ಚಿಕ್ಕಮಗಳೂರು

ಬಸ್ಸು ನಿರ್ವಾಹಕ ಆತ್ಮಹತ್ಯೆಗೆ ಯತ್ನ

Published On :

ಮೂಡಿಗೆರೆ: ದಿನಂಪ್ರತಿ ಕರ್ತವ್ಯಕ್ಕೆ ಹಾಜರಾಗುವ ನಿರ್ವಾಹಕ- ಚಾಲಕರೊಬ್ಬರಿಗೆ  ಘಟಕದ ಅಧಿಕಾರಿಗಳು ಹಣಕೊಡುವಂತೆ ಒತ್ತಾಯಿಸಿದ್ದರಿಂದ ಬೇಸತ್ತ ಆತ   ಡೆತ್‌ನೋಟ್ ಬರೆದು ಚಾಲನಾ ಸಮಯದಲ್ಲೇ ನಿದ್ರೆ ಮಾತ್ರೆಗಳನ್ನು ಸೇವಿಸಿ  ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ಮೂಡಿಗೆರೆಯಲ್ಲಿ ನಡೆದಿದೆ.
 ಆತ್ಮಹತ್ಯೆಗೆ ಯತ್ನಿಸಿದ ನಿರ್ವಾಹಕ ಕೇಶವಮೂರ್ತಿಯನ್ನು ಚಾಲಕ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಆತನ ಪರಿಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಚಿಕ್ಕಮಗಳೂರು ಆಸ್ಪತ್ರೆಗೆ ಕಳುಹಿಸಲಾಗಿದೆ.
ಘಟನೆ ವಿವರ: ನ. 19 ರಂದು ಮೂಡಿಗೆರೆ - ಮೈಸೂರ್ ಡಬಲ್ ಡ್ಯೂಟಿ ಮುಗಿಸಿ ಬಂದ ಕೇಶವಮೂರ್ತಿಗೆ ಘಟಕದ ಬಿ.ಟಿ.ಕುಮಾರ್, ಸೀನಪ್ಪ ಮತ್ತು ನಟರಾಜು ಎಂಬುವವರು ಮಾನಸಿಕ ಕಿರುಕುಳ ನೀಡುವುದರೊಂದಿಗೆ ನಿನಗೆ ಕೆಲಸ ಕೊಡುವುದಿಲ್ಲ, ರಾಜಿನಾಮೆ ನೀಡು ಎಂದು ನಿಂದಿಸಿದ್ದಲ್ಲದೆ,  ಮಾಮೂಲಿ ನೀಡಿದಲ್ಲಿ ಮಾತ್ರ ಕೆಲಸಕ್ಕೆ ಬರುವಂತೆ ಸೂಚಿಸಿದ್ದಾರೆ.
 ಈ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂಬ ಡೆತ್‌ನೋಟ್ ಬರೆದು ಕೇಶವಮೂರ್ತಿ ನಿದ್ರೆಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಶಾಸಕರಿಗೆ ದೂರು: ಬುಧವಾರ ಸಂಜೆ ಮೈಸೂರಿನಿಂದ- ಹಾಸನ- ಬೇಲೂರು ಮಾರ್ಗವಾಗಿ ಮೂಡಿಗೆರೆ ಹಿಂದಿರುಗುತ್ತಿದ್ದಾಗ ನಿದ್ರೆಮಾತ್ರೆಗಳನ್ನು ಸೇವಿಸಿದ್ದು. ಮೂಡಿಗೆರೆ ಬಸ್ಸು ನಿಲ್ದಾಣದಲ್ಲಿ ಸಾರ್ವಜನಿಕರನ್ನು ಇಳಿಸಿ ಅಲ್ಲಿಂದ ನೇರವಾಗಿ ಪ್ರವಾಸಿ ಮಂದಿರದಲ್ಲಿ ತಂಗಿದ್ದ ಶಾಸಕ ಬಿ.ಬಿ. ನಿಂಗಯ್ಯ ಅವರನ್ನು ಭೇಟಿ ಮಾಡಿ
ವಿಷಯವನ್ನು ವಿವರಿಸುತ್ತಿರುವಾಗಲೇ ಪ್ರಜ್ಞಾಹೀನರಾಗಿದ್ದಾರೆ. ಕೂಡಲೇ ಅವರನ್ನು ಮೂಡಿಗೆರೆ ಆಸ್ಪತ್ರೆಗೆ ದಾಖಲಿಸಲಾಯಿತು.  ನಿರ್ವಾಹಕ ಕೇಶವಮೂರ್ತಿ ಮದುವೆಯಾಗಿ ಕೇವಲ ಮೂರು ತಿಂಗಳುಗಳಾಗಿದ್ದು, ಈತನ ಸಂಬಳದಿಂದಲೇ ಜೀವನ ಸಾಗಬೇಕಾಗಿದೆ.   ಲಂಚ ನೀಡುವಂತೆ ಒತ್ತಾಯಿಸಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ಮಾಡಿದ ಅಧಿಕಾರಿಗಳ ಕ್ರಮ ಜರುಗಿಸುವಂತೆ ಚಾಲಕರು ಮತ್ತು ನಿರ್ವಾಹಕರು ಒತ್ತಾಯಿಸಿದ್ದರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.