ಚಿಕ್ಕಮಗಳೂರು

ಎಂಇಎಸ್ ನಿಷೇಧಕ್ಕೆ ಕರವೇ ಆಗ್ರಹ

Published On :

ಕ.ಪ್ರ.ವಾರ್ತೆ  ಚಿತ್ರದುರ್ಗ   ನ.16
ರಾಜ್ಯದಲ್ಲಿ ಪುನಾ ಪುಂಡಾಟಿಕೆ ಪ್ರಾರಂಭಿಸಿರುವ ಎಂಇಎಸ್ ಸಂಘಟನೆ ನಿಷೇಧಿಸುವಂತೆ ಒತ್ತಾಯಿಸಿ ಶನಿವಾರ ನಗರದಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬೆಳಗಾವಿ ಖಡೇಬಜಾರದಲ್ಲಿ ಅನಧಿಕೃತವಾಗಿ ಸಂಯುಕ್ತ ಮಹಾರಾಷ್ಟ್ರ ಚೌಕ ಎಂದು ನಾಮಫಲಕ ಹಾಕಿ ನಾಡ ದ್ರೋಹ ಕೆಲಸ ಮಾಡಿದೆ. ನಾಮಫಲಕ ತೆರವುಗೊಳಿಸುವ ಸಂದರ್ಭದಲ್ಲಿ ಪೊಲೀಸರ ಮೇಲೆ ದೌರ್ಜನ್ಯ ಎಸಗಲಾಗಿದೆ. ಆದ್ದರಿಂದ ಈ ಕೂಡಲೇ ಎಂಇಎಸ್ ಸಂಘಟನೆ ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ಬೆಳಗಾವಿ ನಮ್ಮದು. ನಮ್ಮ ನಾಡಿನಲ್ಲಿ ನಾಡ ದ್ರೋಹ ಎಸಗುವ ಯಾವುದೇ ವ್ಯಕ್ತಿ, ಸಂಘಟನೆ, ರಾಜಕೀಯ ಪಕ್ಷದ ವಿರುದ್ಧ ಸುಮ್ಮನಿರಬಾರದು.
ಎಂಇಎಸ್ ಸಂಘಟನೆ ಪುಂಡರ ವಿರುದ್ಧ ಗೂಂಡಾ ಕಾಯ್ದೆಯನ್ನು ದಾಖಲಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಅಧ್ಯಕ್ಷ ಕೆ.ಆರ್. ಮಂಜುನಾಥ್, ಗೌರವ ಅಧ್ಯಕ್ಷ ರಮೇಶ್, ಮಹಿಳಾ ಅಧ್ಯಕ್ಷೆ ರೇಖಾ, ಮುಖಂಡರಾದ ಪಿ.ಜಿ. ಗೋವಿಂದರಾಜು, ವಿಜಯಲಕ್ಷ್ಮಿ, ಪಿ. ರಮೇಶ್, ಜಿ. ರಾಜಪ್ಪ, ಚಳ್ಳಕೆರೆ ವೆಂಕಟೇಶ್, ಮಂಜುನಾಥ್, ಗೋಪಿ, ಬಸಣ್ಣ, ಕಾಂತರಾಜ್ ಹುಲಿ, ಟಿ.ಕೆ. ಶಿವಮೂರ್ತಿ, ಜಿ.ಎಸ್. ಲೋಕೇಶ್, ವೆಂಕಟೇಶ್, ಬಿ.ಎಸ್. ಗಜೇಂದ್ರಾಚಾರ್, ಎಸ್.ಬಿ. ಗಣೇಶ್, ಅಕ್ಬರ್, ಚಿದಾನಂದ, ಎ.ಎ. ಅನ್ಸರುಲ್ಲಾ, ರವಿ, ಇಮ್ರಾನ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.