ಗ್ರಾಮಸ್ಥರ ವಿರುದ್ಧ ಸಚಿವರು ಗರಂ
ಶೃಂಗೇರಿ: ಕೆರೆಕಟ್ಟೆ ಜನಸಂಪರ್ಕ ಸಭೆಯಲ್ಲಿ ಗ್ರಾಮಸ್ಥರು ಸಭೆಯ ಆರಂಭದಿಂದಲೇ ಜಿಲ್ಲಾಧಿಕಾರಿ, ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡು ತರಾಟೆಗೆ ತೆಗೆದುಕೊಳ್ಳಲಾರಂಭಿಸಿದ್ದರು.
ಅರಣ್ಯ ಇಲಾಖೆಯ ಅಧಿಕಾರಿಗಳ ದೌರ್ಜನ್ಯ, ಕಿರುಕುಳದ ಬಗ್ಗೆ ಸಭೆಯ ಗಮನಕ್ಕೆ ತರುತ್ತಿದ್ದಾಗ ಆಕ್ರೋಶಗೊಂಡರು. ತಡವಾಗಿ ಸಭೆಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಅಭಯಚಂದ್ರ ಜೈನ್ ಗ್ರಾಮಸ್ಥರ ಅಹವಾಲುಗಳನ್ನು ಸಾವಧಾನವಾಗಿ ಆಲಿಸುತ್ತಿದ್ದರು.
ಅರಣ್ಯ ಇಲಾಖೆಯ ಕೆಲ ಅಧಿಕಾರಗಳ ದೌರ್ಜನ್ಯದ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದಾದ ಇಡೀ ಸಭೆಯಲ್ಲಿ ಗೊಂದಲಮಯವಾತಾವರಣ ಉಂಟಾಯಿತು. ಜಿಲ್ಲಾಧಿಕಾರಿಗಳು, ಸಂಸದರು ಸಮಾದಾನ ಪಡಿಸಲು ಪ್ರಯತ್ನಿಸಿ ವಿಫಲರಾದರು. ಕೂಡಲೇ ಗ್ರಾಮಸ್ಥರ ವಿರುದ್ಧ ಗರಂ ಆಗಿ ಈ ಸಭೆಗೆ ನಾನೇಕೆ ಬಂದಿರೋದು. ನೀವೇ ಬಗೆಹರಿಸಿಕೊಳ್ಳಿ ಎಂದು ಸಚಿವರು ಆಕ್ರೋಶಗೊಂಡರು. ಆದರೂ ಗ್ರಾಮಸ್ಥರು ತಮ್ಮ ಆಕ್ರೋಶವನ್ನು ಮುಂದುವರೆಸುತ್ತಲೇ ಇದ್ದರು. ಸಭೆಯನ್ನು ಮುಗಿಸಿದರೂ ಗ್ರಾಮಸ್ಥರ ಅಹವಾಲು, ಮನವಿ ಮುಗಿದಿರಲಿಲ್ಲ. ಕೆಲವರು ತಮ್ಮ ಅಹವಾಲು ಹೇಳಿಕೊಳ್ಳಲು ಅವಕಾಶ ಸಿಗದೆ ನಿರಾಶೆಯಿಂದ ಮರಳಬೇಕಾಯಿತು.
ಸಭೆಗೂ ಕರೆಂಟ್ ಕಟ್: ಸಭೆ ಆರಂಭವಾಗುತ್ತಲೇ ವಿದ್ಯುತ್ ಕೈ ಕೊಟ್ಟಿತು. ಸಭೆ ನಿಶಬ್ದಗೊಂಡಾಗ, ಜಿಲ್ಲಾಧಿಕಾರಿಗಳು ಮಾತನಾಡುತ್ತಿರುವಾಗಲೇ ಮೈಕ್ ಕೈ ಕೊಟ್ಟಿದ್ದರಿಂದ ವೇದಿಕೆಯಲ್ಲಿದ್ದವರು ಮೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಲೋಡ್ ಶೆಡ್ಡಿಂಗ್ ಆಗಿದೆ. ಇನ್ನು ಹದಿನೈದು ನಿಮಿಷದಲ್ಲಿ ಕರೆಂಟ್ ಕೊಡುತ್ತೇವೆ ಎಂದಾಗ ಮತ್ತಷ್ಟು ಆಕ್ರೋಶಗೊಂಡು ಇಲ್ಲಿ ಯಾವಾಗಲೂ ಹೀಗೇನಾ ಎಂದಾಗ ಗ್ರಾಮಸ್ಥರು ಧ್ವನಿಗೂಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

