ನೈತಿಕ ಪ್ರಜ್ಞೆಯಿಂದ ಬದುಕು ಸಾರ್ಥಕ
ಚಿಕ್ಕಮಗಳೂರು: ಬದುಕಿಗೆ ಅರ್ಥ ಬರಬೇಕಾದರೆ ಮಾತನಾಡುವಾಗ, ಕಾರ್ಯಪ್ರವೃತ್ತರಾದಾಗ, ಧರ್ಮಾಚರಣೆಯಲ್ಲಿ, ನೈತಿಕ ಪ್ರಜ್ಞೆಯಿದ್ದು ಅದನ್ನು ರೂಢಿಸಿಕೊಂಡಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದ್ದಾರೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ರಾಜ್ಯೋತ್ಸವ ಆಚರಣೆಯ ಅಂಗವಾಗಿ ನಗರದ ಲಯನ್ಸ್ ಮತ್ತು ಲಯನೆಸ್ ಕ್ಲಬ್ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನೈತಿಕ ಪ್ರಜ್ಞೆ ಸಾರ್ಥಕ ಬದುಕು ಎಂಬ ವಿಷಯ ಕುರಿತು ಅವರು ಮಾತನಾಡಿದರು.
ನೈತಿಕ ಪ್ರಜ್ಞೆ ಇರಬೇಕು: ಪ್ರಾಣಿಗಳು ಹುಟ್ಟುತ್ತವೆ, ಸಾಯುತ್ತವೆ. ಮನುಷ್ಯ ಹುಟ್ಟಿದ ಮೇಲೆ ಯಾವುದೇ ಕಾರ್ಯವಾಗಿರಲಿ ಕೆಲಸ ಮಾಡಿ ಮುಗಿಸುವುದಲ್ಲ. ಅದು ಜನ ಮೆಚ್ಚುವ, ಆತ್ಮ ಮೆಚ್ಚುವ ಕೆಲಸವಾಗಿರಬೇಕು. ನೈತಿಕ ಪ್ರಜ್ಞೆಯಿದ್ದಾಗ ಮಾತ್ರ ಆ ಕಾಯಕ ಸಮಾಜ ಮುಖಿಯಾಗುತ್ತದೆ ಎಂದರು.
ದಿವಂಗತ ಕಾಶಿ ವಿಶ್ವನಾಥ ಶ್ರೇಷ್ಠಿಯವರ ಬದುಕು - ಬರಹದ ಬಗ್ಗೆ ಮಾತನಾಡಿದ ಅವರು, ಶ್ರೀಯುತರು ಹಿಂದಿ ಭಾಷಾ ವಿದ್ವಾನ್ ಆಗಿದ್ದರು. ಸರ್ಕಾರಿ ಪದವಿ ಕಾಲೇಜುಗಳಲ್ಲಿ ರೀಡರ್ ಆಗಿ ನಿವೃತ್ತಿ ಹೊಂದಿದ ಅವರು, ಕಲೆ, ಸಂಸ್ಕೃತಿಗಳನ್ನು ಅಪಾರ ಪಾಂಡಿತ್ಯ ಹೊಂದಿದ್ದರು. ಬುದ್ಧ ಚರಿತ ಮಹಾಮಧು ಮಹಾಕಾವ್ಯ ರಚಿಸಿದ್ದಾರೆ.
ಇವರು ನೈತಿಕ ಪ್ರಜ್ಞೆಯಿಂದ ಬದುಕಿ ಸಾರ್ಥಕ ಜೀವನ ನಡೆಸಿ ಮಾದರಿಯಾಗಿದ್ದಾರೆ ಎಂದು ಹೇಳಿದರು. ಕೆ.ಸಿ. ಚಂದ್ರಶೇಖರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ನಾ.ಸು. ಶಿವಸ್ವಾಮಿಯವರು ತಮ್ಮ ಆಶಯ ಭಾಷಣದಲ್ಲಿ ಕಳೆದ 18 ದಿನಗಳ ಕಾರ್ಯಕ್ರಮಗಳು ಯಶಸ್ವಿ ನಡೆದ ವಿಷಯವನ್ನು ತಿಳಿಸುತ್ತಾ ರಾಜ್ಯೋತ್ಸವ ಮಾಸಾಚರಣೆಯ ಉದ್ದೇಶವನ್ನು ವಿವರಿಸಿದರು.
ಮಹೇಶ್ ಉಪಸ್ಥಿತರಿದ್ದರು. ಲಯನೆಸ್ ಚಂದ್ರಾವತಿ ಸ್ವಾಗತಿಸಿದರು. ಶ್ರೀದೇವಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

