ಚಿಕ್ಕಮಗಳೂರು

ಅಹಿಂಸೆ ಪ್ರತಿಪಾದಿಸಿದ ಜೈನ ಕವಿಗಳು: ರೇಖಾ

Published On :

ಚಿಕ್ಕಮಗಳೂರು: ಅಹಿಂಸೆ ಪ್ರತಿಪಾದನೆ, ಕೆಟ್ಟವರ ಒಳೆತನ ಮಾತ್ರ ಆರಿಸಿ ಪ್ರಪಂಚಕ್ಕೆ ಕೊಟ್ಟಿರುವುದು ಜೈನ ಕವಿಗಳ ಹಿರಿತನ ಎಂದು ಉಪನ್ಯಾಸಕಿ ರೇಖಾ ನಾಗರಾಜರಾವ್ ಹೇಳಿದ್ದಾರೆ.
ಜೈನಸಂಘ ಹಾಗೂ ಜಿಲ್ಲಾ ಕಸಾಪ ಇತ್ತೀಚೆಗೆ ನಗರದ ತೇರಾಪಂಥ ಭವನದಲ್ಲಿ ಕನ್ನಡ ರಾಜ್ಯೋತ್ಸವ ಮಾಸಾಚರಣೆ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ 'ಕನ್ನಡ ಸಾಹಿತ್ಯಕ್ಕೆ ಜೈನ ಸಾಹಿತ್ಯದ ಕೊಡುಗೆ' ಕುರಿತಂತೆ ಅವರು ವಿಶೇಷ ಉಪನ್ಯಾಸ ನೀಡಿದರು.
ಪ್ರಾಚೀನ ಕನ್ನಡ ಸಾಹಿತ್ಯವನ್ನು ಮೂರು ಪಂಗಡವಾಗಿ ವಿಂಗಡಿಸಲಾಗಿದೆ. ಜೈನ ಸಾಹಿತ್ಯ, ವೀರಶೈವ ಸಾಹಿತ್ಯ ಮತ್ತು ಬ್ರಾಹ್ಮಣ-ವೈಷ್ಣವ ಸಾಹಿತ್ಯ ಪಂಗಡಗಳು ಕಂಡುಬರುತ್ತವೆ. ಕ್ರಿ.ಶ. 5 ರಿಂದ 12ನೇ ಶತಮಾನ ಜೈನರ ಯುಗ. ಅನೇಕ ಪ್ರಮುಖ ಜೈನಕವಿಗಳು ಈ ಕಾಲಘಟ್ಟದಲ್ಲಿ ವಿಶೇಷವಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡರು. ಜೈನ ಸಾಹಿತ್ಯವನ್ನು ಪಂಪ ಪೂರ್ವ, ಪಂಪ ಯುಗ ಮತ್ತು ಪಂಪೋತ್ತರ ಯುಗವೆಂದು ವಿಭಾಗಿಸಲಾಗಿದೆ. ಪಂಪ ಕನ್ನಡದ ಆದಿಕವಿಯಾದರೆ, ಅವರ ತಮ್ಮ ತೆಲುಗಿನ ಆದಿಕವಿ ಎಂಬುದು ಉಲ್ಲೇಖನಿಯ ಎಂದರು.
ಜನ್ನ ಚರ್ತುವಿಧ ಪಂಡಿತ: ಜನ್ನ ಚರ್ತುವಿಧ ಪಂಡಿತ. ಚಾವುಂಡರಾಯ ಕವಿ ಮತ್ತು ಕಲೆಗಳ ಸಂಗಮ. ಬಾಣಭಟ್ಟನ ಕೃತಿಯ ಹೆಸರು ಕಾದಂಬರಿ ನಂತರದ ದಿನಗಳಲ್ಲಿ ಪುಸ್ತಕದ ಹೆಸರೇ ಒಂದು ಪ್ರಾಕಾರವಾಗಿ ಬಳಕೆಯಲ್ಲಿದೆ. ಗದ್ಯವನ್ನು ಪದ್ಯ ರೂಪಕ್ಕೆ ತಂದವನು ನಾಗವರ್ಮ. ಕಂತಿ ಕನ್ನಡದ ಮೊದಲ ಕವಿ. ಕನ್ನಡದ ಮೊದಲ ಕೃತಿ ಎನಿಸಿಕೊಂಡ ಕವಿರಾಜ ಮಾರ್ಗದಲ್ಲಿ ಜೈನ ಪಾರಂಪರಿಕ ಪದಗಳ ವರ್ಣನೆ ಇದೆ. ಕೇಶಿರಾಜನ ಶಾಂತಿಪುರಣ ಮತ್ತು ಪಂಡಿತಯತಿಯ ಚಾರಿತ್ರ್ಯಚಕ್ರೇಶ್ವರ ಮಹತ್ವದ ಕೃತಿ ಎಂದು ಹೇಳಿದರು.
ಜೈನರ ಕೊಡುಗೆ ಅಪಾರ: ಜೈನ ಸಂಘದ ಅಧ್ಯಕ್ಷ ಗೌತಮಚಂದ ಸಿಯಾಲ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಮಾಜದ ವಿವಿಧ ರಂಗಗಳಲ್ಲಿ ಜೈನ ಸಮುದಾಯ ಅಪಾರ ಕೊಡುಗೆ ನೀಡಿದೆ.  ಕನ್ನಡ ಸಾಹಿತ್ಯ  ಪರಂಪರೆಗೆ ಜೈನ ಬರಹಗಾರರ ವೈವಿಧ್ಯಮಯವಾದ ಕೃತಿಗಳು ಹೊಸ ಆಯಾಮವನ್ನೆ ಕಟ್ಟಿಕೊಟ್ಟಿದೆ. ಇತ್ತೀಚಿನ ದಿನಗಳಲ್ಲಿ ಜೈ ಸಾಹಿತ್ಯ ಸ್ಮರಿಸುವ, ಜನರಿಗೆ ಪರಿಚಯಿಸುವ ಕೆಲಸ ವ್ಯಾಪಕವಾಗಿ ನಡೆಯುತ್ತಿದೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ನಾ.ಸು. ಶಿವಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಕೀಲ ದೇವೇಂದ್ರಕುಮಾರ ಜೈನ್, ತಾಲೂಕು ಕಸಾಪ ಅಧ್ಯಕ್ಷ ನಟರಾಜ, ತೇರಾಪಂಥಸಭಾ ಅಧ್ಯಕ್ಷ ತಾರಾಚಂದ ಜೈನ್, ಜೈನ ಸಂಘದ ಕಾರ್ಯದರ್ಶಿ ಭರತಕುಮಾರ್ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.