'ಭಾಷೆ ಭಾವನೆ ಪ್ರತಿಬಿಂಬಿಸುತ್ತದೆ'
ತರೀಕೆರೆ: ಭಾಷೆ ಭಾವನೆಯನ್ನು ಪ್ರತಿಬಿಂಬಿಸುತ್ತದೆ ಎಂದು ಭದ್ರಾವತಿ ಉಪನ್ಯಾಸಕಿ ಗಂಗಾಂಬಿಕ ಬಸವರಾಜು ತಿಳಿಸಿದ್ದಾರೆ.
ಮಮತ ಮಹಿಳಾ ಸಮಾಜ ವತಿಯಿಂದ ಸಮಾಜದ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಹಿರಿಯ ರಂಗತಜ್ಞ ಕೆ.ತಿಮ್ಮಣ್ಣ, ನಿವೃತ್ತ ಸಂಗೀತ ಶಿಕ್ಷಕಿ ನಂಜಮ್ಮ ಅವರುಗಳಿಗೆ ಏರ್ಪಾಡಾಗಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಉತ್ತಮ ಸಂಸ್ಕೃತಿ: ಭಾರತೀಯ ಸಂಸ್ಕೃತಿ ವಿಶಾಲವಾಗಿದೆ, ವಿಸ್ತಾರವಾಗಿದೆ, ಕನ್ನಡ ಬಾಷೆ ಸ್ವಂತಿಕೆಯನ್ಮು ಉಳಿಸಿಕೊಂಡಿದೆ, ವಚನಕಾರರು ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ಬಳಸಿಕೊಂಡರು ವಚನಕಾರರು ಕನ್ನಡದ ಮೊದಲ ಹೋರಾಟಗಾರರು, ಉತ್ತಮ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು, ಸಮಾಜಕ್ಕೆ ನಮ್ಮ ಕೊಡುಗೆ ಏನು ಎನ್ನುವುದು ಬಹಳ ಮುಖ್ಯ ಎಂದು ಅವರು ತಿಳಿಸಿದರು.
ಪುರಸಭೆ ಸದಸ್ಯ ಈರಣ್ಣ ಅವರು ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿ, ನೆಹರು ಜನ್ಮ ದಿನಾಚರಣೆಯನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಸಮಾಜಕ್ಕೆ ತಾವು ಎರಡು ಹೊಲಿಗೆ ಯಂತ್ರಗಳನ್ನು ನೀಡುವುದಾಗಿ ತಿಳಿಸಿದರು.
ಸಮಾಜದ ಅಧ್ಯಕ್ಷೆ ಸೌಭಾಗ್ಯಮ್ಮ ಶ್ರೀರಂಗಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿರಿಯ ರಂಗತಜ್ಞ ತಿಮ್ಮಣ್ಣ ಮತ್ತು ನಿವೃತ್ತ ಸಂಗೀತ ಶಿಕ್ಷಕಿ ನಂಜಮ್ಮ ಅವರನ್ನು ಸನ್ಮಾನಿಸಿದರು. ರಂಗತಜ್ಞ ತಿಮ್ಮಣ್ಣ, ನಿವೃತ್ತ ಸಂಗೀತ ಶಿಕ್ಷಕಿ ನಂಜಮ್ಮ, ರಶ್ಮಿರಮೇಶ್, ವರಲಕ್ಷ್ಮಿ, ಶಾರದ ಅಶೋಕ್, ಲಕ್ಷ್ಮೀ ಪ್ರಭಾಕರ್ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

