ಚಿಕ್ಕಮಗಳೂರು

ರೈಲು ನಿಲ್ದಾಣಕ್ಕೆ ವೀಲ್ಚೇರ್ ಕೊಡುಗೆ

Published On :

ಚಿಕ್ಕಮಗಳೂರು: ಜೈನ ಶ್ವೇತಾಂಬರ ತೇರಾಪಂಥ ಮಹಿಳಾ ಮಂಡಳದಿಂದ ಆಚಾರ್ಯ ತುಳಸೀ ಜನ್ಮ ಶತಮಾನೋತ್ಸವದ ಅಂಗವಾಗಿ ವೀಲ್ಚೇರನ್ನು ಚಿಕ್ಕಮಗಳೂರು ರೈಲು ನಿಲ್ದಾಣಕ್ಕೆ ಕೊಡುಗೆ ನೀಡಲಾಯಿತು. ಜಿಲ್ಲಾ ಕೇಂದ್ರಕ್ಕೆ ರೈಲು ಸಂಪರ್ಕ ಬೇಕೆಂಬ ಶತಮಾನಗಳ ಕನಸು ಈಡೇರಿದ್ದು, ಗುರೂಜಿ ಸ್ಮರಣಾರ್ಥ ಸುಮಾರು ರು. 4,000  ಬೆಲೆಯ ವಿಶಿಷ್ಟ ಕುರ್ಚಿಯನ್ನು ವಿಕಲಚೇತನ ಪ್ರಯಾಣಿಕರ ಅನುಕೂಲಕ್ಕಾಗಿ ರೇಲ್ವೆ ಅಧಿಕಾರಿಗಳಿಗೆ ನೀಡುತ್ತಿರುವುದಾಗಿ ಮಹಿಳಾ ಮಂಡಳಿ ಅಧ್ಯಕ್ಷೆ ಮಂಜುಬಾಯಿ ಬನ್ಸಾಲಿ ಈ ಸಂದರ್ಭದಲ್ಲಿ ತಿಳಿಸಿದರು.  ಶಾಸಕ ಸಿ.ಟಿ. ರವಿ, ಕಮಲಾಬಾಯಿ, ಶಕುಂತಲಾ, ಭಾಗ್ಯವತಿ, ಖಜಾಂಚಿ ಚಂದ್ರಾ ಗಾದಿಯಾ, ಗೌತಮಚಂದ್ ಸಿಯಾಲ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.