ಸಂಪರ್ಕ ರಸ್ತೆಗೆ ಆಗ್ರಹಿಸಿ ಪ್ರತಿಭಟನೆಗೆ ನಿರ್ಧಾರ
ಚಿಕ್ಕಮಗಳೂರು: ರೈಲ್ವೆ ಹಳಿ ಹಾದು ಹೋಗಿರುವ ಎರಡು ಬದಿಗಳಲ್ಲಿ ರೈತರ ಜಮೀನಿಗೆ ಓಡಾಡಲು ರಸ್ತೆ ನಿರ್ಮಿಸಿಕೊಡುವಂತೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಅದುದರಿಂದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಡೂರು- ಚಿಕ್ಕಮಗಳೂರು ನೂತನ ರೈಲು ಮಾರ್ಗದ ಉದ್ಘಾಟನಾ ಸಮಾರಂಭದಂದು ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ಚಿಕ್ಕಮಗಳೂರಿಗೆ ರೈಲು ಓಡಾಡಬೇಕೆಂಬುದು ಈ ಜಿಲ್ಲೆಯ ಜನರ ಕನಸು, ಅದು ನನಸಾಗುವ ಕಾಲ ಹತ್ತಿರ ಬಂದಿರುವುದು ಸಂತಸ ತಂದಿದೆ. ಆದರೆ, ಈ ರೈಲ್ವೆ ಕಾಮಗಾರಿಗಾಗಿ ಜಮೀನು ಕಳೆದುಕೊಂಡವರ ಸಮಸ್ಯೆ ಬಗೆಹರಿಯದಿರುವುದು ನೋವಿನ ಸಂಗತಿ ಎಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎಚ್. ಚಂದ್ರೇಗೌಡ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರೈತರು ತಮ್ಮ ಜಮೀನಿಗೆ ಓಡಾಡಲು, ಜಾನುವಾರು ಹಾಗೂ ಎತ್ತಿನಗಾಡಿ, ಟ್ರ್ಯಾಕ್ಟರ್ಗಳ ಓಡಾಟಕ್ಕೆ ರಸ್ತೆ, ಕಾಲುದಾರಿ, ನೀರು ಹಾಯುವಳಿ, ಕಾಲುವೆಗಳಂತಹ ವ್ಯವಸ್ಥೆಗಳಲ್ಲಿ ಇದ್ದು, ಸಮಪರ್ಕವಾಗಿ ಬಳಕೆಯಾಗುತ್ತಿತ್ತು. ಈ ರೈತರುಗಳ ಜಮೀನಿನ ಮಧ್ಯೆ ರೈಲ್ವೆ ಹಳಿ ಕಾಮಗಾರಿ ನಡೆದಿದ್ದರಿಂದ ಜಮೀನುಗಳು ಇಬ್ಭಾಗವಾಗಿ ಓಡಾಡುವುದೇ ಕಷ್ಟವಾಗಿದೆ. ರಸ್ತೆಗಳು, ನೀರು, ಕಾಲುವೆಗಳೆಲ್ಲದರ ಪಥ ಬದಲಾಗಿರುವುದರಿಂದ ಕೃಷಿ ಬದುಕು ಅಸ್ತವ್ಯಸ್ತವಾಗಿದೆ ಎಂದು ಹೇಳಿದ್ದಾರೆ.
ರೈತರ ಜಮೀನುಗಳ ಮೇಲೆ ಓಡಾಡಲು ಟ್ರ್ಯಾಕ್ಟರ್, ಎತ್ತಿನಗಾಡಿ ಓಡಾಡಲು ಆ ಜಮೀನಿನ ರೈತರನ್ನು ತಡೆಯುತ್ತಿರುವುದು ತೊಡಕಾಗಿದೆ. ಈ ಬಗ್ಗೆ ರೈಲ್ವೆಯ ಹಿರಿಯ ಅಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಿ ರೈಲ್ವೆ ಹಳಿ ಹಾದು ಹೋಗುವ ಎರಡು ಬದಿಗಳಲ್ಲಿ ರೈತರ ಜಮೀನುಗಳಿಗೆ ಹೋಗಿ ಬರಲು ಟ್ರ್ಯಾಕ್ಟರ್, ಎತ್ತಿನಗಾಡಿ ಓಡಾಡುವಷ್ಟು ರಸ್ತೆ ನಿರ್ಮಿಸಿಕೊಡಲು ಮನವಿ ಮಾಡಲಾಗಿತ್ತು.
ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಅದುದರಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

