ಚಿಕ್ಕಮಗಳೂರು

ಪರಿವರ್ತನೆಗೆ ಕನಕರ ಕೊಡುಗೆ ಅಪಾರ

Published On :

ಕೊಪ್ಪ: ದಾಸ ಸಾಹಿತ್ಯದ ಅಗ್ರಗಣ್ಯರಾದ ಕನಕದಾಸರು ತಮ್ಮ ವೈವಿಧ್ಯಮಯ, ಸಾಹಿತ್ಯ, ಸರಳತೆ, ವೈರಾಗ್ಯಯುತ ಬದುಕಿನ ಆಶಯದೊಂದಿಗೆ ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದು ತಾಲೂಕು  ಕಸಾಪ ನಿಕಟಪೂರ್ವ ಅಧ್ಯಕ್ಷ ಎಚ್.ಎಂ. ರವಿಕಾಂತ್ ಹೇಳಿದರು.
ಇಲ್ಲಿನ ಪಪಂ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಕನಕ ಜಯಂತಿಯಲ್ಲಿ ಅವರು ಮಾತನಾಡಿದರು. ವಚನ ಸಾಹಿತ್ಯ, ಸಮಾಜದಲ್ಲಿ ಕ್ಷೀಣಿಸುವ ಹಂತದಲ್ಲಿ ಸಮಾಜ ಪರಿವರ್ತನೆಗೆ ಪರಿಣಾಮಕಾರಿ ಕೊಡುಗೆಯನ್ನು ದಾಸ ಸಾಹಿತ್ಯ ನೀಡಿದೆ ಎಂದ ಅವರು ದೇವರು ಮತ್ತು ಭಕ್ತರ ನಡುವಿನ ಅವಿನಾಭಾವ ಸಂಬಂಧವನ್ನು ಕೀರ್ತನೆಗಳ ಮೂಲಕ ಕನಕರು ಅನಾವರಣಗೊಳಿಸಿದ್ದಾರೆ ಎಂದರು.
ತಾಪಂ ಅಧ್ಯಕ್ಷೆ ಪದ್ಮಾವತಿ ರಮೇಶ್ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಶ್ರೀಧರ ಮೂರ್ತಿ ಪಂಡಿತ್, ತಾಪಂ ಉಪಾಧ್ಯಕ್ಷ ಪೂರ್ಣಚಂದ್ರ, ಸದಸ್ಯ ಸುಭದ್ರಮ್ಮ, ಲಲಿತ, ಜಿಪಂ ಸದಸ್ಯ ಸುಚಿತಾ ನರೇಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್, ಇಒ ತೀಪ್ಪೇಶ, ಪಪಂ ಮುಖ್ಯಧಿಕಾರಿ ಶಂಕರಪ್ಪ ಹಾಗೂ ಪಪಂ ಸದಸ್ಯರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.