ಚಿಕ್ಕಮಗಳೂರು

'ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಲ್ಲ'

Published On :

ಕ.ಪ್ರ.ವಾರ್ತೆ, ಬೀರೂರು, ನ.13 ಹೆರಿಗೆ ಸಹಜವಾಗಿದ್ದರೆ ತಾಯಿ, ಮಗು ಹೆಚ್ಚು ಆರೋಗ್ಯವಾಗಿರಲು ಸಾಧ್ಯ. ಇದನ್ನು ಅರಿತು ನಡೆದರೆ ಪಕ್ಷವೂ ಸಹ ಆರೋಗ್ಯವಾಗಿರುತ್ತದೆ ಹಾಗಾಗಿ ಕಾಂಗ್ರೆಸ್ ಸರಿದಾರಿಯಲ್ಲಿ ನಡೆದರೆ ಉತ್ತಮ ಎಂದು ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ್ಹೇಳಿದರು.
ಅವರು ತಮ್ಮ ನಿವಾಸದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ನೂತನ ಕಾಂಗ್ರೆಸ್ ಅಧ್ಯಕ್ಷರು ನೀಡಿರುವ ಹೆರಿಗೆ ಸಂದರ್ಭದಲ್ಲಿ ನೋವಾಗುವುದು ಸಹಜ. ಆದರೆ ಮಗುವನು ತೊಟ್ಟಿಲಿಗೆ ಹಾಕಿದ ನಂತರ ಮನೆಯಲ್ಲಿ ಹಬ್ಬದ ವಾತಾವರಣ ಬರುತ್ತದೆ ಎಂಬ ಅಧ್ಯಕ್ಷರ ಬದಲಾವಣೆಯಲ್ಲಿ ಉಂಟಾಗಿರುವ ಭಿನ್ನಾಭಿಪ್ರಾಯ ಕುರಿತ ಹೇಳಿಕೆಗೆ ಪ್ರತಿಕ್ರಿಯಿಸಿ ಮಾತನಾಡಿದರು.
ಆಕಾಂಕ್ಷಿಯಲ್ಲ: ಆಪರೇಶನ್ಗಿಂತ ಮುಂಚೆ ಮಗು ಪಡೆಯುವುದರಿಂದ ಇಬ್ಬರಿಗೂ ನೋವಾಗುತ್ತದೆ. ಆಗ ಮಗುವನ್ನು ಇನ್ ಕ್ಯೂಬೆಟರ್ನಲ್ಲಿ ಬೆಳೆಸಬೇಕಾಗುತ್ತದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ತಾನು ಆಕಾಂಕ್ಷಿಯಲ್ಲ. ಅದಕ್ಕೋಸ್ಕರ ಲಾಬಿ ನಡೆಸುವ ಜಾಯಮಾನವೂ ನನ್ನದಲ್ಲ ಎಂದವರು ಹೇಳಿದರು.
ಪಕ್ಷದಲ್ಲಿ ಎಲ್ಲರೂ ನಿಷ್ಠಾವಂತ ಕಾರ್ಯಕರ್ತರಿದ್ದು, ಉತ್ತಮ ಹೆರಿಗೆ ಮಾಡಿಸಿ ತೊಟ್ಟಿಲಿಗೆ ಹಾಕುವ ಕೆಲಸ ಮಾಡುವುದು ಬಿಟ್ಟು ಬೇರೆ ಕೆಲಸ ಮಾಡುವುದು ಬೇಡ. ಸಹಜ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ಮಾಡಿ ಕಾಂಗ್ರೆಸ್ ಕಾರ್ಯಕರ್ತರಿಗೆ ನೋವುಂಟಾಗದಂತೆ ಮಾಡಲಿ ಎಂದರು.
ಇದೇ 19ರಂದು ಜಿಲ್ಲೆಯ ಚಿಕ್ಕಮಗಳೂರಿಗೆ ರೇಲ್ವೆ ಸೇವೆ ವಿಸ್ತರಣೆಗೊಳ್ಳುತ್ತಿರುವುದು ಕಾಂಗ್ರೆಸ್ ಸರ್ಕಾರದ ಸಾಧನೆ ಕೊಡುಗೆಯಾಗಿದೆ. ಇದೇ ಸಂದರ್ಭದಲ್ಲಿ ಕಡೂರು ರೇಲ್ವೆ ನಿಲ್ದಾಣದ ಕಳಪೆ ಕಾಮಗಾರಿ ಸರಿಪಡಿಸುವಿಕೆ, ಪಾದಾಚಾರಿ ಮೇಲು ಸೇತುವೆ ನಿರ್ಮಾಣ, ಬೀರೂರು ರೇಲ್ವೆ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದರು.
ಇದರ ಜೊತೆ ಕಳೆದ ರೇಲ್ವೆ ಬಜೆಟ್ನಲ್ಲಿ ಘೋಷಿಸಿದಂತೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ಕೈಗೊಳ್ಳಲು ಹಾಗು ವಿಐಪಿ ಲಾಂಜ್ ಹಾಗೂ ಪಾದಾಚಾರಿ ಮೇಲು ಸೇತುವೆ ನಿಮಿಸಿಕೊಡುವಂತೆ ಒತ್ತಾಯಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಇತರೆ ಹಿಂದುಳಿದ ವರ್ಗದ ಕಾರ್ಯದರ್ಶಿ ಯಗಟಿ ಸುರೇಶ್, ಮಹೇಶ್ವರಪ್ಪ ಮೊದಲಾದರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.