಟದ ಕಡಿಮೆ ಕ್ಯಾಲರಿ ಇರುವ ಹಣ್ಣು, ತರಕಾರಿ, ಧಾನ್ಯ ಬಳಸುವುದರಿಂದ ದುಷ್ಪರಿಣಾಮಗಳನ್ನು ನಿಯಂತ್ರಿಸಬಹುದೆಂದು ತಿಳಿಸಿದರು.
 ಅಧ್ಯಕ್ಷತೆ ವಹಿಸಿದ್ದ ರೋಟರಿ ಕಾಫಿ ಲ್ಯಾಂಡ್ ಅಧ್ಯಕ್ಷ ನಾಸಿರ್ ಹುಸೇನ್ ಸ್ವಾಗತಿಸಿದರು, ಕಾರ್ಯದರ್ಶಿ ನಾಗೇಂದ್ರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.