ಚಿಕ್ಕಮಗಳೂರು

ರಕ್ಷಣೆ ಕೊಡುವ ಆರಕ್ಷರಿಗೇ ಜೀವ ಭಯ...!

Published On :

ಮೂಡಿಗೆರೆ: ದಿನದ 24 ಗಂಟೆಗಳ ಸಮಯವು ಸಾರ್ವಜನಿಕರಿಗೆ ರಕ್ಷಣೆಯನ್ನು ನೀಡಿ  ಶಾಂತಿಯನ್ನು ಕಾಪಾಡುವ ಪೊಲೀಸರು ಕೊಟ್ಟಿಗೆಹಾರದಲ್ಲಿ ಜೀವ ಭಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
 ಮೂಡಿಗೆರೆಯಿಂದ ಕೇವಲ14 ಕಿ.ಮೀಟರ್ ದೂರದಲ್ಲಿರುವ ಅತಿ ಹೆಚ್ಚು ಗಾಳಿ ಬೀಸುವ ಮತ್ತು ಮಳೆ ಬೀಳುವ ಪ್ರದೇಶವಾಗಿರುವ ಕೊಟ್ಟಿಗೆಹಾರದಲ್ಲಿರುವ ಪೊಲೀಸ್ ಚಕ್ಪೋಸ್ಟ್ನಲ್ಲಿ ಇಂತಹ ಪರಿಸ್ಥಿತಿ ಉಂಟಾಗಿದೆ.
ಬಾಡಿಗೆ ಪಾವತಿಸಿಲ್ಲ: ಪಾತಕಿಗಳು ಬೇರಡೆಯಿಂದ ಅಮಾಯಕ ವ್ಯಕ್ತಿಗಳನ್ನು ಹಾಗೂ ಅಗರ್ಭ ಶ್ರೀಮಂತ ರನ್ನು ಕೊಲೆ ಮಾಡಿ ಹೆಣವನ್ನು ತಂದು ಚಾರ್ಮಾಡಿ ಘಾಟಿಯ ಕಂದಕದಲ್ಲಿ ಬಿಸಾಕಿ ಪರಾರಿಯಾಗುತ್ತಿದ್ದಾರೆ.
 ಇಂತಹ ಪಾತಕಿಗಳ ಮೇಲೆ ಕಣ್ಣಿಡುವ ದೃಷ್ಟಿಯಲ್ಲಿ ಪೊಲೀಸರ ನೇಮಕವನ್ನು ಮಾಡಿ, ಅರಣ್ಯ ತನಿಖಾ ಠಾಣೆಯ ಪಕ್ಕದಲ್ಲಿದ್ದ ಗ್ಯಾರೇಜ್ ಒಂದನ್ನು ಪೊಲೀಸ್ ಚಕ್ಪೋಸ್ಟ್ ಬಾಡಿಗೆ ಪಡೆಯಲಾಯಿತು. ಆದರೆ ಇಲಾಖೆ ಬಾಡಿಗೆಯನ್ನು ಪಾವತಿಸದ ಕಾರಣ. ಗ್ಯಾರೇಜ್ ಮಾಲೀಕ ಪೋಲಿಸ್ ಚಕ್ಪೋಸ್ಟ್ ಖಾಲಿ ಮಾಡಿಸಿ ತನ್ನ ಗ್ಯಾರೆಜನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾನೆ.
ಕುಸಿಯುವ ಭೀತಿ: ಬೀದಿಗೆ ಬಿದ್ದ ಪೊಲೀಸರು ನಂತರ ಆಶ್ರಯ ಪಡೆದಿದ್ದು ಅರಣ್ಯ ಇಲಾಖೆಯ ತನಿಖಾ ಠಾಣೆಯಲ್ಲಿ. ಈ ಅರಣ್ಯ ತನಿಖಾ ಠಾಣೆ ಹಲವಾರು ವರ್ಷಗಳ ಹಿಂದಿನದಾಗಿದ್ದು, ರೀಪು ಪಕಾಸುಗಳು ಗೆದ್ದಲು ಹಿಡಿದಿವೆ. ಮಳೆಯ ನೀರು ಒಳಗೆ ಸೋರುತ್ತಿದ್ದು,  ಯಾವ ಕ್ಷಣದಲ್ಲಾದರೂ ಕುಸಿಯ ಬಹುದಾಗಿದೆ. ಹೊರಗೆ ಬಂದರೆ ಗಾಳಿ ಮಳೆ, ಒಳಗೆ ಕುಸಿಯುವ ಬೀತಿ. ಒಟ್ಟಿನಲಿ ಬಾಣಲೆಯಿಂದ  ಬೆಂಕಿಗೆ ಬಿದ್ದ ಪರಿಸ್ಥಿತಿ ಎದುರಾಗಿದೆ.
 ಸಂಬಂಧ ಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಗಮನ ಹರಿಸದೆ. ಕರ್ತವ್ಯ ಮಾಡುವಂತೆ ಆದೇಶ ನೀಡುತ್ತಿದ್ದಾರೆಯೇ ವಿನಹ ಅವರ ಜೀವದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವುದು ಶೋಚನಿಯ ಸಂಗತಿಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.