ಚಿಕ್ಕಮಗಳೂರು

ಮಲೆನಾಡಲ್ಲಿ ಒತ್ತುವರಿ: ಹಿರೇಮಠ ಆರೋಪಕ್ಕೆ ವಿರೋಧ

Published On :

ನರಸಿಂಹರಾಜಪುರ: ಸಮಾಜ ಪರಿವರ್ತನ ಸಂಸ್ಥೆಯ ಹಿರೇಮಠ್ ಅವರು ಮಲೆನಾಡು ಭಾಗದ ಒತ್ತುವರಿ ಸಮಸ್ಯೆಯನ್ನು ಬಳ್ಳಾರಿ ಅಕ್ರಮ ಗಣಿಕಾರಿಕೆಗೆ ಹೋಲಿಸಿರುವುದು ಖಂಡನೀಯ ಎಂದು ಕೆಪಿಸಿಸಿ ಕಿಸಾನ್ ಕಾಂಗ್ರೆಸ್ ಉಪಾಧ್ಯಕ್ಷ ಸಚಿನ್ ಮೀಗ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿ, ಪಶ್ಚಿಮ ಘಟ್ಟಗಳಾದ ಚಿಕ್ಕಮಗಳೂರು, ಶಿವಮೊಗ್ಗ, ದ.ಕನ್ನಡ, ಕೊಡಗು, ಹಾಸನ, ಉಡುಪಿ ಜಿಲ್ಲೆಗಳಲ್ಲಿ ಸಣ್ಣ ರೈತರು, ದೊಡ್ಡ ರೈತರು ತಮ್ಮ ಜಮೀನಿನ ಪಕ್ಕದಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಬೆಳೆ ಬೆಳೆದಿದ್ದಾರೆ. ನೂರಾರು ವರ್ಷಗಳ ಹಿಂದೆಯೇ ಈ ಒತ್ತುವರಿ ಮಾಡಿಕೊಂಡು ಅಡಿಕೆ, ಕಾಫಿ ಹಾಗೂ ಇತರೆ ಬೆಳೆಗಳನ್ನು ಬೆಳೆದುಕೊಂಡು ಪರಿಸರ ಸ್ನೇಹಿಯಾಗಿರುತ್ತಾರೆ. ಇದರಲ್ಲಿ ಬಿ.ಪಿ.ಎಲ್.ಕುಟಂಭದವರು ಸಹ ಸೇರಿದ್ದಾರೆ.ಆದರೆ,ಯಾವ ರೈತರು ಪರಿಸರವನ್ನು ಹಾಳು ಮಾಡಿಲ್ಲ ಎಂದು ಅವರು ತಿಳಿಸಿದ್ದಾರೆ.
ಹಿರೇಮಠ ವಾದ ಸುಳ್ಳು: ಆದರೆ, ಸಮಾಜ ಪರಿವರ್ತನ ಸಂಸ್ಥೆಯ ಮುಖ್ಯಸ್ಥ ಹಿರೇಮಠ್ ಅವರು ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಪರಿಸರ ಸಂರಕ್ಷಣೆ ಹೆಸರಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಮಲೆನಾಡು ಭಾಗದ ರೈತರು ಒತ್ತುವರಿ ಮಾಡುವ ಮೂಲಕ ಪರಿಸರ ಹಾಳು ಮಾಡುತ್ತಾರೆ ಎಂಬ ವಾದ ಮಂಡಿಸಿದ್ದಾರೆ. ಇದು ದುರದೃಷ್ಟ ಸಂಗತಿಯಾಗಿದೆ. ಹಿರೇಮಠ್ ಅವರು ಬಳ್ಳಾರಿ ಗಣಿ ವ್ಯವಹಾರಕ್ಕೂ, ಮಲೆನಾಡಿನ ರೈತರ ಒತ್ತುವರಿಗೂ ಇರುವ ವ್ಯತ್ಯಾಸ ತಿಳಿದಿಲ್ಲ. ಈ ಕೇಸು ಉಚ್ಚ ನ್ಯಾಯಾಲಯದ ಮುಂದೆ ಬರಲಿದೆ ಎಂದು ಅವರು ತಿಳಿಸಿದ್ದಾರೆ.
ಹಿರೇಮಠ್ ಅವರು 2013 ರ ಜೂನ್ 28 ರಂದು ಸಲ್ಲಿಸಿದ ಅರ್ಜಿಯ ವಿರುದ್ದ ನಾವು ಇಂಪ್ಲಿಮೆಂಟ್ ಅರ್ಜಿಯನ್ನು ನಮ್ಮ ವಕೀಲರ ಮುಖಾಂತರ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದೇವೆ ಎಂದು ಮೀಗ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.